ಆಟೋ ಗ್ಯಾಸ್ ದರ ಹೆಚ್ಚಳ; ಆಟೋ ಮೀಟರ್ ಮಿನಿಮಮ್ ದರ ಹೆಚ್ಚಿಸಲು ಸರ್ಕಾರಕ್ಕೆ ಮನವಿ
ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದೆ. ಆದರೆ ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಆಟೋ ಗ್ಯಾಸ್ ದರ ಏರಿಸಿರುವ ಸರ್ಕಾರದ ನಡೆಗೆ ಆಟೋ ಚಾಲಕರು ಮತ್ತು ಮಾಲೀಕರ ಅಸೋಸಿಯೇಷನ್‌ಗಳು ಖಂಡನೆ ವ್ಯಕ್ತಪಡಿಸಿದ್ದು, ಆಟೋ ಪ್ರಯಾಣದ ಕನಿಷ್ಠ ದರವನ್ನು ಹೆಚ್ಚಿಸಲು ಆಗ್ರಹಿಸಿವೆ. ಆಟೋ ಗ್ಯಾಸ್ ದರ (Auto Gas Rate) ಏರಿಕೆ ಮಾಡಿರುವುದು ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ, ಆಟೋ ಮೀಟರ್ ಮಿನಿಮಮ್ ದರ ಏರಿಸಬೇಕು ಎಂದು ಸಹ ಅಸೋಸಿಯೇಶನ್ ಆಗ್ರಹಿಸಿದೆ. ಆಟೋ ಮೀಟರ್ ಕನಿಷ್ಠ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಆಟೋ ಚಾಲಕರ ಅಸೋಸಿಯೇಷನ್‌ಗಳು ಮನವಿ ಮಾಡಿವೆ.
ಜತೆಗೆ ಮಿನಿಮಮ್ ದರವನ್ನು ಪ್ರತಿ ಕಿ.ಮೀ.ಗೆ ₹ 16 ರಂತೆ ನಿಗದಿಪಡಿಸಬೇಕು ಎಂದು ಸಹ ಆಟೋ ಸಂಘಟನೆಗಳು ಆಗ್ರಹಿಸಿವೆ. ಸದ್ಯ ಪ್ರತಿ ಲೀಟರ್ ಗ್ಯಾಸ್ ದರ ₹ 56 ಕ್ಕೆ ಮಾರಾಟವಾಗುತ್ತಿದ್ದು, ಆಟೋ ಗ್ಯಾಸ್ ದರ ಒಂದೇ ದಿನದಲ್ಲಿ ₹ 5.50 ಏರಿಕೆ ಕಂಡಿದೆ. ಹೀಗಾಗಿ ಆಟೋ ಪ್ರಯಾಣದ ಕನಿಷ್ಠ ದರವನ್ನು (Auto Meter Minimum Rate) ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ (Karnataka Government) ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.
ಆಟೋ ಗ್ಯಾಸ್ ದರ ಏರಿಕೆಯಾಗಿರುವುದು ಆಟೋ ಚಾಲಕರ ಮತ್ತು ಮಾಲೀಕರ ಅಸೋಸಿಯೇಷನ್ ಗಳು ಸರ್ಕಾರದ ಮೇಲೆ ಅಸಮಾಧಾನಗೊಳ್ಳಲು ಕಾರಣವಾಗಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಆಟೋ ಕನಿಷ್ಠ ಮೀಟರ್ ದರ ಏರಿಕೆಯಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದೆ. ಆದರೆ ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲ. ಆಟೋ ಎಲ್ ಪಿಜಿ ದರ ಏರಿಕೆ ಆದ ಹಿನ್ನೆಲೆಯಲ್ಲಿ ಆಟೋ ಮಿನಿಮಲ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲು ಅವಕಾಶ ನೀಡುವಂತೆ ಈಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಆಟೋ ಚಾಲಕರಿಗೆ ಬಿತ್ತು ಬರೆ; ಎಲ್ಪಿಜಿ ಗ್ಯಾಸ್ ದರ ಏರಿಕೆ
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಏರಿಕೆ; ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?
(Auto Gas Rate Increased Appeal to Karnataka Government to increase Auto Meter Minimum fare)