ಬೆಂಗಳೂರು, ಅಕ್ಟೋಬರ್ 21: ಬೆಂಗಳೂರಿನ (Bengaluru) ಅನೇಕ ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತುನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಅ.21 ರಿಂದ 23ರವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ವಿದ್ಯುತ್ ಕಡಿತ ಪ್ರದೇಶ ಹಾಗೂ ಸಮಯದ ಮಾಹಿತಿ ಇಲ್ಲಿದೆ.
ಓಬಳೇಶ್ ಕಾಲೋನಿ, ರಾಯಪುರ, ಬಿನ್ನಿಪೇಟ್, ಪಾದರಾಯನಪುರ, ಜೆಜೆಆರ್‌ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜನತಾ ಕಾಲೋನಿ, ಶಾಮಣ್ಣ ಗಾರ್ಡನ್, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯ ರಸ್ತೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾರ್ಟ್‌ರಸ್, ಎಸ್‌ಡಿ ಮಠ, ಕಾಟನ್ ಪೇಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಸುಲ್ತಾನ್ ಪೇಟ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್ ಮೆಂಟ್, ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ವಾಗಲಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೊಂದು ಬೆಸ್ಕಾಂ ಪ್ರಕಟಣೆ: ಸೆ 1 ರಿಂದಲೇ ಈ ಕಟ್ಟುನಿಟ್ಟಿನ ನಿಯಮಗಳು ಜಾರಿ
ಸಪ್ತಗಿರಿ ಲೇಔಟ್, ಪಾಪರೆಡ್ಡಿ ಲೇಔಟ್, ಪಾಣತ್ತೂರು ದಿನ್ನೆ, ವಸಂತ ಲೇಔಟ್, ಲಕ್ಷ್ಮೀ ನರಸಿಂಹ ದೇವಸ್ಥಾನ, ಮುನ್ನೇಕೊಳಲ, ಇಸ್ಲಾಂಪುರ, ಎಎಸ್ ಪಾಳ್ಯದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ