ಬೆಂಗಳೂರಿನಲ್ಲಿ ಘೋರ ಕೃತ್ಯ: ಮಲತಂದೆಯಿಂದಲೇ 7 ವರ್ಷದ ಮಗಳ ಹತ್ಯೆ
ಮೊನ್ನೇ ಅಷ್ಟೇ ಬೆಂಗಳೂರಿನಲ್ಲಿ ಸಾಮೂಹಿತ ಅತ್ಯಾಚಾರ ಪ್ರಕಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೊಂದು ಘೋರ ಕೃತ್ಯ ನಡೆದಿದೆ. ಮಲತಂದೆಯೊಬ್ಬ 7 ವರ್ಷದ ಮಗಳನ್ನ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮೃತ ಬಾಲಕಿ ತಾಯಿ ದರ್ಶನ್ ಎನ್ನುವಾತನನ್ನು ಎರಡನೇ ಮದುವೆಯಾಗಿದ್ದಳು. ಆದ್ರೆ, ದರ್ಶನ್, ಪತ್ನಿ ಜತೆ ಗಲಾಟೆ ಮಾಡಿ ಮಗಳನ್ನು ಹತ್ಯೆಗೈದಿದ್ದಾನೆ.

ಬೆಂಗಳೂರು, (ಅಕ್ಟೋಬರ್ 24): ಮಲತಂದೆಯೊಬ್ಬ (stepfather) 7 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ. ಮಲತಂದೆ ದರ್ಶನ್, 7 ವರ್ಷದ ಸಿರಿ ಎನ್ನುವ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೊದಲ ಪತಿ ಮೃತಪಟ್ಟ ಬಳಿಕ ಕೊಲೆಯಾದ ಬಾಲಕಿ ಸಿರಿ ತಾಯಿ ದರ್ಶನನ್ನು ಎರಡನೇ ಮದುವೆಯಾಗಿದ್ದಳು. ಆದರೆ, ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ.
ಕೊಲೆಯಾದ ಬಾಲಕಿ ತಾಯಿ ಮೊದಲ ಗಂಡ ಮೃತಪಟ್ಟ ಹಿನ್ನೆಲೆಯಲ್ಲಿ ಬಾಳಿಗೆ ಆಸರೆಯಾಗುತ್ತಾನೆಂದು ದರ್ಶನ್ ಎನ್ನುವಾತನನ್ನು ಎರಡನೇ ಮದುವೆಯಾಗಿದ್ದಳು. ಆದ್ರೆ, ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದೇ ಸಿಟ್ಟಿನಲ್ಲಿ ದರ್ಶನ್ ಬಾಲಕಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕುಂಬಳಗೊಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




