ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ಗೆ ಬಂದ್ರೆ ಗುಬ್ಬಿ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿ: ಸಿದ್ದರಾಮಯ್ಯ ಘೋಷಣೆ
Siddaramaiah: ಕೈ ಮುಗಿದು ಕೇಳುವೆ ಸರ್ಕಾರವನ್ನ ಓಡಿಸಿ. ಬಿಜೆಪಿ, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರ್ನಾಟಕ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತುಮಕೂರು: ಈ ಸರ್ಕಾರಕ್ಕೆ ಬೆಡ್, ಆಂಬುಲೆನ್ಸ್ ನೀಡಲು ಆಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನರು ಸತ್ತರು. ಬಿಜೆಪಿ ಸರ್ಕಾರ ಕೊಲೆಗಡುಕ ಸರ್ಕಾರ. 2ನೇ ಅಲೆ ಬರುತ್ತೆಂದು ಗೊತ್ತಿದ್ದರೂ ಸಿದ್ಧತೆ ಮಾಡಿರಲಿಲ್ಲ. ಇಂಥಾ ಕೆಟ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲಿ ನೋಡಲಿಲ್ಲ ಎಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ ಅಚ್ಛೇದಿನ್ ಆಯೇಗಾ ಅಂದರು, ಎಲ್ಲಿದೆ ಅಚ್ಚೇದಿನ್? ವಿರೋಧ ಪಕ್ಷದವರು ಮಾತ್ರ ಹೇಳುತ್ತಿದ್ದಾರೆ ಅಂತಾರೆ. ಕೈ ಮುಗಿದು ಕೇಳುವೆ ಸರ್ಕಾರವನ್ನ ಓಡಿಸಿ. ಬಿಜೆಪಿ, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರ್ನಾಟಕ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಾನು ಏನಾದರೂ ಹೇಳಿದರೆ ಹೆಚ್.ಡಿ. ಕುಮಾರಸ್ವಾಮಿ ಜಾತಿಬಣ್ಣ ಕಟ್ಟುತ್ತಾರೆ. ನಾನು ಅಕ್ಕಿ ಕೊಟ್ಟಿದ್ದೆ. ಅದನ್ನು ಒಂದು ಜಾತಿಗೆ ಮಾತ್ರ ನೀಡಿದ್ದೆವಾ? ರಾಜಕಾರಣಕ್ಕಾಗಿ ಜಾತಿ ಬಣ್ಣ ಕಟ್ಟೋದು ಇದು ಎಂದು ವಾಗ್ದಾಳಿ ನಡೆಸಿದ್ದಾರೆ. ಹಸಿವು ನೀಗಿಸಲು 1 ಕೋಟಿ 20 ಲಕ್ಷ ಕುಟುಂಬಗಳಿಗೆ ಅಕ್ಕಿ ಕೊಟ್ಟಿದ್ದೇವೆ. ಉಚಿತ ಅಕ್ಕಿ ನೀಡಿದ ಸರ್ಕಾರ ಇದ್ದರೆ ಅದು ನಮ್ಮ ಸರ್ಕಾರ. ಬಿಜೆಪಿಯವರು ಕೇಂದ್ರ ಸರ್ಕಾರದ ಅಕ್ಕಿ ಅಂತಾರಲ್ಲ. ಹಾಗಾದರೆ, ಗುಜರಾತ್, ಬಿಹಾರ, ಮಧ್ಯಪ್ರದೇಶದಲ್ಲಿ ಯಾಕೆ ಕೊಟ್ಟಿಲ್ಲ. ಕರ್ನಾಟಕದಲ್ಲಿ ಸ್ವರ್ಗ ಅಂತಾರೆ, ಎಲ್ಲಿ ಸ್ವರ್ಗ ನರಕವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ಗೆ ಬಂದ್ರೆ ಅವರೇ ಅಭ್ಯರ್ಥಿ. ಗುಬ್ಬಿ ಕ್ಷೇತ್ರಕ್ಕೆ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಘೋಷಣೆ ಮಾಡಿದ್ದಾರೆ. ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಆಗಿರುವ ಎಸ್.ಆರ್. ಶ್ರೀನಿವಾಸ್ ಸದ್ಯ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ನೆನೆದ ಸಿದ್ದರಾಮಯ್ಯ ನಟ ಪುನೀತ್ ರಾಜ್ಕುಮಾರ್ರದ್ದು ಸಾಯುವ ವಯಸ್ಸಲ್ಲ. ಪುನೀತ್ ಪ್ರತಿಭಾವಂತ ನಟ, ಕಲೆ ರಕ್ತಗತವಾಗಿ ಬಂದಿತ್ತು. ಡಾ.ರಾಜ್ಕುಮಾರ್ ದೇಶ ಕಂಡ ಅತ್ಯಂತ ಶ್ರೇಷ್ಠ ನಟ. ರಾಜ್ಕುಮಾರ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಇತ್ತೀಚೆಗೆ ರಜಿನಿಕಾಂತ್ಗೆ ದಾದಾಸಾಹೇಬ್ ಫಾಲ್ಕೆ ಸಿಕ್ಕಿದೆ. ಸೂಪರ್ಸ್ಟಾರ್ ರಜಿನಿಕಾಂತ್ ಕೂಡ ಕರ್ನಾಟಕದವರೇ. ಡಾ. ರಾಜ್ಕುಮಾರ್ಗಿದ್ದ ಎಲ್ಲಾ ಗುಣಗಳು ಪುನೀತ್ಗಿತ್ತು. ಅಧಿಕಾರ ಬರುತ್ತೆ ಹೋಗುತ್ತೆ, ಯಾವುದೂ ಶಾಶ್ವತವಲ್ಲ. ನಾವು ಗಳಿಸಿದ ಗೌರವ ಮೌಲ್ಯಯುತವಾಗಿರಬೇಕು. ಆ ಮೌಲ್ಯವನ್ನು ರಾಜ್ಕುಮಾರ್, ಅವರ ಕುಟುಂಬ ನೀಡಿತ್ತು. ಚಿಕ್ಕ ವಯಸ್ಸಿನಲ್ಲೇ ಅಪಾರ ಪ್ರೀತಿ ಗಳಿಸಿದ್ದ ನಟ ಪುನೀತ್. 20 ಲಕ್ಷ ಜನರು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನಕ್ಕೆ ಬಂದಿದ್ದ ಬಹಳ ಜನ ಕಣ್ಣೀರಿಟ್ಟಿದ್ದಾರೆ ಎಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಎಸ್ಆರ್ ಶ್ರೀನಿವಾಸ್ ವಾಗ್ದಾಳಿ ತುಮಕೂರಿನಲ್ಲಿ ದೇವೇಗೌಡರ ಸೋಲಿನ ಬಗ್ಗೆ ಪ್ರಸ್ತಾಪಿಸಿದ್ದೀರಿ. ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ದೈವ ಭಕ್ತನಲ್ಲ, ನೀವು ಎಲ್ಲಿಗೆ ಕರೆದರೂ ಬರುತ್ತೇನೆ. ಹೆತ್ತ ತಾಯಿಗೆ ದ್ರೋಹ ಮಾಡುವ ಕೆಲಸ ನಾನು ಮಾಡಲ್ಲ. ನೀನು ಆ ಕೆಲಸ ಮಾಡುತ್ತಿರುವುದು ನಾಚಿಕೆ ಆಗುವುದಿಲ್ಲವಾ ಎಂದು ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಗೆ ಎಸ್.ಆರ್.ಶ್ರೀನಿವಾಸ್ ಸವಾಲ್ ಹಾಕಿದ್ದಾರೆ. ನಾನು ಸೀಮಂತ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿಸಲಿಲ್ಲ. ನನ್ನ ನೀವು ಯಾವ ಊರು ನಾಯಿ ಅನ್ನಲಿಲ್ಲ. ಶಾಸಕ ಸಾ.ರಾ.ಮಹೇಶ್ ಹೇಳಿದರೂ ಮಾತನಾಡಿಸಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಾನು ಕಂಬಳಿ ಹಾಕ್ಕೊಳ್ತೇನೆ, ಮುಸಲ್ಮಾನರ ಟೋಪಿಯನ್ನೂ ಧರಿಸುತ್ತೇನೆ, ಅದನ್ನು ಕೇಳೋದಿಕ್ಕೆ ಸಿಟಿ ರವಿ ಯಾರು? ಸಿದ್ದರಾಮಯ್ಯ
ಇದನ್ನೂ ಓದಿ: ನಮಗೆ ಹಿರಿಯರು, ಆದ್ರೆ ಹೋರಾಟ ಇನ್ನೂ ಯುವಕರಂತೆ: ವಾಟಾಳ್ ನಾಗರಾಜ್ರನ್ನು ಹೊಗಳಿದ ಸಿಎಂ ಬೊಮ್ಮಾಯಿ