ಬಾಲಕಿ ಹತ್ಯೆ ಕೇಸ್​​: ಆರೋಪಿಗೂ 2ನೇ ಮದುವೆ, ತನಿಖೆ ವೇಳೆ ಇನ್ಸ್ಟಾಗ್ರಾಮ್​ ರೋಮಿಯೋ ಅನ್ನೋದು ಬಯಲು

ಬೆಂಗಳೂರಿನ ಕುಂಬಳಗೋಡಿನಲ್ಲಿ ಮಲತಂದೆಯಿಂದಲೇ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಆರೋಪಿ ದರ್ಶನ್​​ ಇನ್ಸ್ಟಾಗ್ರಾಮ್​ ರೋಮಿಯೋ ಅನ್ನೋದು ಬಯಲಾಗಿದೆ. ನಾಲ್ಕೈದು ಹುಡುಗಿಯರ ಜೊತೆ ಲವ್​​​ನಲ್ಲೂ ಇದ್ದ. ಅಷ್ಟೇ ಅಲ್ಲದೆ, ಬಾಲಕಿ ತಾಯಿ ಶಿಲ್ಪಾಳಂತೆ ಇತನಿಗೂ ಇದು 2ನೇ ಮದುವೆ.

ಬಾಲಕಿ ಹತ್ಯೆ ಕೇಸ್​​: ಆರೋಪಿಗೂ 2ನೇ ಮದುವೆ, ತನಿಖೆ ವೇಳೆ ಇನ್ಸ್ಟಾಗ್ರಾಮ್​ ರೋಮಿಯೋ ಅನ್ನೋದು ಬಯಲು
ಕೊಲೆಯಾದ ಸಿರಿ, ಆರೋಪಿ ದರ್ಶನ್​

Updated on: Oct 30, 2025 | 10:00 PM

ಬೆಂಗಳೂರು, ಅಕ್ಟೋಬರ್​ 30: ಕುಂಬಳಗೋಡಿನಲ್ಲಿ ಮಲತಂದೆಯಿಂದಲೇ (stepfather) ಬಾಲಕಿ ಹತ್ಯೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಶಿಲ್ಪಾಳಂತೆ ಆರೋಪಿ ದರ್ಶನ್​ಗೂ ಇದು 2ನೇ ಮದುವೆ. ಅಷ್ಟೇ ಅಲ್ಲದೆ, ನಾಲ್ಕೈದು ಹುಡುಗಿಯರೊಂದಿಗೆ ಆರೋಪಿ ಲವ್​​ನಲ್ಲಿದ್ದ. ಆ ಮೂಲಕ ಪೊಲೀಸರ ತನಿಖೆ ವೇಳೆ ದರ್ಶನ್​ ಇನ್ಸ್ಟಾಗ್ರಾಮ್​ ರೋಮಿಯೋ ಅನ್ನೋದು ಬಯಲಾಗಿದೆ.

ನಾಲ್ಕೈದು ಹುಡುಗಿಯರ ಜೊತೆ ಲವ್​​​

ಕೊಲೆ ಆರೋಪಿ ದರ್ಶನ್​​ ಇನ್ಸ್ಟಾಗ್ರಾಮ್​​ನಲ್ಲಿ​ ಬಣ್ಣಬಣ್ಣದ ಫೋಟೋ ಹಾಕುತ್ತಿದ್ದ. ಹೀಗಾಗಿ ನಾಲ್ಕೈದು ಹುಡುಗಿಯರ ಜೊತೆ ಲವ್​​​ನಲ್ಲೂ ಇದ್ದ. ಲವ್ ಮಾಡುತ್ತಿದ್ದ ಓರ್ವ ಯುವತಿ ಜೊತೆಗೂ ದರ್ಶನ್ ಮದುವೆಯಾಗಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಲತಂದೆಯಿಂದ ಬಾಲಕಿ ಸಿರಿ ಹತ್ಯೆ ಪ್ರಕರಣ ; ಶುಕ್ರವಾರ ಆ ಮನೆಯಲ್ಲಿ ನಡೆದಿದ್ದೇನು!

ಇದೇ ರೀತಿ ಗಂಡನಿಂದ ದೂರಾಗಿದ್ದ ಶಿಲ್ಪಾಳನ್ನ ಪರಿಚಯ ಮಾಡಿಕೊಂಡಿದ್ದ. ಪರಿಚಯವಾದ ಕೇವಲ ಒಂದೇ ವಾರದಲ್ಲಿ ಸ್ನೇಹ, ಪ್ರೀತಿ, ಮದುವೆಯೂ ಆಗಿದೆ. ಮನೆಯಲ್ಲಿಯೇ ಶಿಲ್ಪಾಗೆ ಅರಿಶಿನ ಕೊಂಬು ಕಟ್ಟಿ ಆರೋಪಿ ಮದುವೆಯಾಗಿದ್ದ. ಆ ಮದುವೆಯ ದೃಶ್ಯವನ್ನ ಮಗಳು ಸಿರಿ ತಾನೇ ಮೊಬೈಲ್​ನಲ್ಲಿ ವಿಡಿಯೋ‌ ಮಾಡಿದ್ದಳು. ಆದರೆ ಇದೀಗ ಆ ಬಾಲಕಿಯನ್ನೇ ಕೊಲೆ ಮಾಡಿ ದರ್ಶನ್ ಕಂಬಿ ಎಣಿಸುತ್ತಿದ್ದಾನೆ.

ಆರೋಪಿ ದರ್ಶನ್​​ ಸಿಕ್ಕಿದ್ದೇ ರೋಚಕ

ಇನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ದರ್ಶನ್, ಸಿಕ್ಕಿದ್ದೇ ಮತ್ತೊಂದು ರೋಚಕ. ಬೈಕ್ ತೆಗೆದುಕೊಳ್ಳಲು ಊರಿಂದ ವಾಪಸ್ ಬಂದು ಸಿಕ್ಕಿಬಿದ್ದಿದ್ದಾನೆ. ಶುಕ್ರವಾರ ಸಂಜೆ ಕೊಲೆ ಬಳಿಕ ದರ್ಶನ್ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದ. ಊರಿಗೆ ಹೋಗುವ ಪ್ಲಾನ್ ಮಾಡಿ ಬೈಕ್ ಬೆಂಗಳೂರಲ್ಲಿ ಬಿಟ್ಟು ಹೋಗಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಘೋರ ಕೃತ್ಯ: ಮಲತಂದೆಯಿಂದಲೇ 7 ವರ್ಷದ ಮಗಳ ಹತ್ಯೆ

ಬಳಿಕ ಮರುದಿನವೇ ತನ್ನೂರು ಪಾವಗಡ ತಲುಪಿದ್ದ ಆರೋಪಿ ದರ್ಶನ್, ಆದರೆ ಬೆಂಗಳೂರಿನಲ್ಲಿದ್ದ ಬೈಕ್ ತೆಗೆದುಕೊಳ್ಳಬೇಕೆಂದು ವಾಪಸ್ ಬಂದಿದ್ದ. ಸೋಮವಾರ ನೆಲಮಂಗಲ ಬಳಿ ಒಬ್ಬನೇ ನಿಂತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕುಂಬಳಗೋಡು ಪೊಲೀಸರು ಆತನನ್ನ ಬಂಧಿಸಿ ಕರೆತಂದಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.