AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್​ ಕಿರಿಕಿರಿ: ಬೆಂಗಳೂರಿನ 103 ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಪ್ಲಾನ್!

ಬೆಂಗಳೂರಿನಲ್ಲಿ ಓಡಾಟ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಟ್ರಾಫಿಕ್​ ದಟ್ಟಣೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಟ್ರಾಫಿಕ್​ ಸಿಗ್ನಲ್​ಗಳ ಬಳಿ ಬಸ್​ ನಿಲ್ದಾಣಗಳಿರುವುದೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ 103 ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲು ಟ್ರಾಫಿಕ್​ ಪೊಲೀಸರು ಹಾಗೂ ಬಿಎಂಟಿಸಿ ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧ ಮಾಡಿದೆ.

ಟ್ರಾಫಿಕ್​ ಕಿರಿಕಿರಿ: ಬೆಂಗಳೂರಿನ 103 ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಪ್ಲಾನ್!
ಬೆಂಗಳೂರಿನ 103 ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಪ್ಲಾನ್
ಭಾವನಾ ಹೆಗಡೆ
|

Updated on: Oct 21, 2025 | 10:52 AM

Share

ಬೆಂಗಳೂರು,ಅಕ್ಟೋಬರ್ 21: ಬೆಂಗಳೂರಿನ ಯಾವುದೇ ದಿಕ್ಕಿಗೆ ಹೋದರೂ ಟ್ರಾಫಿಕ್ (Traffic) ​​ ಕಿರಿಕಿರಿ ಸರ್ವೆಸಾಮಾನ್ಯವಾಗಿದೆ.ಇದಕ್ಕೆ ಹಲವು ಕಾರಣಗಳಿದ್ದು, ಟ್ರಾಫಿಕ್​ ಸಿಗ್ನಲ್​ಗಳ ಬಳಿ ಬಸ್​ ನಿಲ್ದಾಣಗಳಿರುವುದೂ ಪ್ರಮುಖ ಕಾರಣವಾಗಿದೆ. ಹೀಗಾಗಿ ನಗರದ ಎಲ್ಲೆಲ್ಲಿ ಅವೈಜ್ಞಾನಿಕವಾಗಿ, ಅಸಮರ್ಪಕ ಬಸ್​ ನಿಲ್ದಾಣಗಳಿವೆಯೋ ಅವುಗಳನ್ನು ಸ್ಥಳಾಂತರ ಮಾಡಲು ಟ್ರಾಫಿಕ್​ ಪೊಲೀಸರು ಹಾಗೂ ಬಿಎಂಟಿಸಿ ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧ ಮಾಡಿದೆ.

ಟ್ರಾಫಿಕ್​ ಹೆಚ್ಚಳಕ್ಕೆ ಕಾರಣವಾಗುವ ಬಸ್​ ನಿಲ್ದಾಣಗಳು ಶಿಫ್ಟ್​​​​

ಬೆಂಗಳೂರಿನಲ್ಲಿ ಓಡಾಟ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಟ್ರಾಫಿಕ್​ ದಟ್ಟಣೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಹದಗೆಟ್ಟಿರುವ ರಸ್ತೆಗಳು, ರಸ್ತೆ ಗುಂಡಿಗಳು, ಅಡ್ಡಾದಿಡ್ಡಿ ಪಾರ್ಕಿಂಗ್​ ಜೊತೆಗೆ ಟ್ರಾಫಿಕ್​ ಸಿಗ್ನಲ್​ಗಳ ಬಳಿಯೇ ಬಸ್​ ನಿಲ್ದಾಣಗಳಿರುವುದೂ ಕೂಡ ಟ್ರಾಫಿಕ್​ ಜಾಮ್​​ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿಯೇ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ನಡೆಸಿ ಸ್ಥಳಾಂತರ ಮಾಡಬೇಕಾದ 103 ಬಸ್​ ನಿಲ್ದಾಣಗಳ ಪಟ್ಟಿ ಮಾಡಿದ್ದಾರೆ.

ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ

ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಸಾಕ್ಷಿಯಾಗುವ ಸಿಗ್ನಲ್​ಗಳಿಗೆ ಸಮೀಪವಿರುವ 103 ಬಸ್​ ನಿಲ್ದಾಣಗಳನ್ನ ಕನಿಷ್ಠ 50 ಮೀಟರ್​​ಗಳಿಂದ 300 ಮೀಟರ್​ಗಳವರೆಗೂ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಸಮೀಕ್ಷೆಯಲ್ಲಿ ಮನಗಂಡಿದ್ದಾರೆ. ಹೀಗಾಗಿ ಸ್ಥಳಾಂತರ ಮಾಡಿ ಎಂದು ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ, ಎಂ.ಜಿ ರಸ್ತೆ, ಯಲಹಂಕ ಆರ್​ಎಂಜೆಡ್​​, ಈಸ್ಟ್​ ಎಂಡ್​ ಜಂಕ್ಷನ್​, ಐಟಿಪಿಎಲ್​ ಆರ್​ಎಕ್ಸ್​ಡಿಕ್ಸ್​ ಆಸ್ಪತ್ರೆ, ಹೋಫ್​ಫಾರ್ಮ್​​​​ ಜಂಕ್ಷನ್​ ಸೇರಿ 103 ಸ್ಥಳಗಳಲ್ಲಿ ಟ್ರಾಫಿಕ್​ ದಟ್ಟಣೆ ಇಳಿಸುವ ಉದ್ದೇಶವಿದೆ.

ಒಟ್ಟಾರೆ ನಗರದ ಹಲವೆಡೆ ಟ್ರಾಫಿಕ್​​ಗೆ ಅಡ್ಡಿಯಾಗುವ ರೀತಿಯಲ್ಲೇ ಕೆಲ ಬಸ್​ ನಿಲ್ದಾಣಗಳ ನಿರ್ಮಾಣವಾಗಿರುವುದು ನಿಜ. ಬಸ್​​ಗಳು ಒಮ್ಮೆಲೆ ಸಿಗ್ನಲ್​ಗಳ ಬಳಿ ನಿಲುಗಡೆ ಮಾಡಿದರೆ ಕ್ಷಣಾರ್ಧದಲ್ಲಿ ಟ್ರಾಫಿಕ್​ ಉಂಟಾಗಿ, ವಾಹನ ಸವಾರರು ಪರದಾಡುತ್ತಾರೆ. ಇದಕ್ಕೆ ಪರಿಹಾರ ನೀಡುವಂತೆಯೂ ಆಗ್ರಹ ವ್ಯಕ್ತವಾಗಿತ್ತು. ಈಗ ಇವುಗಳ ಸ್ಥಳಾಂತರ ಮಾಡುವಂತೆ ಸಂಚಾರ ಪೊಲೀಸರು ಹಾಗೂ ಬಿಎಂಟಿಸಿ ಮನವಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಪಂದಿಸಬೇಕಿದೆ.

ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ