AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು

Darshan Assault Case: ದರ್ಶನ್​ ವಿರುದ್ಧದ ಈ ಪ್ರಕರಣ ಹೈಪ್​ ಪಡೆದುಕೊಂಡಿದೆ. ದರ್ಶನ್​ ಮೇಲೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು
ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು
TV9 Web
| Edited By: |

Updated on: Jul 16, 2021 | 1:18 PM

Share

ನಟ ದರ್ಶನ್​ ಅವರು ಮೈಸೂರಿನ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಈ ಸಂಬಂಧ ಪೊಲೀಸರು ಸಂದೇಶ್​ ಹೋಟೆಲ್​ಗೆ ತೆರಳಿದ್ದು, ಅನೇಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ದರ್ಶನ್​ ಅವರಿಂದ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಅವರ ಹೇಳಿಕೆಯನ್ನೂ ಪೊಲೀಸರು ಪಡೆದುಕೊಂಡಿದ್ದಾರೆ. ಎಸಿಪಿ ಶಶಿಧರ್​ ನೇತೃತ್ವದಲ್ಲಿ ಗಂಗಾಧರ್​ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.

ದರ್ಶನ್​ ವಿರುದ್ಧದ ಈ ಪ್ರಕರಣ ಹೈಪ್​ ಪಡೆದುಕೊಂಡಿದೆ. ದರ್ಶನ್​ ವಿರುದ್ಧ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲ್ಲೆ ನಡೆದಿದೆ ಎನ್ನಲಾದ ಹೋಟೆಲ್​ನಲ್ಲಿ ಪೊಲೀಸರ ತಂಡ ಬೀಡುಬಿಟ್ಟಿದೆ. ಅನೇಕರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ನಜರ್​ಬಾದ್​ ಠಾಣೆ ಇನ್ಸ್​ಪೆಕ್ಟರ್​ ಶ್ರೀಕಾಂತ್​ ಕೂಡ ಉಪಸ್ಥಿತರಿದ್ದಾರೆ.

ಯಾರು ಈ ಗಂಗಾಧರ್​?

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ ಸಿಬ್ಬಂದಿ ಗಂಗಾಧರ ಎಂಬುವವರ ಮೇಲೆ ನಟ ದರ್ಶನ್​ ಅವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಕನ್ನಡದವರೇ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಮಾಡಿದ್ದಾರೆ. ಅಷ್ಟಕ್ಕೂ ಈ ಗಂಗಾಧರ್​ ಯಾರು? ಅವರು ಎಲ್ಲಿಯವರು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಹಲ್ಲೆಗೊಳಗಾಗಿದ್ದ ಗಂಗಾಧರ್‌ ಬಗ್ಗೆ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಗಂಗಾಧರ್​ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹೋಟೆಲ್‌ನಲ್ಲಿ ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಹಲ್ಲೆಗೊಳಗಾಗಿದ್ದ ಗಂಗಾಧರ್‌ ಮೂಲತಃ ಕೇರಳದವರು. 8 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

ಗಂಗಾಧರ ಮಾತ್ರವಲ್ಲದೆ, ಜುಲೈ 3ರಂದು ಗೋಪಾಲ್​ ರಾಜ್ ಎಂಬುವವರ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಹಾಗೂ ಅವರು ಕೋಮಾದಲ್ಲಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಇಂದ್ರಜಿತ್​ ಮಾಡಿದ್ದರು. ಈ ಬಗ್ಗೆ ಟಿವಿ9 ಸ್ಟುಡಿಯೋದಲ್ಲಿ ಗೋಪಾಲ್​ ರಾಜ್ ಹೇಳಿಕೆ ನೀಡಿದ್ದಾರೆ. ‘ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ನನಗೂ ದರ್ಶನ್​ದೂ 30 ವರ್ಷಗಳ ಹಳೆಯ ಸ್ನೇಹವಿದೆ. ನನಗೂ, ದರ್ಶನ್​ಗೂ ಯಾವುದೇ ಗಲಾಟೆ ಆಗಿಲ್ಲ. ಕೋಮಾದಲ್ಲಿ ಇದ್ದೇನೆ ಎನ್ನುವ ಆರೋಪಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಲ್ಯಾಂಬೋರ್ಗಿನಿ ಕಾರಲ್ಲಿ ದರ್ಶನ್​; ಆಟೋದಲ್ಲಿ ಕಂಡ ಫ್ಯಾನ್ಸ್​ ಮಾತನಾಡಿಸೋಕೆ ಮರೆಯಲಿಲ್ಲ ಡಿ ಬಾಸ್​

‘ತಪ್ಪು ಮಾಡಿದ ಸೆಲೆಬ್ರಿಟಿಗಳು ತಪ್ಪಿಸಿಕೊಳ್ಳಬಾರದು’; ದರ್ಶನ್​ ವಿರುದ್ಧ ಮತ್ತೆ ಹರಿಹಾಯ್ದ ಇಂದ್ರಜಿತ್​ ಲಂಕೇಶ್

Follow Us
Web contact
Web contact

TV9 Kannada

Read More
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ