ಡಿಸೆಂಬರ್​ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಆರೋಪ; ಬಸವನಗುಡಿಯ BMS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Feb 16, 2022 | 8:47 AM

BMS ಇಂಜಿನಿಯರಿಂಗ್ ಸಂಜೆ ಕಾಲೇಜು ವಿದ್ಯಾರ್ಥಿಗಳು ತರಗತಿ ಆರಂಭಿಸಿಲ್ಲವೆಂದು ಧರಣಿ ನಡೆಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸೋಲ್ಲ ಅಂತಾ ದಿಕ್ಕಾರ ಕೂಗಿದ್ದಾರೆ.

ಡಿಸೆಂಬರ್​ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಆರೋಪ; ಬಸವನಗುಡಿಯ BMS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ
ಬಸವನಗುಡಿಯ BMS ಕಾಲೇಜ್
Follow us on

ಬೆಂಗಳೂರು: ಡಿಸೆಂಬರ್ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ.ಎಂ.ಎಸ್ ಕಾಲೇಜು((BMS Womens College) ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. BMS ಇಂಜಿನಿಯರಿಂಗ್ ಸಂಜೆ ಕಾಲೇಜು ವಿದ್ಯಾರ್ಥಿಗಳು ತರಗತಿ ಆರಂಭಿಸಿಲ್ಲವೆಂದು ಧರಣಿ ನಡೆಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸೋಲ್ಲ ಅಂತಾ ದಿಕ್ಕಾರ ಕೂಗಿದ್ದಾರೆ. ತರಗತಿ ಶುರುವಾಗುವವರೆಗೂ ಹೋರಾಟ ಮಾಡುತ್ತೇವೆ ಅಂತಾ ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆಗೆ ಕಾರಣಗಳೇನು?
ಡಿಸೆಂಬರ್ನಲ್ಲಿ ನಮಗೆ ದಾಖಲಾತಿ ಮಾಡಿಕೊಂಡಿದ್ದಾರೆ. ಮೂರನೇ ಸೆಮಿಸ್ಟರ್ಗೆ ನಾವು ಬಿಎಂಎಸ್ ಇಂಜಿನಿಯರಿಂಗ್ ಸಂಜೆ ಕಾಲೇಜಿಗೆ ಸಾವಿರಾರು ರೂಪಾಯಿ ನೀಡಿ ಆಡ್ಮೀಷನ್ ಆಗಿದ್ದೇವೆ. ಜನವರಿ 2 ರಿಂದ ಕಾಲೇಜು ತರಗತಿ ಶುರು ಅಂತಾ ಹೇಳಿದ್ರು. ಅದರೇ ಇಲ್ಲಿವರೆಗೆ ನಮಗೆ ತರಗತಿಗಳನ್ನ ಶುರು ಮಾಡಿಲ್ಲ. 46 ದಿನಗಳಿಂದ ಯಾವುದೇ ಸರಿಯಾದ ಮಾಹಿತಿ ನೀಡ್ತಿಲ್ಲ. ಪ್ರತಿನಿತ್ಯ ಸಂಜೆ ಕಾಲೇಜಿಗೆ ಬರೋದು ತರಗತಿ ಇಲ್ಲದೇ ವಾಪಸ್ ಹೋಗ್ತಿದ್ದೇವೆ. ಪ್ರಿನ್ಸಿಪಾಲ್ ಗಮನಕ್ಕೆ ತಂದಿದ್ದೇವೆ, ಸರ್ಕಾರದ ಗಮನಕ್ಕೂ ತಂದಿದ್ದೇವೆ. ಆದರೇ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ತಿಂಗಳು ಪರೀಕ್ಷೆ ಶುರುವಾಗಲಿದೆ. ತರಗತಿಗಳೇ ಇಲ್ಲದೇ ನಾವೂ ಹೇಗೆ ಪರೀಕ್ಷೆ ಎದುರಿಸೋದು. ಬೆಳಗ್ಗೆ ಸಮಯದಲ್ಲಿ ಕೆಲಸ ಮಾಡಿಕೊಂಡು ಸಂಜೆ ವಿದ್ಯಾಭ್ಯಾಸ ಮಾಡಲು ಬಂದಿದ್ದೇವೆ. ಆದರೇ ಇಲ್ಲಿ ಇನ್ನೂ ತರಗತಿಗಳೇ ಶುರು ಮಾಡದೇ ನಮ್ಮ ಭವಿಷ್ಯದ ಜೊತೆ ಆಟವಾಡಿತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಸವನಗುಡಿ ಬಳಿಯ ಪಿಜ್ಜಾ ಶಾಪ್​ನಲ್ಲಿ ಪ್ರೇಮಿಸಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಆರೋಪಿ ಮ್ಯಾನೇಜರ್ ಬಂಧನ

Published On - 8:42 am, Wed, 16 February 22