AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ತಂತ್ರಜ್ಞಾನದಲ್ಲೂ ‘ಕಾಪಿ-ಪೇಸ್ಟ್’ ಸಂಸ್ಕೃತಿ ಮುಂದುವರಿಸಿದೆ: ‘ರೋಬೋಡಾಗ್’ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ

ದೆಹಲಿಯ ಇಂಡಿಯಾ ಎಐ ಸಮ್ಮಿಟ್‌ನಲ್ಲಿ ಚೀನಾ ಮೂಲದ ರೋಬೋಡಾಗ್ ಅನ್ನು ಸ್ವದೇಶಿ ಎಂದು ಪ್ರದರ್ಶಿಸಿದ್ದು ವಿವಾದಕ್ಕೀಡಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು 'ಫೇಕ್ ಇನ್ ಇಂಡಿಯಾ' ಎಂದು ಟೀಕಿಸಿದ್ದಾರೆ. ಗಾಲ್ಗೋಟಿಯಸ್ ವಿಶ್ವವಿದ್ಯಾಲಯವು ಇದನ್ನು ನಮ್ಮದೆಂದು ಹೇಳಿದ್ದು, ನೆಟ್ಟಿಗರು ಚೀನಾ ಮೂಲವನ್ನು ಬಯಲು ಮಾಡಿದ್ದಾರೆ. ಈ ಘಟನೆ ದೇಶೀಯ ಆವಿಷ್ಕಾರಗಳ ನೈಜತೆ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಬಿಜೆಪಿ ತಂತ್ರಜ್ಞಾನದಲ್ಲೂ 'ಕಾಪಿ-ಪೇಸ್ಟ್' ಸಂಸ್ಕೃತಿ ಮುಂದುವರಿಸಿದೆ: 'ರೋಬೋಡಾಗ್' ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 19, 2026 | 8:01 AM

Share

ಬೆಂಗಳೂರು, ಫೆ.19: ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (India AI Impact Summit) ಪ್ರದರ್ಶಿಸಲಾದ ‘ರೋಬೋಡಾಗ್’ (Robodog) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಈ ಹಿಂದೆ ಯುಪಿಎ (UPA) ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ತನ್ನದೇ ಎಂದು ಹೆಸರಿಟ್ಟುಕೊಂಡಿತ್ತು. ಈಗ ತಂತ್ರಜ್ಞಾನದಲ್ಲೂ ಅದೇ ‘ಕಾಪಿ-ಪೇಸ್ಟ್’ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ಎಕ್ಸ್​​ ಖಾತೆಯಲ್ಲಿ ಟೀಕಿಸಿದ್ದಾರೆ.

ಸಮ್ಮೇಳನದಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ಚೀನಾ ಮೂಲದ ‘ಯೂನಿಟ್ರೀ’ (Unitree) ಕಂಪನಿಯ ಉತ್ಪನ್ನವಾಗಿದೆ. ಆದರೆ ಇದನ್ನು ಭಾರತದ್ದೇ ಆವಿಷ್ಕಾರ ಎಂಬಂತೆ ಬಿಂಬಿಸಿರುವುದು ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ತಂದಿದೆ ಎಂದು ಅವರು ಕಿಡಿಕಾರಿದ್ದಾರೆ. ಮೋದಿಯವರ ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನವು ಈಗ ‘ಫೇಕ್ ಇನ್ ಇಂಡಿಯಾ’ (Fake in India) ಆಗಿ ಬದಲಾಗಿದೆ. ಸ್ವದೇಶಿ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಬದಲು ಪರಕೀಯರ ತಂತ್ರಜ್ಞಾನಕ್ಕೆ ಭಾರತದ ಲೇಬಲ್ ಅಂಟಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​;

ಇಂತಹ ಜಾಗತಿಕ ಮಟ್ಟದ ಸಮ್ಮೇಳನದಲ್ಲಿ ಸರಿಯಾದ ಪರಿಶೀಲನೆ ಇಲ್ಲದೆ ರೋಬೋಟ್ ಪ್ರದರ್ಶನ ಮಾಡಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಪ್ರಚಾರದ ಹಪಾಹಪಿಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ರೋಬೋಡಾಗ್ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ ರಲ್ಲಿ ನಡೆದ ಈ ಘಟನೆಯು ದೇಶೀಯ ಆವಿಷ್ಕಾರ ಮತ್ತು ತಂತ್ರಜ್ಞಾನದ ನೈಜತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ; ವಿವಾದಕ್ಕೆ ಕ್ಷಮೆ ಯಾಚಿಸಿದ ಗಾಲ್ಗೋಟಿಯಾಸ್ ವಿವಿ

ವಿವಾದದ ಕೇಂದ್ರಬಿಂದು: ಗಾಲ್ಗೋಟಿಯಸ್ ವಿಶ್ವವಿದ್ಯಾಲಯ:

ಉತ್ತರ ಪ್ರದೇಶದ ಗಾಲ್ಗೋಟಿಯಸ್ ವಿಶ್ವವಿದ್ಯಾಲಯವು ಸಮ್ಮೇಳನದಲ್ಲಿ ಒಂದು ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತು. ಇದಕ್ಕೆ ‘ಒರಿಯನ್’ (Orion) ಎಂದು ಹೆಸರಿಡಲಾಗಿತ್ತು. ಆದರೆ, ನೆಟ್ಟಿಗರು ಇದನ್ನು ತಕ್ಷಣವೇ ಗುರುತಿಸಿ, ಇದು ಚೀನಾದ ‘ಯೂನಿಟ್ರೀ’ (Unitree) ಕಂಪನಿಯ Unitree Go2 ಮಾಡೆಲ್ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಇದನ್ನು ನಮ್ಮ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಚೀನಾದಿಂದ ಕೇವಲ 2-3 ಲಕ್ಷ ರೂಪಾಯಿಗೆ ಸಿಗುವ ರೋಬೋಟ್ ಎಂದು ಗೊತ್ತಾದಾಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ
ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ