ನಾನು ಕಂಬಳಿ ಹಾಕ್ಕೊಳ್ತೇನೆ, ಮುಸಲ್ಮಾನರ ಟೋಪಿಯನ್ನೂ ಧರಿಸುತ್ತೇನೆ, ಅದನ್ನು ಕೇಳೋದಿಕ್ಕೆ ಸಿಟಿ ರವಿ ಯಾರು? ಸಿದ್ದರಾಮಯ್ಯ

ನಾನು ಕಂಬಳಿ ಹಾಕಿಕೊಳ್ಳುತ್ತೇನೆ, ಮುಸಲ್ಮಾನರ ಟೋಪಿಯನ್ನು ಧರಿಸುತ್ತೇನೆ, ಕ್ರಿಶ್ಚಿಯನ್ನರ ಟೋಪಿಯನ್ನೂ ಧರಿಸುತ್ತೇನೆ, ಹಿಂದೂಗಳ ಟೋಪಿಯನ್ನು ಹಾಕಿಕೊಳ್ಳುತ್ತೇನೆ, ಇಲ್ಲವೇ ಗಾಂಧಿ ಟೋಪಿಯನ್ನಾದರೂ ಧರಿಸುತ್ತೇನೆ, ನನ್ನ ಪ್ರಶ್ನಿಸಲು ಸಿಟಿ ರವಿ ಯಾರು,’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿಟಿ ರವಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಬಹಳ ವರ್ಷಗಳಿಂದ ಕೋಳಿ ಜಗಳ ನಡೆಡುಕೊಂಡು ಬಂದಿದೆ. ಸಾಮಾನ್ಯವಾಗಿ ರವಿ ಅವರು ತಮ್ಮ ಟ್ವೀಟ್ಗಳಲ್ಲಿ ಸಿದ್ದರಾಮಯ್ಯನವರ ಕಾಲೆಳೆಯುತ್ತಾರೆ ಮತ್ತು ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸಿದ್ದರಾಮಯ್ಯನವರು ತಮ್ಮ ಎಂದಿನ ಶೈಲಿಯಲ್ಲಿ ಮಾಧ್ಯಮಗಳೆದುರು ಇಲ್ಲವೆ ತಮ್ಮ ಟ್ವೀಟರ್ ಖಾತೆಯಲ್ಲಿ ಉತ್ತರಿಸುತ್ತಾರೆ. ಮುಸ್ಲಿಂ ಸಮುದಾಯದ ಯಾವುದೋ ಒಂದು ಸಾಮಾರಂಭದಲ್ಲಿ ಸಿದ್ದರಾಮಯ್ಯನವರು ಆ ಸಮುದಾಯದ ಟೋಪಿಯನ್ನು ಧರಿಸಿ ಭಾಗವಹಿಸಿರುವ ಫೋಟೋ ಹಾಕಿ, ‘ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?’ ಅಂತ ಸಿ ಟಿ ರವಿ ಮಂಗಳವಾರದಂದು ಟ್ವೀಟ್ ಮಾಡಿದ್ದಾರೆ.

ಅದೇ ಟ್ವೀಟನ್ನು ಈಗ ವಿಜಯಪುರ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರ ಮುಂದೆ ಮಾಧ್ಯಮದವರು ಪ್ರಸ್ತಾಪಿಸಿದಾಗ ಅವರು, ನಾನು ಕಂಬಳಿ ಹಾಕಿಕೊಳ್ಳುತ್ತೇನೆ, ಮುಸಲ್ಮಾನರ ಟೋಪಿಯನ್ನು ಧರಿಸುತ್ತೇನೆ, ಕ್ರಿಶ್ಚಿಯನ್ನರ ಟೋಪಿಯನ್ನೂ ಧರಿಸುತ್ತೇನೆ, ಹಿಂದೂಗಳ ಟೋಪಿಯನ್ನು ಹಾಕಿಕೊಳ್ಳುತ್ತೇನೆ, ಇಲ್ಲವೇ ಗಾಂಧಿ ಟೋಪಿಯನ್ನಾದರೂ ಧರಿಸುತ್ತೇನೆ, ನನ್ನ ಪ್ರಶ್ನಿಸಲು ಇವನ್ಯಾರು,’ ಎಂದು ಪ್ರತಿಕ್ರಿಯಿಸಿದರು.

ಅದಾದ ಬಳಿಕ, ಎಚ್ ಡಿ ಕುಮಾರಸ್ವಾಮಿಯವರು ವಿಧಾನ ಸೌಧದ ಮುಂದೆ ಸಿದ್ದರಾಮಯ್ಯ ಕಂಬಳಿ ನೇಯ್ದು ತೋರಿಸುವಂತೆ ಸವಾಲೆಸೆದಿರುವುದನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ, ‘ನಾನು ಕಂಬಳಿ ನೇಯ್ದಿದ್ದೇನೆ ಅಂತ ಯಾವತ್ತೂ ಹೇಳಿಲ್ಲ, ನಮ್ಮ ಮನೆಯಲ್ಲಿ ಕುರಿ ತುಪ್ಪಳ ಇರುತಿತ್ತು, ಅದನ್ನು ಸಮದಾಯವರಿಗೆ ಕೊಟ್ಟು ಅವರಿಂದ ಕಂಬಳಿ ಪಡೆಯುತ್ತಿದ್ದೆವು. ನಾನು ಕಂಬಳಿ ನೇಯ್ದಿರಿವುದಾಗಿ ಹೇಳಿದರೆ ಅದು ಸುಳ್ಳಾಗುತ್ತದೆ, ಆದರೆ ಕುರಿ ಮೇಯಿಸಿದ್ದೇನೆ,’ ಎಂದು ಹೇಳಿದರು.

ಇದನ್ನೂ ಓದಿ:  Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ

Click on your DTH Provider to Add TV9 Kannada