ಕಾಂಬೋಡಿಯಾದಲ್ಲಿ ಸಿಲುಕಿರುವ ತೀರ್ಥಹಳ್ಳಿಯ ಕಿರಣ್ ಶೆಟ್ಟಿ; ತವರಿಗೆ ಕರೆಸಿಕೊಳ್ಳಲು ಆರಗ ಜ್ಞಾನೇಂದ್ರ ಕ್ರಮ

ತೀರ್ಥಹಳ್ಳಿಯ ಸಾಫ್ಟ್​ವೇರ್ ಎಂಜಿನಿಯರ್ ಕಿರಣ್ ಶೆಟ್ಟಿ ಅವರು ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಕಾಂಬೋಡಿಯಾದಲ್ಲಿ ಬಂಧಿಯಾಗಿರವುದು ಬೆಳಕಿಗೆ ಬಂದಿದೆ. ಅವರನ್ನು ತವರಿಗೆ ಕರೆಸಿಕೊಳ್ಳುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ.

ಕಾಂಬೋಡಿಯಾದಲ್ಲಿ ಸಿಲುಕಿರುವ ತೀರ್ಥಹಳ್ಳಿಯ ಕಿರಣ್ ಶೆಟ್ಟಿ; ತವರಿಗೆ ಕರೆಸಿಕೊಳ್ಳಲು ಆರಗ ಜ್ಞಾನೇಂದ್ರ ಕ್ರಮ
ಆರಗ ಜ್ಞಾನೇಂದ್ರ, ಗೃಹ ಸಚಿವರು
Follow us
Ganapathi Sharma
|

Updated on: Feb 18, 2023 | 11:21 AM

ಬೆಂಗಳೂರು: ತೀರ್ಥಹಳ್ಳಿಯ (Thirthahalli) ಸಾಫ್ಟ್​ವೇರ್ ಎಂಜಿನಿಯರ್ ಕಿರಣ್ ಶೆಟ್ಟಿ ಅವರು ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಕಾಂಬೋಡಿಯಾದಲ್ಲಿ ಬಂಧಿಯಾಗಿರವುದು ಬೆಳಕಿಗೆ ಬಂದಿದೆ. ಅವರನ್ನು ತವರಿಗೆ ಕರೆಸಿಕೊಳ್ಳುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಕಿರಣ್ ಶಿಟ್ಟಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಬಗ್ಗೆ ಆರಗ ಅವರು ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಥಾಯ್ಲೆಂಡ್​​​ನಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವುದಾಗಿ ನೇಮಕಾತಿ ಏಜೆನ್ಸಿ ಆಮಿಷ ಒಡ್ಡಿತ್ತು. ಅದರಂತೆ ಕಿರಣ್ ಶೆಟ್ಟಿ ತೆರಳಿದ್ದರು. ಸದ್ಯ ಅವರು ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ.

ಕೇಂದ್ರ ಸಚಿವರ ಜತೆಗೂ ಜ್ಞಾನೇಂದ್ರ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ ಅವರ ಕಚೇರಿ ಜತೆ ಸಂಪರ್ಕಿಸಿ ಬಿಡುಗಡೆ ಕುರಿತು ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಜತೆಗೆ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಇಂಜಿನಿಯರ್ ಸುರಕ್ಷಿತ ವಾಪಸಾತಿ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರುವ ಮೊದಲ ವಿಮಾನ ಪ್ರಧಾನಿ ಮೋದಿಯವರದ್ದು; ಸಂಸದ ಬಿ ವೈ ರಾಘವೇಂದ್ರ

ಕಿರಣ್ ಶೆಟ್ಟಿ ಅವರನ್ನು ಕರೆಸಿಕೊಳ್ಳಬೇಕೆಂದು ಅವರ ಸಹೋದರ ಪವನ್ ಶೆಟ್ಟಿ ಗೃಹ ಸಚಿವರಿಗೆ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ವಾಪಸಾತಿಗಾಗಿ ಅವರ ಪತ್ನಿ ನಾಲ್ಕು ತಿಂಗಳ ಮಗು ಹಾಗೂ ಕುಟುಂಬದವರ ಜತೆ ತೀರ್ಥಹಳ್ಳಿಯಲ್ಲಿ ಕಾಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ