29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ
Portfolio Allocation: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇಂದು ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಯಾರು ಯಾರಿಗೆ ಯಾವ ಖಾತೆ ಎಂಬ ವಿವರ ಲಭ್ಯವಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇಂದು ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಯಾರು ಯಾರಿಗೆ ಯಾವ ಖಾತೆ ಎಂಬ ವಿವರ ಲಭ್ಯವಾಗಿದೆ. ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಲಭಿಸಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಬಹುತೇಕರು ತಮ್ಮ ತಮ್ಮ ಖಾತೆಯನ್ನೇ ಉಳಿಸಿಕೊಂಡಿದ್ದಾರೆ.
1. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ 2. ಆರ್.ಅಶೋಕ್ – ಕಂದಾಯ 3. ಬಿ.ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ 4. ವಿ.ಸೋಮಣ್ಣ – ವಸತಿ & ಮೂಲಭೂತ ಸೌಕರ್ಯ ಅಭಿವೃದ್ದಿ 5. ಬಿ.ಸಿ.ಪಾಟೀಲ್ – ಕೃಷಿ 6. ಎಸ್.ಟಿ.ಸೋಮಶೇಖರ್ – ಸಹಕಾರ 7. ಡಾ.ಕೆ.ಸುಧಾಕರ್ – ಆರೋಗ್ಯ,ವೈದ್ಯಕೀಯ ಶಿಕ್ಷಣ 8. ಕೆ.ಗೋಪಾಲಯ್ಯ – ಅಬಕಾರಿ 9. ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ 10. ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ 11. ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 12. ವಿ.ಸುನಿಲ್ಕುಮಾರ್ – ಇಂಧನ 13. ಉಮೇಶ್ ಕತ್ತಿ – ಅರಣ್ಯ, ಆಹಾರ & ನಾಗರೀಕ ಸರಬರಾಜು 14. ಜೆ.ಸಿ.ಮಾಧುಸ್ವಾಮಿ – ಸಣ್ಣ ನೀರಾವರಿ 15. ಆರಗ ಜ್ಞಾನೇಂದ್ರ – ಗೃಹಖಾತೆ 16. ಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ 17. ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ 18. ಪ್ರಭು ಚೌಹಾಣ್ – ಪಶುಸಂಗೋಪಣೆ 19. ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ 20. ಶಿವರಾಮ್ ಹೆಬ್ಬಾರ್ – ಕಾರ್ಮಿಕ 21. ಎಸ್.ಅಂಗಾರ – ಮೀನುಗಾರಿಕೆ, ಬಂದರು 22. ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ 23. ಕೋಟಾ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ & ಹಿಂದುಳಿದ ವರ್ಗಗಳ ಕಲ್ಯಾಣ 24. ಕೆ.ಸಿ.ನಾರಾಯಣಗೌಡ – ಕ್ರೀಡೆ 25. ಮುನಿರತ್ನ – ತೋಟಗಾರಿಕೆ 26. ಭೈರತಿ ಬಸವರಾಜ್ – ನಗರಾಭಿವೃದ್ಧಿ 27. ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ 28. ಸಿ.ಸಿ.ಪಾಟೀಲ್ – ಲೋಕೋಪಯೋಗಿ 29. ಶಂಕರ ಪಾಟೀಲ್ ಮುನೇನಕೊಪ್ಪ – ಜವಳಿ
(Portfolio Allocation after CM Bommai Cabinet formation in Karnataka List of Ministry Posts)
ಇದನ್ನೂ ಓದಿ: ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
Published On - 11:33 am, Sat, 7 August 21