AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ

ಬೆಂಗಳೂರಿನಲ್ಲಿ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಅವರನ್ನು 14 ದಿನಗಳ ಕಾಲ 'ಡಿಜಿಟಲ್ ಬಂಧನ'ದಲ್ಲಿ ಇರಿಸಿ, ಮಾನವ ಕಳ್ಳಸಾಗಣೆ ಆರೋಪಗಳ ಬೆದರಿಕೆ ಹಾಕಿ ₹1.62 ಕೋಟಿ ಸುಲಿಗೆ ಮಾಡಲಾಗಿದೆ. ಇಂತಹ ಡಿಜಿಟಲ್ ವಂಚನೆಗಳಿಂದ ಸಾರ್ವಜನಿಕರು ಎಚ್ಚರವಾಗಿರಲು ಇದು ಎಚ್ಚರಿಕೆಯ ಕರೆಗಂಟೆ.

ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 21, 2025 | 10:13 AM

Share

ಬೆಂಗಳೂರು, ಅ.21: ರಾಜ್ಯದಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೈಬರ್​​​ ಕ್ರೈಂಗಳು (Bangalore Cybercrime) ಹೆಚ್ಚಾಗಿದೆ. ಇದೀಗ ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರಿಗೆ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ₹ 1.62 ಕೋಟಿ ವಂಚನೆ ಮಾಡಿದ್ದಾರೆ. ವರದಿಗಳ ಪ್ರಕಾರ ವಂಚನೆಗೆ ಒಳಗಾದ ವ್ಯಕ್ತಿಯನ್ನು 14 ದಿನಗಳ ಕಾಲ “ಡಿಜಿಟಲ್ ಬಂಧನ”ದಲ್ಲಿ ಇರಿಸಲಾಗಿತ್ತು. ಸೆಪ್ಟೆಂಬರ್ 27 ರಂದು ಮಧ್ಯಾಹ್ನ 2:30 ಕ್ಕೆ ಈ ವ್ಯಕ್ತಿಗೆ ಒಂದು ಕರೆ ಬಂದಿತು, ಆ ಕರೆಯಲ್ಲಿ ಪೊಲೀಸ್​ ಎಂದು ಹೇಳಿಕೊಂಡು ಮುಂಬೈನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದಾಗ, ನಿಮ್ಮ ಹೆಸರಿನಲ್ಲಿ ಕೆಲವೊಂದು ದಾಖಲೆಗಳು ಸಿಕ್ಕಿದೆ ಎಂದು ಹೇಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ವಂಚಕನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಮುಂಬೈ ಸೈಬರ್ ಅಪರಾಧ ಇಲಾಖೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಂಚನೆಗೆ ಒಳಗಾಗಿದ್ದ ವ್ಯಕ್ತಿಗೆ ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ವಂಚನೆಗೆ ಒಳಗಾಗಿದ್ದ ವ್ಯಕ್ತಿಗೆ ವೀಡಿಯೊ ಕರೆ ಬಂದಿದ್ದು, ವಿಡಿಯೋ ಕಾಲ್​​​ ಮಾಡಿದ ವ್ಯಕ್ತಿ ನಾನು ಸೈಬರ್ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್ ಕುದ್ಲಿಪ್ ಸಿಂಗ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಎಂದು ಹೇಳಿದ್ದಾನೆ.

ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ

ತನ್ನ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿಡಿಯೋ ಕಾಲ್​​ ಮಾಡಿದ ವ್ಯಕ್ತಿ ಹೇಳಿದ್ದಾನೆ. ಈ ಕಾರಣಕ್ಕೆ ನಿಮ್ಮನ್ನು ಬಂಧನ ಮಾಡಲಾಗುವುದು ಎಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡು ತನ್ನ ಉಳಿತಾಯ ಮತ್ತು ಸ್ಥಿರ ಠೇವಣಿ ವಿವರಗಳನ್ನು ವಂಚಕನೊಂದಿಗೆ ಹಂಚಿಕೊಂಡಿದ್ದಾರೆ. “ನನ್ನ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುವಂತೆ ವಿಡಿಯೋ ಕಾಲ್​​ ಮಾಡಿದ್ದ ವ್ಯಕ್ತಿ ಹೇಳಿದ, ನನ್ನ ಕುಟುಂಬ ಮತ್ತು ನನ್ನನ್ನು ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು, ನನ್ನ ಎಲ್ಲಾ ಎಫ್‌ಡಿ ಹಾಗೂ ಇತರ ಖಾತೆ ಹಣಗಳನ್ನು ಐಸಿಐಸಿಐ ಖಾತೆಗೆ ಹಣವನ್ನು ವರ್ಗಾಯಿಸುವಂತೆ ಹೇಳಿದರು. ಈ ಬಗ್ಗೆ ನಾನು ಕೂಡ ಪ್ರಶ್ನೆ ಮಾಡಿದ್ದೇನೆ. ಯಾಕೆ ಇದನ್ನೆಲ್ಲ ವರ್ಗಾವಣೆ ಮಾಡಬೇಕು ಎಂದು. ಅದಕ್ಕೆ ವಂಚಕ ಇದು ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದೇ ಎಂದು ಪರಿಶೀಲನೆ ಮಾಡಬೇಕಿ ಎಂದು ಹೇಳಿದ್ದಾನೆ. ನಂತರ ಅವರು ನನ್ನಿಂದ ಒಟಿಪಿಗಳನ್ನು ಪಡೆದರು ಮತ್ತು ಸೆಪ್ಟೆಂಬರ್ 29 ಮತ್ತು ಅಕ್ಟೋಬರ್ 10 ರ ನಡುವೆ ₹ 1,62,77,160 ಅನ್ನು ಅವರ ಖಾತೆಗಳಿಗೆ ವರ್ಗಾಯಿಸಿದ್ದಾನೆ” ಎಂದು ವಂಚನೆಗೆ ಒಳಗಾಗಿದ್ದ ವ್ಯಕ್ತಿ ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ