ಬೆಂಗಳೂರು ನಗರ ಜಿಲ್ಲೆ ಜನತೆಗೆ ಗುಡ್ ನ್ಯೂಸ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಎಂಆರ್‌ಡಿಎ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸಭೆ ನಡೆಸಿ, ಭವಿಷ್ಯದ ಬೆಂಗಳೂರು ವಿಸ್ತರಣೆಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲು ನಿರ್ದೇಶನ ನೀಡಿದ್ದಾರೆ. ರಸ್ತೆ ಅಗಲೀಕರಣ, ದಾಖಲೆ ಸರಿಪಡಿಸುವಿಕೆ, ಏಕರೂಪ ತೆರಿಗೆ ಸಂಗ್ರಹ ಮತ್ತು ಅಕ್ರಮ ನಿರ್ಮಾಣ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಕಾವೇರಿ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಪೂರ್ವತಯಾರಿಗೆ ಸೂಚಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 24: ಮುಂದಿನ ದಿನಗಳಲ್ಲಿ ಬೆಂಗಳೂರು ಇನ್ನೂ ಬೆಳೆಯುತ್ತೆ. ಬಿಎಂಆರ್‌ಡಿಎ ವ್ಯಾಪ್ತಿ ಇಂದಲ್ಲ ನಾಳೆ ಬೆಂಗಳೂರು ಆಗುತ್ತೆ. ಅದಕ್ಕೆ ಹಲವಾರು ಡೈರೆಕ್ಷನ್ ಕೊಟ್ಟಿದ್ದೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ 11ರಿಂದ 12 ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬಹಳ ಪ್ರಮುಖ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಮೊದಲೇ ಪ್ಲ್ಯಾನಿಂಗ್ ಸರಿಯಾಗಿ ಇರಬೇಕೆಂದು ಸಭೆಯಲ್ಲಿ ಹೇಳಿರುವೆ. ಒಂದು ಹೊಸ ಮಾಸ್ಟರ್ ಪ್ಲ್ಯಾನ್ ತಯಾರು ಮಾಡುವಂತೆ ಹೇಳಿದ್ದೇನೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

