ಪ್ರಾಣ ಹೋದರೂ ಮತ್ತೆ ಕೊಚ್ಚುವ ದ್ವೇಷ; ರೌಡಿ ಶೀಟರ್ ಹರೀಶ್ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹರೀಶ್ಗಾಗಿ ಹೊಂಚು ಹಾಕಿ ಕೂತು ದಾಳಿ ಮಾಡಿದ ಆರೋಪಿಗಳು ಕೊಲೆ ಮಾಡಿದ್ದಾರೆ. ಮಚ್ಚಿನಲ್ಲಿ ಕೊಚ್ಚುವಾಗ ಶವವೇ ಮೇಲೆ ಬರುತ್ತಿದ್ದ ಭಯಾನಕ ದೃಶ್ಯ ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ರೌಡಿ ಶೀಟರ್ ಹರೀಶ್ನನ್ನು ಹಾಡು ಹಗಲೇ ಕೊಚ್ಚಿ ಕೊಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಜುಲೈ 28 ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್, ಇಂದ್ರಜೀತ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. 2017 ರಲ್ಲಿ ಪ್ರಮುಖ ಆರೋಪಿ ರಕ್ಷಿತ್ನ ಕಿವಿ ಕತ್ತರಿಸಿದ್ದ, ಹರೀಶ್ ಮೇಲೆ ಹಳೆ ದ್ವೇಷ ತಿರಿಸಿಕೊಳ್ಳಲು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ತಿಳಿಸಿದ್ದಾನೆ.
ಹರೀಶ್ಗಾಗಿ ಹೊಂಚು ಹಾಕಿ ಕೂತು ದಾಳಿ ಮಾಡಿದ ಆರೋಪಿಗಳು ಕೊಲೆ ಮಾಡಿದ್ದಾರೆ. ಮಚ್ಚಿನಲ್ಲಿ ಕೊಚ್ಚುವಾಗ ಶವವೇ ಮೇಲೆ ಬರುತ್ತಿದ್ದ ಭಯಾನಕ ದೃಶ್ಯ ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರತಿದಿನ ಹರೀಶ್ ಕತ್ತರಿಸಿದ ಕಿವಿಯ ನೋವಿನಿಂದ ಬಳಲುತ್ತಿದ್ದೆ ಇದನ್ನು ನೋಡಿ ನನ್ನ ತಾಯಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದರು. ಹೀಗಾಗಿ ಸ್ನೇಹಿತರ ಜತೆಗೂಡಿ ಸಿಆರ್ಪಿಸಿ 110 ಪ್ರೋಸೆಸ್ ಮುಗಿಸಿ ಪೊಲೀಸ್ ಠಾಣೆಯಿಂದ ವಾಪಾಸ್ ಬಂದ ಹರೀಶ್ನನ್ನು ಹತ್ಯೆ ಮಾಡಿದ್ದೇನೆ ಎಂದು ತನಿಖೆ ವೇಳೆ ರಕ್ಷಿತ್ ತಿಳಿಸಿದ್ದಾನೆ.
ವಿಜಯಪುರ : ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ ಪತಿ ಮನೆಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದಲ್ಲಿ ನಡೆದಿದೆ. ಅರುಣಾ ಸಾವಿಗೆ ಪತಿ ಶರಣು ಆತನ ಸಹೋದರಿ ಶೈಲಾ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅರುಣಾ ಶರಣು ಕೆಂಬಾವಿ (22) ಮೃತ ಮಹಿಳೆ. ಸದ್ಯ ಇದು ಕೊಲೆಯೋ ಆತ್ಮಹತ್ಯೆಯೋ ಎಂಬುವುದು ಪೊಲೀಸರ ತನಿಖೆ ಬಳಿಕ ತಿಳಿದು ಬರಬೇಕಿದೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಗೆ ಒಪ್ಪದ ಅಮ್ಮನ ಹತ್ಯೆ ಮಾಡಿದ ಬಾಲಕಿ; ವಿಡಿಯೋ ಕಾಲ್ನಲ್ಲೇ ಕೊಲೆ ಮಾಡುವುದನ್ನು ಕಲಿಸಿದ ಪ್ರಿಯತಮ
Published On - 1:59 pm, Sat, 7 August 21