ರಸ್ತೆ ಗುಂಡಿ ಮುಚ್ಚಲು ಪ್ರತಿ ವಾರ್ಡ್​ಗೆ 15 ಲಕ್ಷ ರೂ ಬಿಡುಗಡೆ ಮಾಡಿದ ಬಿಬಿಎಂಪಿ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಂಚಿಕೆ

|

Updated on: Oct 24, 2023 | 9:04 AM

ಬಿಬಿಎಂಪಿಯು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ 225 ವಾರ್ಡ್‌ಗಳಿಗೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಿದೆ. ನವೆಂಬರ್‌ನಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಲಿದೆ. ಬಿಬಿಎಂಪಿ ಕಳೆದ ವರ್ಷ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ನೀಡಿದ್ದು, ಈ ಬಾರಿ ಹಂಚಿಕೆ ಕಡಿತಗೊಂಡಿದೆ.

ರಸ್ತೆ ಗುಂಡಿ ಮುಚ್ಚಲು ಪ್ರತಿ ವಾರ್ಡ್​ಗೆ 15 ಲಕ್ಷ ರೂ ಬಿಡುಗಡೆ ಮಾಡಿದ ಬಿಬಿಎಂಪಿ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಂಚಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.24: ಮಾನ್ಸೂನ್ (Monsoon) ಮುಗಿಯುತ್ತಿದ್ದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ (potholes). 225 ವಾರ್ಡ್‌ಗಳಿಗೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಿದೆ. ನವೆಂಬರ್‌ನಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಲಿದೆ. ವಾರ್ಡ್ ಸಮಿತಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 5 ಲಕ್ಷ ರೂ. ಕಡಿಮೆ ಹಂಚಲಾಗಿದೆ.

ಬಿಬಿಎಂಪಿ ಕಳೆದ ವರ್ಷ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ನೀಡಿದ್ದು, ಈ ಬಾರಿ ಹಂಚಿಕೆ ಏಕೆ ಕಡಿತಗೊಂಡಿದೆ ಎಂಬ ಬಗ್ಗೆ ವಿವರಣೆ ನೀಡಿಲ್ಲ. ಖಜಾನೆಯಲ್ಲಿ ಹಣದ ಕೊರತೆಯಿರುವುದರಿಂದ ವಿವೇಚನೆಯಿಂದ ಹಣವನ್ನು ಖರ್ಚು ಮಾಡುವಂತೆ ಸರ್ಕಾರವು ಕೇಳಿದೆ ಎಂದು ಬಿಬಿಎಂಪಿಯ ಮೂಲಗಳು ತಿಳಿಸಿವೆ. 15 ಲಕ್ಷದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸಬಹುದು. 1 ಚದರ ಮೀಟರ್‌ ಗುಂಡಿ ಮುಚ್ಚಲು 1,200 ರೂ. ವೆಚ್ಚವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ವಾರ್ಡ್ ಸಮಿತಿಗಳು ಕಾಮಗಾರಿಯನ್ನು ಕಟ್ಟುನಿಟ್ಟಾಗಿ ಗಮನಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮತ್ತೊಂದೆಡೆ, ಉಪಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಗುತ್ತಿಗೆದಾರರ ಹೆಸರು, ಯೋಜನೆಯ ವೆಚ್ಚ ಮತ್ತು ಇತರ ವಿವರಗಳ ಬಗ್ಗೆ ಗಮನ ಇಡಲು ಬೋರ್ಡ್‌ಗಳನ್ನು ನಿಯೋಜಿಸಲು ಬಿಬಿಎಂಪಿಗೆ ಸೂಚಿಸಿದೆ. ಕಾಮಗಾರಿ ವೇಳೆ ತಪ್ಪು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ: ಇಲ್ಲಿದೆ ಟೈಮಿಂಗ್ ಮಾಹಿತಿ

ಇನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನವೆಂಬರ್‌ನಿಂದ ಗುಂಡಿಗಳನ್ನು ತುಂಬಲು ವಲಯ ಮತ್ತು ವಾರ್ಡ್ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ. ಪ್ರತಿ ವಾರ್ಡ್‌ಗೆ 15 ಲಕ್ಷ ರೂ. ನೀಡಲಾಗಿದ್ದು ಅವುಗಳಲ್ಲಿ ಕೆಲವು ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ಟೆಂಡರ್ ಒಪ್ಪಂದವು 12 ತಿಂಗಳ ಅವಧಿಗೆ ಇರುತ್ತದೆ, ”ಎಂದು ಹೇಳಿದರು.

ಇಂಜಿನಿಯರ್‌ಗಳು ಹಣವನ್ನು ಬುದ್ಧಿವಂತಿಕೆಯಿಂದ ಬಳಸಿದರೆ, ಅವರು ವಾರ್ಡ್‌ನಲ್ಲಿ 1,250 ಕ್ಕೂ ಹೆಚ್ಚು ಗುಂಡಿಗಳನ್ನು ತುಂಬಬಹುದು. ಒಂದು ಚದರ ಮೀಟರ್ ಗುಂಡಿ ತುಂಬಲು 1200 ರೂ. ಸಾಕು. ಪ್ರತಿ ಶಾಸಕರು ಸರ್ಕಾರದಿಂದ 80 ರಿಂದ 200 ಕೋಟಿ ರೂಪಾಯಿಗಳನ್ನು ಪಡೆದಿದ್ದರಿಂದ ಚುನಾವಣೆಗೆ ಮುನ್ನ ಬಿಬಿಎಂಪಿ ಅನೇಕ ವಾರ್ಡ್ ರಸ್ತೆಗಳನ್ನು ಡಾಂಬರೀಕರಣಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:02 am, Tue, 24 October 23