ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಅವಧಿ ವಿಸ್ತರಣೆ; ದಾವಣಗೆರೆಯಲ್ಲಿ ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ
ಕೊರೊನಾ ನಿಯಂತ್ರಣಕ್ಕೆ ಸದ್ಯ ಹಾಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು. ಹೀಗಾಗಿ, ಇಂದಿನಿಂದಲೇ ಪೊಲೀಸ್ ಇಲಾಖೆ, ಪಾಲಿಕೆ ಕಾರ್ಯಾಚಾರಣೆ ನಡೆಸಲಿದೆ. ಕಟ್ಟುನಿಟ್ಟಾಗಿ ನಿಯಮಗಳ ಜಾರಿಗೊಳಿಸಲು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರು: ನಗರದ ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ಕೇಸ್ ಹೆಚ್ಚಳ ವಿಚಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷವಾಗಿ ಅಪಾರ್ಟ್ಮೆಂಟ್ ಕಡೆ ಗಮನ ಹರಿಸುತ್ತಿದ್ದೇವೆ. ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ಹೆಚ್ಚಳ ನೋಡುತ್ತಿದ್ದೇವೆ. ಹೀಗಾಗಿ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಜತೆ ಮಾತಾಡುತ್ತೇವೆ. ಕೊವಿಡ್ ಸೋಂಕು ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಈಗಾಗಲೇ ಅಧಿಕಾರಿಗಳು ಸೀಲ್ಡೌನ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಚಾರವಾಗಿ ಗೌರವ್ ಗುಪ್ತಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು, ವೀಕೆಂಡ್, ನೈಟ್ ಕರ್ಫ್ಯೂ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಈ ಕುರಿತು, ನಿರಂತರವಾಗಿ ತಜ್ಞರ ಸಮಿತಿ ಜತೆ ಸಂಪರ್ಕದಲ್ಲಿ ಇದ್ದೇವೆ. ಬೆಂಗಳೂರಿನಲ್ಲಿ ನಿತ್ಯ 450ರಷ್ಟು ಹೊಸ ಕೊರೊನಾ ಪ್ರಕರಣ ಬರುತ್ತಿದೆ. ನಿತ್ಯ 20ರಿಂದ 25 ರಷ್ಟು ಜನರಿಂದ ಬೆಡ್ಗಳಿಗೆ ಬೇಡಿಕೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸದ್ಯ ಹಾಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು. ಹೀಗಾಗಿ, ಇಂದಿನಿಂದಲೇ ಪೊಲೀಸ್ ಇಲಾಖೆ, ಪಾಲಿಕೆ ಕಾರ್ಯಾಚಾರಣೆ ನಡೆಸಲಿದೆ. ಕಟ್ಟುನಿಟ್ಟಾಗಿ ನಿಯಮಗಳ ಜಾರಿಗೊಳಿಸಲು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ದಾವಣಗೆರೆ: ಶನಿವಾರ, ಭಾನುವಾರ ದೇಗುಲಗಳಿಗೆ ಭಕ್ತರ ಪ್ರವೇಶವಿಲ್ಲ ಶನಿವಾರ, ಭಾನುವಾರ ದಾವಣಗೆರೆ ಜಿಲ್ಲೆಯ ದೇಗುಲಗಳಿಗೆ ಭಕ್ತರ ಪ್ರವೇಶವಿಲ್ಲ. ವಾರದಲ್ಲಿ ಉಳಿದ ದಿನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ. ಪ್ರಸಾದ ವಿತರಣೆ, ಉತ್ಸವ, ಮುಡಿ ಸೇವೆಯೂ ನಿಷೇಧ ಆಗಿರಲಿದೆ. ಆದೇಶ ಉಲ್ಲಂಘಿಸಿದರೆ ದೇಗುಲದ ಸಮಿತಿಯೇ ಹೊಣೆ ಆಗಿರುತ್ತದೆ. ಸಮಿತಿ ವಿರುದ್ಧವೇ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಂತೇಶ ಬೀಳಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ; ತಲಪಾಡಿ ಗಡಿಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್
ಮೂರನೇ ಅಲೆಯ ಮಧ್ಯೆಯೂ ಮೋಜು ಮಸ್ತಿ.. ನ್ಯೂ ಹಾರಿಜಾನ್ ಕಾಲೇಜು ಆಗುತ್ತಾ ಕೊರೊನಾ ಹಾಟ್ ಸ್ಪಾಟ್?
(Coronavirus Covid19 Third Wave Bengaluru Night Weekend Curfew Temples closed in Davanagere during Weekend)