ಪ್ರತಿಭಟನೆ, ಮನವಿ ಎಲ್ಲವೂ ಆಯಿತು, 8 ವರ್ಷದಿಂದ ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ

ಬೆಂಗಳೂರಿನ ರಸ್ತೆಗಳ ದುಸ್ಥಿತಿ ಸಾರ್ವಜನಿಕರ ದೂರುಗಳಿಗೆ ಕಾರಣವಾಗಿದೆ. 8 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿರುವ ರಸ್ತೆಗಳ ಬಗ್ಗೆ ವೈರಲ್ ವಿಡಿಯೋವೊಂದು ವೈರಲ್​ ಆಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ಪಡುತ್ತಿರುವ ತೊಂದರೆಗಳ ಬಗ್ಗೆ ಮನವಿ ಮಾಡಿದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಈ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಭಟನೆ, ಮನವಿ ಎಲ್ಲವೂ ಆಯಿತು, 8 ವರ್ಷದಿಂದ ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ
ವೈರಲ್​ ವಿಡಿಯೋ

Updated on: Oct 21, 2025 | 11:04 AM

ಬೆಂಗಳೂರು, ಅ. 21: ಪ್ರತಿದಿನ ಬೆಂಗಳೂರ ರಸ್ತೆಯದ್ದೇ ದೂರು, (Bangalore Potholes) ಸೋಶಿಯಲ್​ ಮೀಡಿಯಾದಲ್ಲಿ ಬೆಂಗಳೂರು ರಸ್ತೆ ಸಮಸ್ಯೆಯ ಬಗ್ಗೆ ಪೋಸ್ಟ್​ ಮಾಡುವುದೇ ಒಂದು ಕೆಲಸವಾಗಿದೆ. ಜನ ಏನೇ ಮಾಡಿದ್ರು, ಈ ಪೋಸ್ಟ್​, ಕೂಗು, ಅಧಿಕಾರಿಗಳ, ರಾಜಕಾರಣಿಗಳ ಕಿವಿ ಬೀಳುವುದಿಲ್ಲ. ಏಕೆಂದರೆ ಅವರಿಗೆ ಇದನ್ನು ಕೇಳಿ ಕೇಳಿ ಸಾಕಿದೆ. ಅದಕ್ಕೆ ಗಾಂಧೀಜಿಯ ಕೋತಿಗಳಂತೆ ರಸ್ತೆ ಸಮಸ್ಯೆ ಕೇಳುವುದಿಲ್ಲ, ನೋಡುವುದಿಲ್ಲ, ಅದರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಪರಿಸ್ಥಿತಿ. ಇದೀಗ ಮತ್ತೊಂದು ಬೆಂಗಳೂರು ರಸ್ತೆಯ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಇದು ಸ್ವಲ್ಪ ವಿಭಿನ್ನವಾಗಿದೆ. ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ಪ್ರತಿದಿನ ಬಳಸುತ್ತಿದ್ದ ಈ ರಸ್ತೆ ಎಂಟು ವರ್ಷಗಳಿಗೂ ಹೆಚ್ಚು ಕಾಲ ಶೋಚನೀಯ ಸ್ಥಿತಿಯಲ್ಲಿಯೇ ಇದೆ ಎಂದು ನಿವಾಸಿಯೊಬ್ಬರು ಹತಾಶೆಯಿಂದ ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಎಕ್​ಸ್​​​ನಲ್ಲಿ ಹಂಚಿಕೊಂಡಿದ್ದಾರೆ.

ಈ ರಸ್ತೆಗಾಗಿ ಪ್ರತಿಭಟನೆ, ಮನವಿ ಎಲ್ಲವೂ ಆಗಿದೆ. ಆದರೆ ಸರ್ಕಾರ ಈ ಯಾವುದಕ್ಕೂ ತಲೆಬಿಸಿ ಮಾಡಿಕೊಂಡಿಲ್ಲ ಎನ್ನುವುದು ಇವರ ಬೇಸರ. ನಮ್ಮ ಮಕ್ಕಳು ಪ್ರತಿದಿನ ಈ ಗುಂಡಿ ಬಿದ್ದ ರಸ್ತೆಯಲ್ಲೇ ಹೋಗುತ್ತಾರೆ. 8 ವರ್ಷದಲ್ಲಿ ಆಡಳಿತ ಬೇರೆಯಾಗಿದೆ. ಬೇರೆ ಬೇರೆ ಸರ್ಕಾರಗಳು ಬಂತು, ಅದ್ರೂ ಈ ರಸ್ತೆಯಲ್ಲಿ ಯಾವ ಬದಲಾವಣೆಗಳು ಆಗಿಲ್ಲ. ಈ ರಸ್ತೆ ದುರುಸ್ಥಿತಿ ಮಾಡುವಂತೆ ಅನೇಕ ಭಾರೀ ಜನನಾಯಕರನ್ನು ಕೇಳಿದ್ದೇವು ಯಾವುದಕ್ಕೂ ಉತ್ತರ ಇಲ್ಲ. ಇದು ಒಂದು ರೀತಿಯಲ್ಲಿ ನಾಗರಿಕರ ಮನವಿಯನ್ನು ನಿರ್ಲಕ್ಷ್ಯ ಮಾಡಿದಂತೆ ಕಾಣುತ್ತದೆ. ಕಳಪೆ ಮೂಲಸೌಕರ್ಯ, ಅಧಿಕಾರಿಗಳ ಅಸಡ್ಡೆ ಇದಕ್ಕೆ ಕಾರಣ. ಚುನಾವಣೆ ಬಂದಾಗ ಮಾತ್ರ, ರಾಜಕಾರಣಿಗಳು, ಅಧಿಕಾರಿಗಳು ಮನೆಗೆ ಬಂದು ಭರವಸೆ ನೀಡುತ್ತಾರೆ. ಗೆದ್ದ ನಂತರ ನಮ್ಮ ಸಮಸ್ಯೆನ್ನು ಹೇಳಿದ್ರೆ ನಿರ್ಲಕ್ಷ್ಯ ಮಾಡುತ್ತಾರೆ.

ಇದನ್ನೂ ಓದಿ: ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ 

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​:

ನಾವು ಮಾಡುವ ಪ್ರತಿಭಟನೆ, ಮನವಿ, ಕೂಗು ಅವರಿಗೆ ಕೇಳುತ್ತಿಲ್ಲ. ಇದೊಂದು ರಸ್ತೆ ಸಮಸ್ಯೆಯಲ್ಲ ಜನ ಧ್ವನಿಗೆ ಬೆಲೆ ನೀಡದೇ ಕಣ್ಣು ಮುಚ್ಚಿಕೊಂಡು ಕೂತಿರುವ ಅಧಿಕಾರ ವರ್ಗಗಳು. ಕೆಲವೊಂದು ಕಡೆ ಹೋಗಿ ಈ ರಾಜಕೀಯ ನಾಯಕರು, ಭಾಷಣ, ರಿಬನ್​​ ಕಟ್​​​ ಮಾಡುವುದು, ಇದೇ ಕೆಲಸ ಮಾಡುತ್ತಾರೆ. ಆದರೆ ಅಭಿವೃದ್ದಿ ಬಗ್ಗೆ ಅಥವಾ ಇಂತಹ ಸಮಸ್ಯೆಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಇದು ನಮ್ಮ ಸಮಸ್ಯೆ ಮಾತ್ರವಲ್ಲ ಬೆಂಗಳೂರಿನ ಅನೇಕ ಕಡೆ ಇಂತಹ ಸಮಸ್ಯೆಗಳು ಇದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ