ಬೆಂಗಳೂರು ಖಾಸಗಿ ಬಸ್​​ ಅಗ್ನಿ ದುರಂತ: ಸ್ಥಳದಲ್ಲಿದ್ದವು 12 ಗ್ಯಾಸ್ ಸಿಲಿಂಡರ್​, 30 ಬ್ಯಾಟರಿ, ತಪ್ಪಿದ ಭಾರಿ ಅನಾಹುತ: 42 ಜನ ಬಚಾವ್

| Updated By: ವಿವೇಕ ಬಿರಾದಾರ

Updated on: Oct 30, 2023 | 2:52 PM

ಬೆಂಗಳೂರಿನ ಕೋಚ್ ವರ್ಕ್ಸ್​​​ನಲ್ಲಿ ಕಳೆದ 15 ವರ್ಷಗಳಿಂದ ಖಾಸಗಿ ಬಸ್​ಗಳನ್ನು​ ರಿಪೇರಿ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 11:30ರ ಸುಮಾರಿಗೆ ಬಸ್​​ವೊಂದರ ತುರ್ತು ನಿರ್ಗಮನ ದ್ವಾರ ದುರಸ್ತಿ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೋಚ್ ವರ್ಕ್ಸ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗಾಗಿ, ಎರಡು ಬಸ್​ಗಳಿಗೆ ಬೆಂಕಿ ವ್ಯಾಪಿಸಿತ್ತು.

ಬೆಂಗಳೂರು ಖಾಸಗಿ ಬಸ್​​ ಅಗ್ನಿ ದುರಂತ: ಸ್ಥಳದಲ್ಲಿದ್ದವು 12 ಗ್ಯಾಸ್ ಸಿಲಿಂಡರ್​, 30 ಬ್ಯಾಟರಿ, ತಪ್ಪಿದ ಭಾರಿ ಅನಾಹುತ: 42 ಜನ ಬಚಾವ್
ಖಾಸಗಿ ಬಸ್​ ಅಗ್ನಿ ದುರಂತ
Follow us on

ಬೆಂಗಳೂರು ಅ.30: ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್​ವಿ ಕೋಚ್ ವರ್ಕ್ಸ್​ನಲ್ಲಿನ ಖಾಸಗಿ ಬಸ್ (Privet Bus)​​ ಅಗ್ನಿ ಅವಘಡಕ್ಕೆ (Fire Accident) ಸಂಬಂಧಿಸಿದಂತೆ ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್​ಗಳು (Gas Cylinder) ಇದ್ದವು. ಅದೃಷ್ಟವಶಾತ್​ ಸಿಲಿಂಡರ್​ಗೆ ಬೆಂಕಿ ತಾಗದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಲ್ಲದೆ 30 ಬಸ್​ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಅನಾಹುತ ತಪ್ಪಿದೆ. ಒಂದು ವೇಳೆ ಗ್ಯಾಸ್​​ ಸಿಲಿಂಡರ್​ಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

ಕಳೆದ 15 ವರ್ಷಗಳಿಂದ ಕೋಚ್ ವರ್ಕ್ಸ್​​​ನಲ್ಲಿ ಖಾಸಗಿ ಬಸ್​ಗಳನ್ನು​ ರಿಪೇರಿ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 11:30ರ ಸುಮಾರಿಗೆ ಬಸ್​​ವೊಂದರ ತುರ್ತು ನಿರ್ಗಮನ ದ್ವಾರ ದುರಸ್ತಿ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೋಚ್ ವರ್ಕ್ಸ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗಾಗಿ, ಎರಡು ಬಸ್​ಗಳಿಗೆ ಬೆಂಕಿ ವ್ಯಾಪಿಸಿತ್ತು.

ನೋಡು ನೋಡುತ್ತಿದ್ದಂತೆ ಬೆಂಕಿ ಸ್ಥಳದಲ್ಲಿ ನಿಲ್ಲಿಸಿದ್ದ 30 ಬಸ್​ಗಳ ಪೈಕಿ 18 ಬಸ್​ಗಳಿಗೆ ಆವರಿಸಿಕೊಂಡಿದೆ. ಇದರಿಂದ 18 ಬಸ್​​ಗಳು ಸುಟ್ಟು ಕರಕಲಾಗಿವೆ. ಇನ್ನು ಎಸಿ ಬಸ್​ಗಳಲ್ಲಿ ಸೀಟ್, ಸ್ಕೀನ್​ಗಳು ಇರುವುದರಿಂದ ಬೆಂಕಿ ಹೆಚ್ಚಾಗಿದೆ. ನಾಲ್ಕು ಬಸ್​ಗಳಿಗೆ ಬೆಂಕಿ ತಗುಲಿಲ್ಲ, 10 ಬಸ್​ಗಳನ್ನು​ ಸಿಬ್ಬಂದಿ ಹೊರತೆಗೆದಿದ್ದರು. ಎಸ್​ವಿ ಕೋಚ್ ವರ್ಕ್ಸ್​ನಲ್ಲಿ 42 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಇದೀಗ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: Bangalore Fire Accident: ಬೆಂಗಳೂರು ಅಗ್ನಿ ಅವಘಡ, ವೀರಭದ್ರ ನಗರದಲ್ಲಿ ಹೊತ್ತಿ ಉರಿದ 30 ಖಾಸಗಿ ಬಸ್​ಗಳು

ಬೆಂಕಿ ಅವಘಡದಲ್ಲಿ 18 ಬಸ್​ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಹೊಸ ಬಸ್​ಗಳು ಇರಲಿಲ್ಲ. ಹಳೇ ಬಸ್​​ಗಳ ಡ್ಯಾಮೇಜ್ ಸರಿ ಮಾಡಲಾಗುತ್ತಿದ್ದ ಸ್ಥಳದಲ್ಲಿ ದುರಂತ ಸಂಭವಿಸಿದೆ. 80 ಜನ ನಮ್ಮ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. 10 ಬಸ್​ಗಳನ್ನು ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಯಾವುದೇ ಸುರಕ್ಷಿತ ಕ್ರಮಗಳು ಇರಲಿಲ್ಲ. ಘಟನೆಗೆ ನಿಖರವಾದ ಕಾರಣ ಕಂಡು ಬಂದಿಲ್ಲ ಎಂದು ಅಗ್ನಿಶಾಮಕ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್​ ಗುರುಲಿಂಗಯ್ಯ ಹೇಳಿದರು.

ನಮ್ಮ ಬಸ್ ಅಪಘಾತವಾಗಿ ಶೇಪ್ ಡ್ಯಾಮೇಜ್ ಆಗಿತ್ತು. ರಿಪೇರಿ ಮಾಡಲು ಕೊಟ್ಟು, ಆರು ತಿಂಗಳಾಗಿತ್ತು. ಇನ್ನೂ ತಯಾರಾಗಿರಲಿಲ್ಲ. ಇನ್ನು ನಾಲ್ಕು ದಿನದಲ್ಲಿ ತಯಾರಾಗುತ್ತೆ ಅಂದಿದ್ದರು. ಇದೀಗ ಬೆಂಕಿ ಅನಾಹುತದಿಂದ 65 ಲಕ್ಷ ರೂ. ನಷ್ಟವಾಯಿತು ಎಂದು ನಿದಾ ಟ್ರಾವೆಲ್ಸ್ ಮಾಲೀಕ ಮಹಮದ್ ಜಬೀ ಉಲ್ಲಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ