‘ಏನ್ ರೋಡ್ ಗುರು’ ಅಭಿಯಾನದ ಬಳಿಕ ಎಚ್ಚೆತ್ತ ಜಿಬಿಎ; ಬೆಂಗಳೂರಿನ ಹಲವು ರಸ್ತೆಗಳ ತೇಪೆ ಕಾರ್ಯ ಜೋರು
‘ಏನ್ ರೋಡ್ ಗುರು’ ಅಭಿಯಾನ ಬಳಿಕ ಎಚ್ಚೆತ್ತ ಜಿಬಿಎ ರಾಜಧಾನಿಯ ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೇಪೆ ಹಚ್ಚುವ ಕೆಲಸ ಜೋರಾಗಿದೆ. ಸರ್ಕಾರ ರಸ್ತೆಗುಂಡಿ ಮುಚ್ಚಲು ಡೆಡ್‍ಲೈನ್ ನೀಡಿದ್ದು, ಡಿಸಿಎಂ ಡಿಕೆಶಿ ನಗರ ಸಿಟಿ ರೌಂಡ್‍ಗಳಲ್ಲಿ ಸಕ್ರಿಯರಾಗಿದ್ದಾರೆ. ಇಂದು ಬೆಳಗ್ಗೆ ಹೇರೋಹಳ್ಳಿಯ ಗಾಂಧಿ ಉದ್ಯಾನವನದಲ್ಲಿ ‘ಬೆಂಗಳೂರು ನಡಿಗೆ’ ಮೂಲಕ ಜನರ ಜೊತೆ ಸಂವಾದ ನಡೆಸಲಿದ್ದಾರೆ.

ಬೆಂಗಳೂರು, ಅಕ್ಟೋಬರ್ 25: ಟಿವಿ9ನ ‘ಏನ್ ರೋಡ್ ಗುರು’ ಅಭಿಯಾನದ ಬಳಿಕ ಎಚ್ಚೆತ್ತಿರುವ ಜಿಬಿಎ (GBA), ಇದೀಗ ರಾಜಧಾನಿಯ ಹಲವು ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯವನ್ನು ಕೈಗೊಂಡಿದೆ. ಬೆಂಗಳೂರಿನ ಹಲವು ಪ್ರಮುಖ ರಸ್ತಗಳ ಗುಂಡಿಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದರ ಮಧ್ಯೆ ಸ್ವತಃ ಜನರ ಸಮಸ್ಯೆಗಳನ್ನು ಆಲಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ರ ಸಲಹೆ ಜಿಬಿಎ ಕೆಲಸದ ವೇಗವನ್ನು ಇನ್ನಷ್ಟು ಹೆಚ್ಚಿಸಿದೆ.
ರಾಜಧಾನಿಯಲ್ಲಿ ಶುರುವಾಯ್ತು ರಸ್ತೆ ತೇಪೆ ಕಾರ್ಯ
ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಬೃಹತ್ ಗುಂಡಿಗಳಿಂದ ಹದಗೆಟ್ಟಿದ್ದವು. ವಾಹನ ಸವಾರರು ಸಂಚಾರದ ವೇಳೆ ತೊಂದರೆ ಅನುಭವಿಸುತ್ತಿದ್ದರು. ಜನರ ಈ ಸಮಸ್ಯೆಗೀಗ ಬ್ರೇಕ್ ಬಿದ್ದಿದೆ. ಜಿಬಿಎ ರಸ್ತೆಗಳಿಗೆ ಟಾರ್ ಹಾಸಿ ತೇಪೆ ಹಚ್ಚಿ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿದೆ.
ಸರ್ಕಾರವು ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ಡೆಡ್‍ಲೈನ್ ನೀಡಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ್ ಆಗಾಗ ಸಿಟಿ ರೌಂಡ್‌ಗಳನ್ನು ನಡೆಸುತ್ತಾ, ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ರಸ್ತೆಗುಂಡಿಗಳ ವಿಚಾರದಲ್ಲೂ ಬೆಂಗಳೂರಿಗರು ಈ ಹಿಂದೆ ಡಿಸಿಎಂ ಎದುರು ಸಮಸ್ಯೆ ಬಿಚ್ಚಿಟ್ಟಿದ್ದರು. ಅವರ ಸಲಹೆಯಿಂದ ಜಿಬಿಎ ಕಾರ್ಯದ ವೇಗ ಇನ್ನಷ್ಟು ಹೆಚ್ಚಾಗಿದೆ.
ಗಾಂಧಿ ಉದ್ಯಾನವನದಲ್ಲಿ ಸಾರ್ವಜನಿಕರೊಂದಿಗೆ ಡಿಸಿಎಂ ಸಂವಾದ
ರಾಜಧಾನಿಯ ಜನರ ಜೊತೆ ನೇರ ಸಂಪರ್ಕ ಸಾಧಿಸಲು ಡಿಸಿಎಂ ‘ಬೆಂಗಳೂರು ನಡಿಗೆ’ ಕಾರ್ಯಕ್ರವನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಹೇರೋಹಳ್ಳಿಯ ಗಾಂಧಿ ಉದ್ಯಾನವನದಲ್ಲಿ ನಡೆಯುವ ಈ ನಡಿಗೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದಾರೆ.
ಡಿಸಿಎಂ ಮುಂದೆ ಜನರಿಟ್ಟ ಡಿಮ್ಯಾಂಡ್ಗಳೇನು ಗೋತ್ತಾ?
ಯಶವಂತಪುರ ವಿಧಾನಸಭಾ ವ್ಯಾಪ್ತಿಯ ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ವಾಕ್ ಜೊತೆಗೆ ಸಂವಾದ ನಡೆಸಿದ್ದಾರೆ. ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಅಲ್ಲಿನ ವ್ಯಾಯಾಮ ಶಾಲೆಗೆ ಬಂದ ಡಿಸಿಎಂ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



