ಬೆಂಗಳೂರು: ಗಗನಸಖಿಗೆ ವಂಚಿಸಿ ಸೀನ್ ಕ್ರಿಯೇಟ್ ಮಾಡಿದ ಬ್ಯಾಂಕ್ ಮ್ಯಾನೇಜರ್; ಯುವತಿ ದೂರು ನೀಡುತ್ತಿದ್ದಂತೆ ಅಸಲಿಯತ್ತು ಬಯಲಿಗೆ

| Updated By: ಆಯೇಷಾ ಬಾನು

Updated on: Dec 18, 2023 | 2:17 PM

ಗಗನಸಖಿ ಜೊತೆ ಸಲುಗೆ ಬೆಳೆಸಿ ಆಕೆಯನ್ನು ಮದುವೆಯಾಗಿ ವಂಚೆನೆ ಮಾಡಿ ಆಕೆ ವರದಕ್ಷಿಣೆ ಕಿರುಕುಳದ ದೂರು ದಾಖಲಿಸುತ್ತಿದ್ದಂತೆ ಆಕೆಯ ವಿರುದ್ಧವೇ ದೂರು ದಾಖಲಿಸಿ ಸೀನ್ ಕ್ರಿಯೆಟ್ ಮಾಡಿದ ಬ್ಯಾಂಕ್ ಮೇನೆಜರ್​ನ ಅಸಲಿಯತ್ತು ಬಯಲಾಗಿದೆ. ಸದ್ಯ ದೂರು-ಪ್ರತಿದೂರು ದಾಖಲಾಗಿದ್ದು ಬ್ಯಾಂಕ್ ಮೇನೆಜರ್ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾನೆ.

ಬೆಂಗಳೂರು: ಗಗನಸಖಿಗೆ ವಂಚಿಸಿ ಸೀನ್ ಕ್ರಿಯೇಟ್ ಮಾಡಿದ ಬ್ಯಾಂಕ್ ಮ್ಯಾನೇಜರ್; ಯುವತಿ ದೂರು ನೀಡುತ್ತಿದ್ದಂತೆ ಅಸಲಿಯತ್ತು ಬಯಲಿಗೆ
ರಚನಾ, ದಿಲೀಪ್
Follow us on

ಬೆಂಗಳೂರು, ಡಿ.17: ಗಗನ ಸಖಿ ಎಂಬ ಕಾರಣಕ್ಕೆ ಯುವತಿಯ ಜೊತೆ ಸಲುಗೆ ಬೆಳೆಸಿ ಮದುವೆಯಾಗಿ ವಂಚನೆ ಮಾಡಿದ್ದ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ (Bank Assistant Manager) ಅಸಲಿಯತ್ತು ಬಯಲಾಗಿದೆ. ಬೆಂಗಳೂರಿನ ಅಬ್ಬಿಗೆರೆಯ ದಿಲೀಪ್ ಕುಮಾರ್ ಎಂಬಾತ ಬ್ಯಾಂಕ್​ಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದು ಗಗನಸಖಿ (Air Hostess) ಜೊತೆ ಸಲುಗೆ ಬೆಳೆಸಿ ಆಕೆಯನ್ನು ಮದುವೆಯಾಗಿ ವಂಚೆನೆ ಮಾಡಿದ್ದಾನೆ. ಅಲ್ಲದೆ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್​ನಲ್ಲೇ ಸಾಲ ಪಡೆದು ತನ್ನಿಂದಲೇ ಕಂತು ಕಟ್ಟಿಸಿ ವಂಚಿಸಿದ್ದಾಳೆ ಎಂದು ಆರೋಪಿಸಿ ಗಗನಸಖಿಯ ವಿರುದ್ಧ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇತ್ತ ಯುವತಿ ಕೂಡ ದಿಲೀಪ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದು ಅಸಿಸ್ಟೆಂಟ್ ಮ್ಯಾನೇಜರ್ ದಿಲೀಪ್​ನ ಅಸಲಿಯತ್ತು ಬಯಲಾಗಿದೆ.

ಗಗನಸಖಿಯಾಗಿರುವ ರಚನಾ ಎಂಬ ಯುವತಿಯ ತಂದೆ ಅನ್ಬು ಎನ್ನುವವರು ದಿಲೀಪ್ ಕೆಲಸ ಮಾಡುತ್ತಿದ್ದ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದರು. ಕೆಲವು ಕಾರಣಾಂತರಗಳಿಂದ ಎರಡು ತಿಂಗಳು ಸಾಲದ ಕಂತು ಕಟ್ಟಲಾಗಿರಲಿಲ್ಲ. ಹೀಗಾಗಿ ಇದೇ ವಿಚಾರಕ್ಕೆ ದಿಲೀಪ್ ರಚನಾಗೆ ಕರೆ ಮಾಡಿ ಕಂತು ಕಟ್ಟುವಂತೆ ತಿಳಿಸಿದ್ದ. ಈ ವೇಳೆ ರಚನಾ ತಾನು ಗಗನಸಖಿ ಎಂದು ಹೇಳಿಕೊಂಡಿದ್ದಳು. ಗಗನಸಖಿ ಎಂಬ ವಿಚಾರ ತಿಳಿಯುತ್ತಿದ್ದಂತೆ ರಚನಾ ನೋಡಲು ಸುಂದರವಾಗಿರಬಹುದು ಎಂದು ದಿಲೀಪ್, ರಚನಾ ಜೊತೆ ಸಲುಗೆ ಬೆಳೆಸಿದ್ದ. ಇವರಿಬ್ಬರ ನಡುವೆ ಪ್ರೀತಿ ಕೂಡ ಆಗಿತ್ತು. ಪ್ರೀತಿ, ಸಲುಗೆ, ನಂಬಿಕೆಯಲ್ಲಿ ರಚನಾ ದಿಲೀಪ್ ಬಳಿ 18 ಲಕ್ಷ ಸಾಲ ಕೂಡ ಮಾಡಿದ್ದಳು. ಇಷ್ಟೆಲ್ಲ ಆದ ಬಳಿಕ ಯಾರಿಗೂ ತಿಳಿಯದಂತೆ ಇವರಿಬ್ಬರು ಮದುವೆ ಕೂಡ ಆಗಿದ್ದರು. ಇವರ ಮದುವೆ ರಚನಾಳ ಮನೆಯಲ್ಲಿ ತಿಳಿದ ಬಳಿಕ ಮನೆಯವರೆಲ್ಲ ಸೇರಿಕೊಂಡು ಮತ್ತೊಮ್ಮೆ ಮದುವೆ ಮಾಡಿಸಿದ್ದರು. ಆದರೆ ದಿಲೀಪ್ ಮನೆಯವರು ದಿಲೀಪನಿಗೆ ಮತ್ತೊಂದು ಯುವತಿಯ ಜೊತೆ ಮದುವೆ ಮಾಡಿಸಿದ್ದರು. ದಿಲೀಪ್ ಎರಡು ಮದುವೆಯಾದ ಬಗ್ಗೆ ತಿಳಿಯುತ್ತಿದ್ದಂತೆ ದಿಲೀಪ್ ಕುಟುಂಬಸ್ಥರು ರಚನಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು. ಈ ಬಗ್ಗೆ ರಚನಾ ದೂರು ದಾಖಲಿಸಿದ್ದಾರೆ.

ದಿಲೀಪನಿಂದಲೂ ರಚನಾ ವಿರುದ್ಧ ದೂರು

ಇನ್ನು ಮತ್ತೊಂದೆಡೆ ದಿಲೀಪ್ ಕೂಡ ರಚನಾ ವಿರುದ್ಧ ದೂರು ದಾಖಲಿಸಿದ್ದು ರಚನಾ ತಾನೊಬ್ಬಳು ಗಗನಸಖಿ ಎಂದು ಕಲರ್ ಕಲರ್ ಕಾಗೆ ಹಾರಿಸಿ ತನ್ನ ಪರಿಚಯ, ಸಲುಗೆಯನ್ನು ದುರುಪಯೋಗ ಪಡಿಸಿಕೊಂಡು ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಿದ್ದಾಳೆ. ಕೊನೆಗೆ ಹಣ ವಾಪಸ್ ನೀಡುವಂತೆ ಕೇಳಿದಾಗ ರಚನಾ ತನ್ನ ವರಸೆ ಬದಲಾಯಿಸಿದ್ದಳು. ಹಣ ವಾಪಸ್ ಕೇಳಿದ್ರೆ ನಿನ್ನ ಫೋಟೋಗಳನ್ನು ನಿನ್ನ ಮನೆಯವರಿಗೆ ತೋರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾಳೆ. ಅಲ್ಲದೆ ನನ್ನ ಮನೆ ಮುಂದೆ ಬಂದು ರಚನಾ ಹಾಗೂ ಕುಟುಂಬಸ್ಥರು ಗಲಾಟೆ ಮಾಡಿ ರಂಪ ಕೂಡ ಮಾಡಿದ್ದಾರೆ ಎಂದು ರಚನಾ, ರಚನಾ ತಂದೆ ಅನ್ಬು, ತಾಯಿ ವೇದ, ನವೀನ್, ವಿನಯ್ ರೂಪೇಶ್ ವಿರುದ್ದ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಸದ್ಯ ರಚನಾ ನೀಡಿದ ದೂರಿನ ನಂತರ ಅಸಿಸ್ಟೆಂಟ್ ಮ್ಯಾನೇಜರ್ ದಿಲೀಪನ ಅಸಲಿಯತ್ತು ಬಯಲಾಗಿದೆ.

ಇದನ್ನೂ ಓದಿ: ಕೋಲಾರ ಮೊರಾರ್ಜಿ ವಸತಿ ಶಾಲೆಯಲ್ಲಿ ಇದೆಂತ ಕೃತ್ಯ; ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ

ಯುವತಿಯಿಂದ ವರದಕ್ಷಿಣೆ ಕಿರುಕುಳ ದೂರು

ಗಗನಸಖಿ ರಚನಾ ನೀಡಿದ ದೂರು ಹೀಗಿದೆ. 2018ರಿಂದಲೂ ನನಗೆ ದಿಲೀಪ್ ಕುಮಾರ್ ಪರಿಚಯ ಆರು ವರ್ಷದಿಂದ ಕುಟುಂಬದವರಿಗೂ ತಿಳಿಸದೆ ಪ್ರೀತಿ ಮಾಡುತ್ತಿರುವದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಾರಿಗೂ ಹೇಳದೆ ನಾವಿಬ್ಬರೇ ಜೂನ್ 1,2022 ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿ ಮದುವೆಯಾಗಿ ಬಳಿಕ ಲಗ್ಗೆರೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ತವರು ಮನೆಯಿಂದ 3ಲಕ್ಷ ವರದಕ್ಷಣೆ ತರಬೇಕೆಂದು ದಿಲೀಪ್ ಕುಮಾರ್ ಒತ್ತಾಯಿಸಿದ್ದ. ಆಗ ನನ್ನ ಕುಟುಂಬಸ್ಥರು 3 ಲಕ್ಷ ವರದಕ್ಷಿಣೆ 24ಗ್ರಾಂ ಚಿನ್ನ ಕೊಟ್ಟು 26 ನವೆಂಬರ್ 2023ರಂದು ಪಟಾಲಮ್ಮ ದೇವಾಲಯದಲ್ಲಿ ಮತ್ತೊಂದು ಬಾರಿಗೆ ಮದುವೆ ಮಾಡಿದರು. ಆದರೆ ದಿಲೀಪ್ ಕುಟುಂಬದ ಕಡೆಯಿಂದ 30 ನವೆಂಬರ್2022ರಲ್ಲಿ ಮತ್ತೊಂದು ಯುವತಿ ಜೊತೆ ಮದುವೆ ಮಾಡಲಾಯಿತು. ಎರಡು ಮದುವೆಯಾಗಿದ್ದ ವಿಷಯ ತಿಳಿದ ದಿಲೀಪ್ ಕುಟುಂಬಸ್ಥರು 10ಲಕ್ಷ ಹಣ ತಂದ್ರೆ ಮನೆಗೆ ಸೇರಿಸಿಕೊಳ್ಳವ ಭರವಸೆ ನೀಡಿದರು ಎಂದು ರಚನಾ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವರದಕ್ಷಿಣೆ ದೂರು ದಾಖಲಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:50 am, Sun, 17 December 23