ಬಸವನಗುಡಿ ಬಳಿಯ ಪಿಜ್ಜಾ ಶಾಪ್​ನಲ್ಲಿ ಪ್ರೇಮಿಸಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಆರೋಪಿ ಮ್ಯಾನೇಜರ್ ಬಂಧನ

ಮ್ಯಾನೇಜರ್ ಪುರುಷೋತ್ತಮ್​ನನ್ನು ರಿಜೆಕ್ಟ್ ಮಾಡಿ ಮತ್ತೊಬ್ಬ ಯುವಕನನ್ನು ಯುವತಿ ಪ್ರೇಮಿಸಿದ್ದಳು. ಮತ್ತೊಬ್ಬನ ಜೊತೆ ಚಾಟ್ ಮಾಡುತ್ತೀಯಾ ಅಂತ ಯುವತಿಯ ಕಪಾಳಕ್ಕೆ ಗಂಭೀರವಾಗಿ ಪುರುಷೋತ್ತಮ್ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಬಸವನಗುಡಿ ಬಳಿಯ ಪಿಜ್ಜಾ ಶಾಪ್​ನಲ್ಲಿ ಪ್ರೇಮಿಸಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಆರೋಪಿ ಮ್ಯಾನೇಜರ್ ಬಂಧನ
ಮಹಿಳಾ ಉದ್ಯೋಗಿ ಮೇಲೆ ಹಲ್ಲೆ
Follow us
TV9 Web
| Updated By: guruganesh bhat

Updated on:Aug 07, 2021 | 5:19 PM

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ  ನಗರದ ಬಸವನಗುಡಿಯ ಪಿಜ್ಜಾ ಅಂಗಡಿಯೊಂದರಲ್ಲಿ ಯುವತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಮೇಲೆ ಹಲ್ಲೆ ಮಾಡಿದ್ದ ಮ್ಯಾನೇಜರ್ ಪುರುಷೋತ್ತಮ್ ಬಂಧಿಸಲಾಗಿದೆ. ಯುವತಿಯನ್ನು ಲವ್ ಮಾಡುವಂತೆ ಪೀಡಿಸುತ್ತಿದ್ದ ಮ್ಯಾನೇಜರ್ ಪುರುಷೋತ್ತಮ್ ಪ್ರೇಮ ಕೋರಿಕೆಯನ್ನು ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಆದರೂ ಮ್ಯಾನೇಜರ್ ಪುರುಷೋತ್ತಮ್ ಪದೇ ಪದೇ ಯುವತಿಗೆ ಇದೇ ರೀತಿ ಕೆಲಸದ ಸ್ಥಳದಲ್ಲಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಬೇರೆ ಯುವಕರ  ಜತೆ ಮಾತಾಡಬಾರದು. ಯಾರ ಜೊತೆಯಲ್ಲಿಯೂ ವಾಟ್ಸ್ಆ್ಯಪ್ ಚಾಟ್ ಮಾಡಬಾರದು ಎಂದು ಯುವತಿಯ ಮೊಬೈಲ್ ಚೆಕ್ ಮಾಡುತ್ತಿದ್ದ ಎಂದು ಧಮ್ಕಿ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ.

ಮ್ಯಾನೇಜರ್ ಪುರುಷೋತ್ತಮ್​ನನ್ನು ರಿಜೆಕ್ಟ್ ಮಾಡಿ ಮತ್ತೊಬ್ಬ ಯುವಕನನ್ನು ಯುವತಿ ಪ್ರೇಮಿಸಿದ್ದಳು. ಮತ್ತೊಬ್ಬನ ಜೊತೆ ಚಾಟ್ ಮಾಡುತ್ತೀಯಾ ಅಂತ ಯುವತಿಯ ಕಪಾಳಕ್ಕೆ ಗಂಭೀರವಾಗಿ ಪುರುಷೋತ್ತಮ್ ಹಲ್ಲೆ ಮಾಡಿದ್ದ ಎನ್ನಲಾಗಿದೆ. ವರದಿ ಬಳಿಕ ಸ್ಥಳಕ್ಕೆ ಭೇಟಿ ನೀಡಿ, ಸುಮೋಟೋ ಕೇಸ್ ದಾಖಲಿಸಿದ್ದ ಬಸವನಗುಡಿ ಪೊಲೀಸರು ಐಪಿಸಿ 323 ಹಲ್ಲೆ, 354 ಲೈಂಗಿಕ ಕಿರುಕುಳ, 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಮ್ಯಾನೇಜರ್ ಪುರುಷೋತ್ತಮ್ನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಮೇಲೆ ಹಲ್ಲೆ ಮಾಡಿರೋ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ (ramakrishna ashram circle) ಪಿಜ್ಜಾ ಅಂಗಡಿ ಬಳಿ ಈ ಕಹಿ ಘಟನೆ ನಡೆದಿದೆ. ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಭಯದಲ್ಲಿ ಯುವತಿ ದೂರು ನೀಡುವುದರಿಂದ ಹಿಂಜರಿದಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: 

ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಉದ್ಯೋಗಿ ಮೇಲೆ ಹಲ್ಲೆ; ಬಸವನಗುಡಿ ರಸ್ತೆಯ ಅಂಗಡಿ ಬಳಿ ಘಟನೆ 

29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ

(Assault on a young woman who refused to fall in love at a pizza shop near Basavanagudi accused manager arrest)

Published On - 4:55 pm, Sat, 7 August 21