‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’

2022ರ ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ. 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಡಾ. ಎನ್.ಕೆ. ಆರೋರಾ ಹೇಳಿದ್ದಾರೆ.

‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’
ಕೊವಿಡ್ ಲಸಿಕೆ ಪಡೆಯುತ್ತಿರುವ ಮಹಿಳೆ
Follow us
TV9 Web
| Updated By: ganapathi bhat

Updated on:Aug 03, 2021 | 3:51 PM

ಬೆಂಗಳೂರು: ಬೆಂಗಳೂರು ಘಟಕದಲ್ಲಿ ಭಾರತ್ ಬಯೋಟೆಕ್ ಕಂಪನಿಯ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ ಎದುರಾಗಿದೆ. ಆಗಸ್ಟ್ ತಿಂಗಳಲ್ಲಿ 20 ಕೋಟಿ ಡೋಸ್ ಲಸಿಕೆ ಸಿಗುವ ನಿರೀಕ್ಷೆ ಇದೆ. ಸ್ಪುಟ್ನಿಕ್ ವಿ ಲಸಿಕೆ 1, 2ನೇ ಡೋಸ್ ಸಮಸ್ಯೆ ಅನಿರೀಕ್ಷಿತವಾಗಿ ಎದುರಾಗಿದೆ. ಮೊದಲ ಡೋಸ್ ನೀಡಿದ್ದ ವಯಲ್‌ನಲ್ಲೇ 2ನೇ ಡೋಸ್ ನೀಡಲ್ಲ. ಈ ಸಮಸ್ಯೆ ಅನಿರೀಕ್ಷಿತ, ಇದರಿಂದ ಲಸಿಕೆ ಲಭ್ಯತೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು NTAGI ಮುಖ್ಯಸ್ಥ ಡಾಕ್ಟರ್ ಎನ್.ಕೆ. ಆರೋರಾ ಹೇಳಿಕೆ ನೀಡಿದ್ದಾರೆ.

ಭಾರತ್ ಬಯೋಟೆಕ್‌ನಿಂದ ತಿಂಗಳಿಗೆ 8-10 ಕೋಟಿ ಡೋಸ್ ಲಸಿಕೆ ಉತ್ಪಾದನೆ ನಿರೀಕ್ಷೆ ಇತ್ತು. ಆದರೆ, ಕಂಪನಿಯಿಂದ ಲಸಿಕೆ ಉತ್ಪಾದನೆಯಲ್ಲಿ ಅನಿಶ್ಚಿತತೆ ಕಂಡುಬಂದಿದೆ. ಹೀಗಾಗಿ ಪಾರ್ಲಿಮೆಂಟ್ ಉತ್ತರದಲ್ಲಿ ಗೊಂದಲವಾಗಿದೆ. ಆಗಸ್ಟ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

2022ರ ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ. 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಡಾ. ಎನ್.ಕೆ. ಆರೋರಾ ಹೇಳಿದ್ದಾರೆ.

ಭಾರತ್ ಬಯೋಟೆಕ್ ಕಂಪನಿಯಿಂದ ಆಗಸ್ಟ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಭಾರತಕ್ಕೆ ಫೈಜರ್, ಮಾಡೆರ್ನಾ ಲಸಿಕೆ ಬರಲು ಕಾನೂನು ರಕ್ಷಣೆ ನೀಡುವುದು ಅಡ್ಡಿಯಾಗಿದೆ. ಜೈಡಸ್ ಕ್ಯಾಡಿಲಾ ಕಂಪನಿಯಿಂದ ಲಸಿಕೆಯ ಅನುಮೋದನೆಗೆ ಹೆಚ್ಚಿನ ಮಾಹಿತಿ ಕೇಳಲಾಗಿದೆ. ವಿಷಯ ತಜ್ಞರ ಸಮಿತಿಯು ಜೈಡಸ್ ಕ್ಯಾಡಿಲಾ ಕಂಪನಿಯಿಂದ ಹೆಚ್ಚಿನ ಮಾಹಿತಿ ಕೇಳಿದೆ.

ಜೈ ಕೋವ್ ಡಿ, ಡಿಎನ್ಎ ಲಸಿಕೆ ಸಪ್ಟೆಂಬರ್ ಅಂತ್ಯದ ವೇಳೆಗೆ ಬಯೋಲಾಜಿಕಲ್ಸ್ ಇ ಕಂಪನಿಯ ಲಸಿಕೆಯ ಡಾಟಾ ಲಭ್ಯವಾಗಲಿದೆ. ಆಕ್ಟೋಬರ್ ವೇಳೆಗೆ ಬಯೋಲಾಜಿಕಲ್ಸ್ ಇ ಕಂಪನಿಯ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯ ಇರಲಿದೆ.

ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ಭಾರತದಲ್ಲಿ ತಮ್ಮ ಲಸಿಕೆ ಪ್ರಯೋಗದ ಅರ್ಜಿ ಹಿಂಪಡೆದಿವೆ. 2022 ರ ನಂತರ ವಿಶ್ವಕ್ಕೆ ಭಾರತವೇ ಕೊರೊನಾ ಲಸಿಕೆಯ ಪೂರೈಸಲಿದೆ. ಮುಂದಿನ‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯ ಆಗಲಿದೆ. ಈಗ ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡಿಕೆ ಆದ್ಯತೆ ಎಂದು ಡಾ. ಎನ್.ಕೆ. ಆರೋರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಅವಧಿ ವಿಸ್ತರಣೆ; ದಾವಣಗೆರೆಯಲ್ಲಿ ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ

3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

(Dr NK Arora on Coronavirus Covid19 Vaccine in India Bengaluru Vaccine Production Unit)

Published On - 3:50 pm, Tue, 3 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್