Bangalore Water Supply Disruption: ಈ ಪ್ರದೇಶಗಳಲ್ಲಿ ಫೆ. 26 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ; ನಿಮ್ಮ ಏರಿಯಾದ ಹೆಸರಿದೆಯಾ ನೋಡಿ

| Updated By: ನಯನಾ ಎಸ್​ಪಿ

Updated on: Feb 24, 2023 | 12:35 PM

ಬೆಂಗಳೂರಿನಲ್ಲಿ ಭಾನುವಾರ 100ಕ್ಕೂ ಹೆಚ್ಚು ಏರಿಯಾಗಳಲ್ಲಿ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

Bangalore Water Supply Disruption: ಈ ಪ್ರದೇಶಗಳಲ್ಲಿ ಫೆ. 26 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ; ನಿಮ್ಮ ಏರಿಯಾದ ಹೆಸರಿದೆಯಾ ನೋಡಿ
ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
Image Credit source: Hindustan Times
Follow us on

ಬೆಂಗಳೂರು:  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ಭಾನುವಾರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 100 ಕ್ಕೂ ಹೆಚ್ಚು ಏರಿಯಾಗಳಲ್ಲಿ ಪರಿಣಾಮ ಬೀರಲಿವೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ (BMRCL) ಬಳಿಯ ಕೋನೇನ ಅಗ್ರಹಾರ – ನಾಗವಾರದ ನಮ್ಮ ಮೆಟ್ರೋ ಮಾರ್ಗದಲ್ಲಿ ಹಾಕಲಾದ ಕೆಲವು ಪೈಪ್‌ಗಳನ್ನು BWSSB ನವೀಕರಿಸಲು ಮತ್ತು ಸ್ಥಳಾಂತರಿಸಿ, ಹೊಸ ಪೈಪ್‌ಗಳನ್ನು ನೀರು ಸರಬರಾಜು ಮಾರ್ಗದ ಜಾಲಕ್ಕೆ ಜೋಡಿಸುವ ಕೆಲಸ ಮಾಡುತ್ತದೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗದ ಅಂಡರ್ ಗ್ರೌಂಡ್ ಟನೆಲ್ ಕಾಮಗಾರಿ ನಡೆಯುತಿದ್ದ ಕಾರಣ ಕಳೆದ ತಿಂಗಳು ಬ್ರಿಗೇಡ್ ರಸ್ತೆಯಲ್ಲಿ ಬೃಹತ್ ಹೊಂಡ ಕಾಣಿಸಿಕೊಂಡಿತ್ತು. ಈ ಗುಂಡಿಯನ್ನು ತಪ್ಪಿಸಲು ಯತ್ನಿಸಿದ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳೂ ಆಗಿತ್ತು. ಈ ಘಟನೆಯ ಬಳಿಕ ಇದೀಗ BWSSB ಅವರು ಈ ಮಾರ್ಗದಲ್ಲಿ ಕಾಮಗಾರಿಯನ್ನು ಮಾಡಲು ಮುಂದಾಗಿದ್ದಾರೆ.

ಭಾನುವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: 9 ವರ್ಷಗಳಿಂದ 27 ಸಾವಿರ ಪರಭಾಷಿಗರಿಗೆ ಕನ್ನಡ ಕಲಿಸಿದ “ಕನ್ನಡ ಗೊತ್ತಿಲ್ಲ” ತಂಡ

ಎಲ್ಲೆಲ್ಲಿ ಕಾವೇರಿ ನೀರಿನ ಪೂರೈಕೆ ಇರುವುದಿಲ್ಲ?

ಎಂ.ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಶಾಂತಿನಗರ, ನೇತಾಜಿ ನಗರ, ಕೆಪಿ ಅಗ್ರಹಾರ, ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಚಾಮರಾಜಪೇಟೆ, ಆದರ್ಶ ನಗರ, ಅಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ, ಬಸವನಗುಡಿ, ಶಾಸ್ತ್ರೀ ನಗರ, ಎನ್.ಆರ್ ಕಾಲೋನಿ, ಬನಶಂಕರಿ ಫಸ್ಟ್ ಸ್ಟೇಜ್, ಇಸ್ರೋ ಲೇಔಟ್, ಶ್ರೀನಗರ, ಕುಮಾರಸ್ವಾಮಿ ಲೇಔಟ್ ಕೆಲವು ಭಾಗಗಳು, ಶಾಂತಲಾ ನಗರ, ಶಾಂತಿನಗರ, ಆನೆಪಾಳ್ಯ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್ಮಂಡ್ ಟೌನ್, ವಿಕ್ಟೋರಿಯಾ ಲೇಔಟ್, ದೊಮಲೂರು, ಕಮಾಂಡ್ ಹಾಸ್ಪಿಟಲ್, ಹಾಲ್ II ಸ್ಟೇಜ್, ಅಮರಜ್ಯೋತಿ ಲೇಔಟ್, ಕೋಡಿಹಳ್ಳಿ, ಗಂಗಾಧರ್ ಚೆಟ್ಟಿ ರೋಡ್, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಜ್ ಲೇಔಟ್, ಗೌತಮಪುರ, ಕೆಆರ್ ಗಾರ್ಡನ್, ಕಲಾಸಿಪಾಳ್ಯ, ಜಯನಗರದ ಕೆಲವು ಭಾಗಗಳು, ತಿಲಕ್ ನಗರ, ಆಡುಗೋಡಿ, ಎಸ್.ಜಿ ಪಾಳ್ಯ, ಬೃಂದಾವನ್ ನಗರ, ಮಾರುತಿ ನಗರ ಮತ್ತು ಜೀವನ್ ಬಿಮಾ ನಗರ.

 

Published On - 12:33 pm, Fri, 24 February 23