ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಉದ್ಯೋಗಿ ಮೇಲೆ ಹಲ್ಲೆ; ಬಸವನಗುಡಿ ರಸ್ತೆಯ ಅಂಗಡಿ ಬಳಿ ಘಟನೆ

ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಉದ್ಯೋಗಿ ಮೇಲೆ ಹಲ್ಲೆ; ಬಸವನಗುಡಿ ರಸ್ತೆಯ ಅಂಗಡಿ ಬಳಿ ಘಟನೆ
ಯುವತಿಯ ಮೇಲೆ ಮ್ಯಾನೇಜರ್​ನಿಂದ ಹಲ್ಲೆ

ಯುವ ಮಹಿಳಾ ಉದ್ಯೋಗಿಯ ಕಪಾಳಕ್ಕೆ ಮ್ಯಾನೇಜರ್ ಪುರುಷೋತ್ತಮ್ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ವಿಡಿಯೋ ಟಿವಿ ನೈನ್ ಗೆ ಲಭ್ಯವಾಗಿದೆ. ಕಪಾಳಕ್ಕೆ ಹೊಡೆದ ರಭಸಕ್ಕೆ ಯುವತಿ ನೆಲಕ್ಕೆ ಉರುಳಿಬಿದ್ದಿದ್ದಾರೆ.

TV9kannada Web Team

| Edited By: guruganesh bhat

Aug 03, 2021 | 8:18 PM

ಬೆಂಗಳೂರು: ನಗರದ  ಬಸವನಗುಡಿ​ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಯ ಎದುರು ಇರುವ ಪಿಜ್ಜಾ ಅಂಗಡಿಯೊಂದರ ಮಹಿಳಾ ಉದ್ಯೋಗಿ ಮೇಲೆ ಹಲ್ಲೆ ನಡೆದಿರುವ ಘಟನೆ ತಡವಾಗಿ ವರದಿಯಾಗಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಕಪಾಳಮೋಕ್ಷ: ಪಿಜ್ಜಾ ಅಂಗಡಿಯ ಯುವ ಮಹಿಳಾ ಉದ್ಯೋಗಿಯ ( woman employee) ಕಪಾಳಕ್ಕೆ ಮ್ಯಾನೇಜರ್ ಪುರುಷೋತ್ತಮ್ ಎಂಬ ವ್ಯಕ್ತಿ ಥಳಿಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ವಿಡಿಯೋ ಟಿವಿ ನೈನ್ ಗೆ ಲಭ್ಯವಾಗಿದೆ. ಕಪಾಳಕ್ಕೆ ಹೊಡೆದ ರಭಸಕ್ಕೆ ಯುವತಿ ನೆಲಕ್ಕೆ ಉರುಳಿಬಿದ್ದಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಪುರುಷೋತ್ತಮ್ ಎಂಬಾತ ಕಪಾಳಮೋಕ್ಷ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಯುವತಿಯ ಮೇಲೆ ಹಲ್ಲೆ ಮಾಡಿರೋ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ (ramakrishna ashram circle) ಪಿಜ್ಜಾ ಅಂಗಡಿ ಬಳಿ ಈ ಕಹಿ ಘಟನೆ ನಡೆದಿದೆ. ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಭಯದಲ್ಲಿ ಯುವತಿ ದೂರು ನೀಡುವುದರಿಂದ ಹಿಂಜರಿದಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.

ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು (woman employee assaulted by manager in bull temple road bangalore)

Follow us on

Related Stories

Most Read Stories

Click on your DTH Provider to Add TV9 Kannada