AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ-ಶ್ವಾಸಕೋಶ ಸಾಗಾಟ: ಜೀವ ರಕ್ಷಣೆಗೆ ನಮ್ಮ ಮೆಟ್ರೋದಿಂದ ಮತ್ತೊಂದು ಮಾನವೀಯ ಸೇವೆ

ನಮ್ಮ ಮೆಟ್ರೋದಲ್ಲಿ ಇಂದು ಒಂದೇ ದಿನ ಹೃದಯ ಮತ್ತು ಶ್ವಾಸಕೋಶವನ್ನು ಯಶಸ್ವಿಯಾಗಿ ಸಾಗಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮೆಟ್ರೋ ಮತ್ತೊಮ್ಮೆ ಮಾನವೀಯ ಸೇವೆ ಒದಗಿಸುವ ಮೂಲಕ ಜನರ ಮೆಚ್ಚುಗೆ ಕಾರಣವಾಗಿದೆ. ಬಿಎಂಆರ್​​​ಸಿಎಲ್​​ ಮತ್ತು ವೈದ್ಯಕೀಯ ತಂಡ ಹಾಗೂ ನಿಲ್ದಾಣ ಅಧಿಕಾರಿಗಳ ಸಹಯೋಗದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. 

ಹೃದಯ-ಶ್ವಾಸಕೋಶ ಸಾಗಾಟ: ಜೀವ ರಕ್ಷಣೆಗೆ ನಮ್ಮ ಮೆಟ್ರೋದಿಂದ ಮತ್ತೊಂದು ಮಾನವೀಯ ಸೇವೆ
ಮೆಟ್ರೋದಲ್ಲಿ ಹೃದಯ-ಶ್ವಾಸಕೋಶ ಸಾಗಾಟ
ಕಿರಣ್​ ಸೂರ್ಯ
| Edited By: |

Updated on:Oct 30, 2025 | 8:24 PM

Share

ಬೆಂಗಳೂರು, ಅಕ್ಟೋಬರ್ 30:  ನಮ್ಮ ಮೆಟ್ರೋ (Namma Metro) ಸಿಲಿಕಾನ್ ಸಿಟಿ ಜನರ ನೆಚ್ಚಿನ ಸಾರಿಗೆ ವ್ಯವಸ್ಥೆ ಮಾತ್ರ ಅಲ್ಲದೇ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ರೋಗಿಗಳ ಪಾಲಿಗೂ ವರದಾನವಾಗಿದೆ. ಏಕೆಂದರೆ ಇಂದು ಒಂದೇ ದಿನ ಹೃದಯ ಮತ್ತು ಶ್ವಾಸಕೋಶವನ್ನು ಯಶಸ್ವಿಯಾಗಿ ಸಾಗಾಟ ಮಾಡಲಾಗಿದೆ. ಆ ಮೂಲಕ ಜೀವ ರಕ್ಷಣೆಗೆ ನಮ್ಮ ಮೆಟ್ರೋದಿಂದ ಮತ್ತೊಂದು ಮಾನವೀಯ ಸೇವೆ ಒದಗಿಸಲಾಗಿದೆ.

ನಮ್ಮ ಮೆಟ್ರೋ ರೈಲಿನಲ್ಲಿ ಈಗಾಗಲೇ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಾಟ ಮಾಡಲಾಗಿದೆ. ಸದ್ಯ ಒಂದೇ ದಿನ ಹೃದಯ ಮತ್ತು ಶ್ವಾಸಕೋಶವನ್ನು ಸಾಗಾಟ ಮಾಡಲಾಗಿದೆ. ಸದ್ಯ ವೈದ್ಯರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇವಲ 61 ನಿಮಿಷದಲ್ಲಿ ಶ್ವಾಸಕೋಶ ಸಾಗಾಟ

ಟ್ರಾಫಿಕ್ ಸಮಸ್ಯೆ ಹಿನ್ನೆಲೆ ನಮ್ಮ ಮೆಟ್ರೋ ಆಯ್ಕೆ ಮಾಡಿಕೊಂಡ ವೈದ್ಯರ ತಂಡ, ಯಶವಂತಪುರದಿಂದ ನಾರಾಯಣ ಹೆಲ್ತ್ ಸಿಟಿಗೆ ಕೇವಲ 61 ನಿಮಿಷದಲ್ಲಿ ವೈದ್ಯರ ತಂಡ ಶ್ವಾಸಕೋಶವನ್ನು ಆಸ್ಪತ್ರೆ ತಲುಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ!

ಯಶವಂತಪುರ ಟು ಆರ್.ವಿ ರೋಡ್​​ವರೆಗೆ ಗ್ರೀನ್ ಲೈನ್​ನಲ್ಲಿ ಸಂಚರಿಸಿ, ಬಳಿಕ ಆರ್.ವಿ ರೋಡ್ ಟು ಬೊಮ್ಮಸಂದ್ರವರೆಗೆ ಹಳದಿ ಲೈನ್​​ನಲ್ಲಿ ಸಂಚಾರ ಮಾಡಿದ್ದಾರೆ. ಕೇವಲ 61 ನಿಮಿಷದಲ್ಲಿ ಶ್ವಾಸಕೋಶವನ್ನು ವೈದ್ಯರ ತಂಡ ನಾರಾಯಣ ಹೆಲ್ತ್ ಸಿಟಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 41 ನಿಮಿಷಗಳಲ್ಲಿ ಹೃದಯ ಸಾಗಾಟ

ಇನ್ನು ಸ್ಪರ್ಶ ಆಸ್ಪತ್ರೆ ವೈದ್ಯಕೀಯ ತಂಡಕ್ಕೂ ಮೆಟ್ರೋ ಮೂಲಕ ನೆರವು ನೀಡಲಾಗಿದೆ. ಗೋರಗುಂಟೆಪಾಳ್ಯದಿಂದ ಬನಶಂಕರಿವರೆಗೆ ಕೇವಲ 41 ನಿಮಿಷಗಳಲ್ಲಿ ಹೃದಯ ಸಾಗಾಟ ಮಾಡಲಾಗಿದೆ. 17 ನಿಲ್ದಾಣಗಳ ದೂರ ಕೇವಲ 41 ನಿಮಿಷಗಳಲ್ಲಿ ಮೆಟ್ರೋ ಕ್ರಮಿಸಿದ್ದು, ಅಸ್ಟರ್ ಆರ್‌ವಿ ಆಸ್ಪತ್ರೆಗೆ ಹೃದಯವನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ. ಬಿಎಂಆರ್​​​ಸಿಎಲ್​​ ಮತ್ತು ವೈದ್ಯಕೀಯ ತಂಡ ಹಾಗೂ ನಿಲ್ದಾಣ ಅಧಿಕಾರಿಗಳ ಸಹಯೋಗದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಮೆಟ್ರೋ ಮೂಲಕ ಯಶಸ್ವಿಯಾಗಿ ಹಾರ್ಟ್ ಶಿಫ್ಟಿಂಗ್

ಇನ್ನು ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ ಮಾಡಲಾಗಿತ್ತು. ಆ ಮೂಲಕ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿತ್ತು. ಯಶವಂತಪುರ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರ ಬಳಿಯ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಸಾಗಿಸಲಾಗಿತ್ತು.

ಇದನ್ನೂ ಓದಿ: ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ

ಯಶವಂತಪುರ ಇಂಡಸ್ಟ್ರಿ ಮೆಟ್ರೋ ಸ್ಟೇಷನ್​​ನಿಂದ ಸಂಪಿಗೆ ರೋಡ್ ಸ್ಟೇಷನ್​ವರೆಗೆ ಮೆಟ್ರೋದಲ್ಲಿ ಹೃದಯ ಸಾಗಿಸಲಾಗಿತ್ತು. ಸ್ಪರ್ಶ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಯಶವಂತಪುರ ಇಂಡಸ್ಟ್ರಿವರೆಗೆ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಮೆಟ್ರೋ ಮೂಲಕ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್​ವರೆಗೆ ಶಿಫ್ಟ್ ಮಾಡಿದರೆ, ಅಲ್ಲಿಂದ ಮತ್ತೆ ಆ್ಯಂಬುಲೆನ್ಸ್ ಮೂಲಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಶಿಫ್ಟ್ ಮಾಡಲಾಗಿತ್ತು. ಎಂದಿನಂತೆ ಪ್ರಯಾಣಿಕರು ಪ್ರಯಾಣ ಮಾಡುವ ಮೆಟ್ರೋ ರೈಲಿನ ಒಂದು ಕೋಚ್ ಅನ್ನು ಹೃದಯ ಸಾಗಿಸಲು ಮೀಸಲಿಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:42 pm, Thu, 30 October 25

Follow Us
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!