AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ಜಾಮ್ ನಲ್ಲಿ ಬೆಂಗಳೂರು ದೇಶದಲ್ಲೇ ಫಸ್ಟ್, ವಿಶ್ವದಲ್ಲಿ ನಂಬರ್ 2: 10 ಕಿಮೀ ಸಂಚಾರಕ್ಕೆ ಎಷ್ಟು ಟೈಮ್ ಬೇಕು ಗೊತ್ತಾ?

ಬೆಂಗಳೂರಿನ ಟ್ರಾಫಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಟ್ರಾಫಿಕ್ ನಿಯಂತ್ರಣಕ್ಕೆ ಅದೆಷ್ಟೇ ಸರ್ಕಸ್ ಮಾಡಿದ್ರೂ, ನಗರದಲ್ಲಿ ಸದ್ಯಕ್ಕಂತೂ ಟ್ರಾಫಿಕ್ ಕಡಿವಾಣ ಬೀಳುತ್ತಿಲ್ಲ. ಇಷ್ಟು ಸಾಲದೆಂಬಂತೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಖಾಸಗಿ ಸಂಸ್ಥೆಯ ವರದಿಯ ಪ್ರಕಾರ ದೇಶದಲ್ಲೇ ಬೆಂಗಳೂರು ಟ್ರಾಫಿಕ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಟ್ರಾಫಿಕ್ ಜಾಮ್ ನಲ್ಲಿ ಬೆಂಗಳೂರು ದೇಶದಲ್ಲೇ ಫಸ್ಟ್, ವಿಶ್ವದಲ್ಲಿ ನಂಬರ್ 2: 10 ಕಿಮೀ ಸಂಚಾರಕ್ಕೆ ಎಷ್ಟು ಟೈಮ್ ಬೇಕು ಗೊತ್ತಾ?
Bengaluru Traffic
ಕಿರಣ್​ ಸೂರ್ಯ
| Edited By: |

Updated on: Aug 09, 2026 | 10:32 PM

Share

ಬೆಂಗಳೂರು, (ಆಗಸ್ಟ್ 09): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಅಂದ ತಕ್ಷಣ ನೆನಪಾಗೋದು ಟ್ರಾಫಿಕ್ (Traffic) . ಯಾವುದೇ ದಿಕ್ಕಿಗೆ ಹೋದರೂ ವಾಹನ ಭರಾಟೆ ಇದ್ದೆ ಇರುತ್ತೆ. ಈ ಕಾರಣಕ್ಕೆ ಹಲವು ಬಾರಿ ನಗರದ ಟ್ರಾಫಿಕ್,ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ವಿಷಯವೂ ಆಗಿದೆ. ಈ ಮಧ್ಯೆ ಈಗ ಮತ್ತೊಂದು ಶಾಕಿಂಗ್ ಅಂಶ ಒಂದು ಹೊರಬಿದ್ದಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ನಗರದ ಟ್ರಾಫಿಕ್ ಸ್ಥಿತಿ ಇನ್ನೆಲ್ಲಿಗೆ ಹೋಗಿ ತಲುಪುತ್ತೆ ಅನ್ನೋ ಆತಂಕ ಶುರುವಾಗಿದೆ. ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ನಗರಗಳ ಸಾಲಿನಲ್ಲಿ, ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 10 ಕಿಮೀ ಸಂಚಾರ ಮಾಡಲು 35.18 ನಿಮಿಷ ಬೇಕಾಗ್ತಿದ್ದು, ಎರಡನೇ ಸ್ಥಾನವನ್ನು ಕಲ್ಕತ್ತಾ ಪಡೆದುಕೊಂಡಿದೆ. ಪುಣೆಯಲ್ಲಿ 10 ಕಿಮೀ ಸಾಗಲು 33.20 ನಿಮಿಷ ಬೇಕಾಗ್ತಿದ್ದು, ಇದರಿಂದ ಮೂರನೇ ಸ್ಥಾನ ಪಡೆದುಕೊಂಡಿದೆ.

ದೇಶದಲ್ಲಿ ನಂಬರ್ 1, ವಿಶ್ವದಲ್ಲಿ ನಂಬರ್ 2

2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂದು ವರದಿ ಬಿಡುಗಡೆ ಮಾಡಿದೆ. ಬೆಂಗಳೂರು ಈಗಾಗಲೇ ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಷನ್‌ ಟೆಕ್ನಾಲಜಿ ಕಂಪನಿಯಾದ ಟಾಮ್‌ ಟಾಮ್, ವಿಶ್ವದ ಬೇರೆಬೇರೆ ನಗರಗಳ ಸಂಚಾರ ಪರಿಸ್ಥಿತಿಯನ್ನು ಸ್ಟಡಿ ಮಾಡಿ ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. ನಗರದಲ್ಲಿ ಪ್ರತಿದಿನ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿರುವುದೆ ಇದಕ್ಕೆ ಕಾರಣ ಎನ್ನಲಾಗ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿವೆ.

ಇನ್ನೂ ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ಈಗಾಗಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರು ಫುಟ್ ಪಾತ್ ತೆರವು ಮಾಡಲು ಮುಂದಾಗಿದ್ರೆ, ಇತ್ತ ನಗರದಲ್ಲಿರುವ ಅನಾಥ ವಾಹನಗಳಿಗೆ ತೆರವು ಮಾಡಲು ತಮ್ಮ ವಾಹನಗಳ ಮೇಲೆ ನೋಟೀಸ್ ಅಂಟಿಸಿ ಗಡುವು ನೀಡಲಾಗಿತ್ತು, ಆದರೆ ಗಡುವಿನೊಳಗೆ ತಮ್ಮ ವಾಹನಗಳನ್ನು ತೆರವು ಮಾಡದ ವಾಹನಗಳನ್ನು ಹರಾಜು ಹಾಕಲು ಸೀಜ್ ಕೂಡ ಮಾಡಿದೆ. ಇದರಿಂದಲೂ ನಗರದಲ್ಲಿ ತುಂಬಾ ದೊಡ್ಡಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ.

ಒಟ್ನಲ್ಲಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದ್ರೆ, ವಿಶ್ವದಲ್ಲೇ ಅತಿಹೆಚ್ಚು ವಾಹನದಟ್ಟಣೆ ಹೊಂದಿರುವ ನಗರ ಅನ್ನೋ ಕುಖ್ಯಾತಿಗೆ ಒಳಗಾದ್ರು ಒಳಗಾಗಬಹುದು ಅನ್ಸುತ್ತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
ಆನೇಕಲ್‌: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್‌ಗಳ ವಶ
ಆನೇಕಲ್‌: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್‌ಗಳ ವಶ
ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ
ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ