ಬೆಂಗಳೂರು: ರಾಜಧಾನಿಯ ಉತ್ತರ ಭಾಗ ನಿನ್ನೆ ರಾತ್ರಿ ಬಿದ್ದ ತಣಭೀಕರ ಮಳೆಗೆ ತತ್ತಿಸಿಹೋಗಿದೆ. ಒಂದೆರಡು ಗಂಟೆಗಳಲ್ಲಿ 12 ಸೆಂಮೀ ಮಳೆಯಾಗಿದೆ. ಜನ ದಿಕ್ಕು ತೋಚದಂತಾಗಿದ್ದಾರೆ. ಇನ್ನು ಆರೋಗ್ಯ ಸಂಬಂಧೀ ಸಮಸ್ಯೆಗಳು ಕಾಡತೊಡಗಿವೆ. ಹಾರ್ಟ್ ಪೇಷೆಂಟ್ ರೋಗಿಯೊಬ್ಬರು ತೀವ್ರ ಪರದಾಟ ನಡೆಸಿದ್ದಾರೆ. ವಿದ್ಯಾರಣ್ಯಪುರ ಲ್ಯಾಂಡ್ ಮಾರ್ಕ್ ಅಪಾರ್ಟಮೆಂಟ್ ಜಲಬಂಧನಕ್ಕೀಡಾಗಿದ್ದು, ಅಪಾರ್ಟಮೆಂಟ್ನಲ್ಲಿದ್ದ ಹಾರ್ಟ್ ಪೇಷೆಂಟ್ ರೋಗಿಯೊಬ್ಬರು ಪರದಾಡಿದ್ದಾರೆ. ಅಪಾರ್ಟಮೆಂಟ್ ಅಂಡರ್ ಗ್ರೌಂಡ್ ಜಲಾವೃತವಾಗಿದೆ. ಮನೆಯಿಂದ ಹೊರ ಬರಲು ಸಾಧ್ಯಾಗುತ್ತಿಲ್ಲ. ಡಾಕ್ಟರ್ ಹೆಚ್ಚು ಮೆಟ್ಟಿಲು ಬಳಸಬೇಡಿ ಅಂತಾ ವಾರ್ನ್ ಮಾಡಿದ್ದಾರೆ. ಆದರೆ ಜಲಾವೃತ ಹಿನ್ನೆಲೆ ಲಿಫ್ಟ್ ಬಳಕೆಯಾಗುತ್ತಿಲ್ಲ. ಹಾರ್ಟ್ ಪೇಷೆಂಟ್ಗೆ ಮನೆಯಿಂದ ಹೊರ ಬರಲು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಯಾವುದೇ ಸಹಾಯ ಮಾಡ್ತಿಲ್ಲ. ಅಪಾರ್ಟಮೆಂಟ್ ಗೆ ನುಗ್ಗಿರುವ ನೀರು ಹೊರ ಹಾಕೊದಕ್ಕೆ ಬಿಬಿಎಂಪಿ ಸಿಬ್ಬಂದಿ ಯಾರೂ ಬರ್ತಿಲ್ಲ. ಈ ಪಡಿಪಾಟಲುಗಳಿದ ಬಸವಳಿದ ಲ್ಯಾಂಡ್ ಮಾರ್ಕ್ ಅಪಾರ್ಟಮೆಂಟ್ ಮಂದಿ ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮತ್ತೊಂದೆಡೆ ಕೇಂದ್ರಿಯ ವಿಹಾರಕ್ಕೆ ಆರೋಗ್ಯ ಸಿಬ್ಬಂದಿ ಆಗಮಿಸಿದ್ದು, ಅಪಾರ್ಟಮೆಂಟ್ ಒಳಗಡೆ ಸಿಲುಕಿರೂ ಜನರಿಗೆ ತುರ್ತು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಈಗಾಗಲೆ ಒಳಗಡೆ ಸಿಲುಕಿರೂ ಜನರನ್ನ ಸಿಬ್ಬಂದಿ ಹೊರಗಡೆ ಕರೆದುಕೊಂಡು ಬರ್ತಿದಾರೆ. ಅಗ್ನಿಶಾಮಕ ಮತ್ತು NDRF ಸಿಬ್ಬಂದಿ ರಕ್ಷಣಾ ಕಾರ್ಯದಲಗಲಿ ತೊಡಗಿದ್ದಾರೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ, ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ, ಹುಳ, ಹಪಟೆಗಳು ಮನೆ ಹೊಕ್ಕಿವೆ, ಸಂಡೇ ಹಿನ್ನೆಲೆ ಸಂಜೆವೇಳೆ ಮನೆಯಿಂದ ಹೊರಬಂದಿದ್ದ ಮಂದಿ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರಂ, ಹೆಬ್ಬಾಳ, ಯಲಹಂಕ, ಆನೆಕಲ್ ಹಾಗೂ ಸುತ್ತಮುತ್ತಲಿನ ಲೇಔಟ್‌ಗಳಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದ್ರಲ್ಲೂ ವಿದ್ಯಾರಣ್ಯಪುರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಸುರೀತಿರೋ ಅಕಾಲಿಕ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ನಿನ್ನೆ ಬೆಳಗ್ಗೆ ವೇಳೆಗೆ ಬೆಂಗಳೂರಿಗರಿಗೆ ಸೂರ್ಯನ ದರ್ಶನ ಸಿಕ್ಕಿತ್ತಾದ್ರೂ, ಸಂಜೆ ವೇಳೆಗೆ ಮಳೆರಾಯ ಮತ್ತೆ ಎಂಟ್ರಿಕೊಟ್ಟಿದ್ದ. ಧಾರಾಕಾರ ಮಳೆಯಿಂದ ವಿದ್ಯಾರಣ್ಯಪುರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಮನೆಯಲ್ಲಿದ್ದ ವಸ್ತುಗಳು ನೀರುಪಾಲಾದ್ವು. ಯಲಹಂಕದ ಜಕ್ಕೂರು ರಸ್ತೆ ಜಲಾವೃತವಾದ ಕಾರಣ ಸುರಭಿ ಲೇಔಟ್‌ಗೂ ಮಳೆ ನೀರು ನುಗ್ಗಿದೆ, ರಾಜಕಾಲುವೆ ತುಂಬಿ ರಸ್ತೆಯಲ್ಲೇ ನೀರು ಹರಿದಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ.
Yelahanka, Vidyaranyapura underpasses flooded | ಯಲಹಂಕ, ವಿದ್ಯಾರಣ್ಯಪುರದಲ್ಲಿ ಅಕ್ಷರಶಃ ‘ಜಲ ಪ್ರಳಯ’
Published On - 10:29 am, Mon, 22 November 21