Town Hall: ಟೌನ್‌ ಹಾಲ್‌ ಬಾಡಿಗೆ ದರ ಪರಿಷ್ಕರಣೆ, ರಂಗಭೂಮಿ ಚಟುವಟಿಕೆಗಳಿಗೆ ಶೇಕಡ 50% ರಿಯಾಯಿತಿ

ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಸಲುವಾಗಿ ಪಾಲಿಕೆಯ ಒಡೆತನದಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿದೆ.

Town Hall: ಟೌನ್‌ ಹಾಲ್‌ ಬಾಡಿಗೆ ದರ ಪರಿಷ್ಕರಣೆ, ರಂಗಭೂಮಿ ಚಟುವಟಿಕೆಗಳಿಗೆ ಶೇಕಡ 50% ರಿಯಾಯಿತಿ
ಟೌನ್‌ ಹಾಲ್‌
Edited By:

Updated on: Aug 29, 2022 | 5:40 PM

ಬೆಂಗಳೂರು: ಟೌನ್‌ ಹಾಲ್‌ ಬಾಡಿಗೆ ದರ ಪರಿಷ್ಕರಣೆ ಮಾಡಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಆದೇಶ ಹೊರಡಿಸಿದ್ದಾರೆ. ಟೌನ್‌ ಹಾಲ್‌ ಎಂದೇ ಪ್ರಸಿದ್ಧವಾಗಿರುವ ಸರ್‌ ಪುಟ್ಟಣ ಚೆಟ್ಟಿ ಪುರಭವನದ ಬಾಡಿಗೆ ದರ ಪರಿಷ್ಕರಣೆಗೆ ಸೂಜಿಸಲಾಗಿದ್ದು ಸೆಪ್ಟೆಂಬರ್‌ 1ರಿಂದ ಇದು ಜಾರಿಗೆ ಬರಲಿದೆ. ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಶೇಕಡ 50 ರಿಯಾಯಿತಿಯನ್ನೂ ಬಿಬಿಎಂಪಿ ಘೋಷಿಸಿದೆ.

ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಸಲುವಾಗಿ ಪಾಲಿಕೆಯ ಒಡೆತನದಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಪೂರ್ತಿ ದಿನ(ಬೆಳಗ್ಗೆ 8.00 ರಿಂದ ರಾತ್ರಿ 10.00 ಗಂಟೆಯವರೆಗೆ)ಕ್ಕೆ ಎ.ಸಿ(Air Conditioner) ಇದ್ದರೆ 75,000 ರೂ. ಹಾಗೂ ನಾನ್ ಎ.ಸಿ(Non Air Conditioner)ಗೆ 60,000 ರೂ. ನಿಗದಿಪಡಿಸಲಾಗಿತ್ತು. ಇದೀಗ ದರ ಪರಿಷ್ಕರಿಸಿದ್ದು, ಪೂರ್ತಿ ದಿನಕ್ಕೆ ಎ.ಸಿಗೆ 60,000 ರೂ. ಹಾಗೂ ನಾನ್ ಎ.ಸಿಗೆ 50,000 ದರ ನಿಗದಿಪಡಿಸಲಾಗಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ‌.

ಅಲ್ಲದೆ, ಮೊದಲಾರ್ಧ ದಿನ(ಬೆಳಗ್ಗೆ 8.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ) ಹಾಗೂ ದ್ವಿತಿಯಾರ್ಧ ದಿನ(ಮಧ್ಯಾಹ್ನ 3.00 ರಿಂದ ರಾತ್ರಿ 10.00 ಗಂಟೆಯವರೆಗೆ)ಕ್ಕೆ ಎ.ಸಿಗೆ 30,000 ಹಾಗೂ ನಾನ್ ಎ.ಸಿಗರ 25,000 ರೂ. ದರ ನಿಗದಿ ಮಾಡಲಾಗಿದೆ. ತೆರಿಗೆಗಳು ಪ್ರತ್ಯೇಕವಾಗಿರುತ್ತದೆ‌. ಕನ್ನಡ ರಂಗಭೂಮಿಯ ಎಲ್ಲಾ ನಾಟಕ – ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ