ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ

ಬಿಟ್​ಕಾಯಿನ್​ ದಂಧೆಯಲ್ಲಿ ಇಬ್ಬರು ಪ್ರಭಾವಿಗಳಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದರೆ, ‘ಹಿಟ್​ ರನ್ ಕೇಸ್ ಆಗಬಾರದು. ಸ್ಪಷ್ಟವಾಗಿ ಮಾತನಾಡಬೇಕು’ ಎಂದು ಸಚಿವ ವಿ.ಸೋಮಣ್ಣ ತಾಕೀತು ಮಾಡಿದ್ದಾರೆ.

ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ವಸತಿ ಸಚಿವ ವಿ.ಸೋಮಣ್ಣ
Follow us
| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2021 | 4:51 PM

ಬೆಂಗಳೂರು: ಕರ್ನಾಟಕದಲ್ಲಿ ಪ್ರಭಾವಿಗಳು ಶಾಮೀಲಾಗಿದ್ದಾರೆ ಎನ್ನಲಾದ ಬಿಟ್​ಕಾಯಿನ್ ದಂಧೆಯ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ವಿ.ಸೋಮಣ್ಣ ನಡುವೆ ಹಗ್ಗಜಗ್ಗಾಟ ನಡೆದಿದೆ. ‘ಬಿಟ್​ಕಾಯಿನ್​ ದಂಧೆಯಲ್ಲಿ ಇಬ್ಬರು ಪ್ರಭಾವಿಗಳಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದರೆ, ‘ಹಿಟ್​ ರನ್ ಕೇಸ್ ಆಗಬಾರದು. ಸ್ಪಷ್ಟವಾಗಿ ಮಾತನಾಡಬೇಕು’ ಎಂದು ಸಚಿವ ವಿ.ಸೋಮಣ್ಣ ತಾಕೀತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಬಿಟ್‌ಕಾಯಿನ್ ದಂಧೆಯಲ್ಲಿ ಇಬ್ಬರು ಪ್ರಭಾವಿಗಳಿದ್ದಾರೆ. ಪ್ರಭಾವಿಗಳಿರುವ ಮಾಹಿತಿ ಇರುವುದರಿಂದ ಹೇಳುತ್ತಿದ್ದೇನೆ. ದಂಧೆಯಲ್ಲಿ ಪ್ರಭಾವಿಗಳು ಇದ್ದರೆ ಕಂಟಕವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಈ ದಂಧೆಯಲ್ಲಿ ರಾಜಕಾರಣಿಗಳಿರುವುದು ಮಾತ್ರ ಸತ್ಯ. ಅದರಲ್ಲಿ ಯಾವ ಪಕ್ಷದವರಿದ್ದಾರೆಂದು ನನಗೆ ಗೊತ್ತಿಲ್ಲ. ಬಿಜೆಪಿಯವರಿದ್ದಾರಾ, ಕಾಂಗ್ರೆಸ್‌ನವರು ಇದ್ದಾರಾ, ಬೇರೆ ಯಾರಿದ್ದಾರೆ ಎಂಬ ಮಾಹಿತಿ ನನಗಿಲ್ಲ. ಆ ರಾಜಕಾರಣಿಗಳು ಯಾರು ಎಂದು ಪತ್ತೆ ಹಚ್ಚಬೇಕಾಗಿದೆ. ಸತ್ಯ ಬಯಲಾಗದಿದ್ದರೆ ಅವರಿಗೆ ರಕ್ಷಣೆ ಕೊಟ್ಟಂತಲ್ಲವೇ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಸತಿ ಸಚಿವ ವಿ.ಸೋಮಣ್ಣ, ಬಿಟ್ ಅಂದ್ರೆ ಏನು ಅಂತ ಆ ಪುಣ್ಯಾತ್ಮರಿಗೆ ಕೇಳಿ ನೋಡಿ. ಬೀಟ್ ಅಂದ್ರೆ ಪೊಲೀಸ್ ಬೀಟ್ ಅಂದುಕೊಂಡಿದ್ದೆ ನಾನು. ಸಿದ್ದರಾಮಯ್ಯನವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಏನು ಬೇಕಾದರೂ ಹೇಳಿಕೆ ಕೊಡಲಿ, ಹಿಟ್ ಅಂಡ್ ರನ್ ಬೇಡ. ಸಿದ್ದರಾಮಯ್ಯ ಮಂತ್ರಿ ಆಗಿದ್ದರು, ನಾನೂ ಮಂತ್ರಿಯಾಗಿದ್ದೆ. ಅದೃಷ್ಟದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಯಾರು ಏನೇ ಮಾತಾಡಲಿ, ಸ್ವಲ್ಪ ಯೋಚಿಸಿ ಮಾತಾಡಲಿ ಎಂದು ಹೇಳಿದರು.

ಇದನ್ನೂ ಓದಿ: ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ? ಇದನ್ನೂ ಓದಿ: ಎಸ್.ಆರ್.ಶ್ರೀನಿವಾಸ್​ ಕಾಂಗ್ರೆಸ್​ಗೆ ಬಂದ್ರೆ ಗುಬ್ಬಿ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿ: ಸಿದ್ದರಾಮಯ್ಯ ಘೋಷಣೆ

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
ನ್ಯಾಯಾಲಯದಲ್ಲಿ ಕಾವೇರಿ ವಿವಾದ ನಾಳೆ ಪುನಃ ವಿಚಾರಣೆಗೆ ಬರಲಿದೆ:ಸಿದ್ದರಾಮಯ್ಯ
ನ್ಯಾಯಾಲಯದಲ್ಲಿ ಕಾವೇರಿ ವಿವಾದ ನಾಳೆ ಪುನಃ ವಿಚಾರಣೆಗೆ ಬರಲಿದೆ:ಸಿದ್ದರಾಮಯ್ಯ
‘ಮುಂಡರಗಿ ಬರಪೀಡಿತ’ ಎಂದು ಘೋಷಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ
‘ಮುಂಡರಗಿ ಬರಪೀಡಿತ’ ಎಂದು ಘೋಷಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ