ನಾನು ಕಾಲೇಜಿನಲ್ಲಿದ್ದಾಗ ವಿಧಾನಸೌಧ ನೋಡಬೇಕು ಅಂತಾ ಅನ್ನಿಸಿತ್ತು: ಸದನದಲ್ಲಿ ಕಾಲೇಜ್ ಲೈಫ್ ಮೆಲುಕು ಹಾಕಿದ ಆರಗ ಜ್ಞಾನೇಂದ್ರ

ಇಂದು ವಿಧಾನಸಭೆ ಕಲಾಪದ ಕೊನೆಯ ದಿನವಾಗಿದ್ದು, ಸದನದಲ್ಲಿ ಮಾತನಾಡುತ್ತಾ ಗೃಹಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸೌಧಕ್ಕೆ ಪ್ರವೇಶಿಸುವ ಬಗ್ಗೆ ತಮ್ಮ ಕಾಲೇಜು ಜೀವನದಲ್ಲಿ ಚಿಂತಿಸಿದ್ದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾನು ಕಾಲೇಜಿನಲ್ಲಿದ್ದಾಗ ವಿಧಾನಸೌಧ ನೋಡಬೇಕು ಅಂತಾ ಅನ್ನಿಸಿತ್ತು: ಸದನದಲ್ಲಿ ಕಾಲೇಜ್ ಲೈಫ್ ಮೆಲುಕು ಹಾಕಿದ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us
Rakesh Nayak Manchi
|

Updated on:Feb 24, 2023 | 3:22 PM

ವಿಧಾನಸಭೆ: ನಾನು ಕಾಲೇಜಿನಲ್ಲಿದ್ದಾಗ ವಿಧಾನಸೌಧ (Vidhana Soudha) ನೋಡಬೇಕು ಅಂತಾ ಅನ್ನಿಸಿತ್ತು. ನಮ್ಮನ್ನು ಒಂದು ದಿನ ಸದನಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಾನು ನಮ್ಮ ಶಾಸಕರ ಕುರ್ಚಿ ಯಾವುದು ಅಂತ ಕೇಳಿದೆ. ಅದರಂತೆ ತೋರಿಸಿದಾಗ ನಾನು ಕುರ್ಚಿಗೆ ನಮಸ್ಕಾರ ಹಾಕಿದ್ದೆ. ಈಗ ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಈ ಸದನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ವಿಧಾನಸಭೆಯ (Karnataka Legislative Assembly) ಕಲಾಪದ ಕೊನೆಯ ದಿನವಾದ ಇಂದು ಮಾತನಾಡಿದ ಅವರು, ಈ ಅವಧಿಯಲ್ಲಿ ಏನೂ ಆಗುವುದಿಲ್ಲ ಅಂತಾ ನಾನು ಅಂದುಕೊಂಡಿದ್ದೆ. ಆದರೆ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಅತ್ಯಂತ ಯಶಸ್ವಿಯಾಗಿ ನಾನು ಗೃಹ ಖಾತೆಯನ್ನು ನಿಭಾಯಿಸಿದ್ದೇನೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನನ್ನು ವೈಯಕ್ತಿಕವಾಗಿ ಪ್ರೀತಿ ಮಾಡಿದರು. ಆದರೆ ಖಾತೆಯನ್ನು ಟೀಕೆ ಮಾಡಿದರು. ನೀನು ಒಳ್ಳೆಯವನು, ಆದರೆ ಈ ಖಾತೆಗೆ ನೀನು ಅಸಮರ್ಥ ಎಂದಿದ್ದರು. ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ, ಏನು ಮಾಡಲು ಆಗುವುದಿಲ್ಲ. ಕಾನೂನು ಸಚಿವರು ಒಂದು ರೀತಿ ಆಪದ್ಬಾಂಧವ. ಸಮಸ್ಯೆ ಎದುರಾದಾಗ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬಗೆಹರಿಸಿದ್ದಾರೆ ಎಂದರು.

ಇದನ್ನೂ ಓದಿ: ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು: ಗೋವಿಂದರಾಜು ಪ್ರಶ್ನೆಗೆ ಆರಗ ಜ್ಞಾನೇಂದ್ರ ಉತ್ತರ

ಚಿಕ್ಕಮಗಳೂರು ಉಸ್ತುವಾರಿಯಾದಾಗ ಕೊಪ್ಪ ಸ್ಥಿತಿ ವೀಕ್ಷಣೆಗೆ ಹೋಗಿದ್ದೆ. ಹೆಚ್ಚಿನ ವಾಹನಗಳು ಬಂದಿದ್ದವು, ನನಗೆ ಒಮ್ಮೆ ಗಾಬರಿಯಾಯ್ತು. ಯಾಕೆ ಇಷ್ಟೊಂದು ವಾಹನಗಳು ಬಂದಿವೆ ಅಂತಾ ನಾನು ಕೇಳಿದ್ದೆ. ಆಗ ಇಂದಿನಿಂದ ನೀವು ಗೃಹಮಂತ್ರಿ ಅಂತಾ ಎಸ್​ಪಿಯವರು ಹೇಳಿದ್ದರು. ಗೃಹ ಇಲಾಖೆ ಖಾತೆ ಬೇಕಿತ್ತಾ ಅಂತಾ ನನಗೆ ಅನೇಕರು ಕೇಳಿದರು. ಆದರೆ ಅತ್ಯಂತ ಯಶಸ್ವಿಯಾಗಿ ನಾನು ಈ ಖಾತೆ ನಿಭಾಯಿಸಿದ್ದೇನೆ ಎಂದರು.

ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿದಾಯ ಭಾಷಣ ಮಾಡಿದರು. ಈ ಬಗ್ಗೆ ಮಾತನಾಡಿದ ಗೃಹಸಚಿವರು, ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲುವುದಿಲ್ಲ ಅಂತ ಹೇಳಿದ್ದಾರೆ. ಇದು ನಮ್ಮ ಆತಂಕವಾಗಿದೆ. ಅವರೆಲ್ಲಾ ಗೆದ್ದು ಮತ್ತೆ ಬರಬೇಕು ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Fri, 24 February 23

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?