KMF: ಗೌರಿ ಗಣೇಶ ಹಬ್ಬಕ್ಕೆ ಕೆಎಂಎಫ್ ಬಿಡುಗಡೆ ಮಾಡ್ತು ಥರಹೇವಾರಿ ಹಾಲು ಉತ್ಪನ್ನ, ಸದ್ಯದಲ್ಲೇ ಪಿಜ್ಜಾ ಸಹ ಲಭ್ಯ!
ಜಯನಗರ, ಕಸ್ತೂರಿ ನಗರ ಸೇರಿದಂತೆ 4 ಕಡೆ ನಂದಿನಿ ಕೆಫೆಯಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಹಾಸನದಲ್ಲಿಯೂ ನಂದಿನಿ ಕೆಫೆ ಉದ್ಘಾಟಿಸುತ್ತೇವೆ. ಕೇರಳದಲ್ಲಿ ನಂದಿನಿ ಕೆಫೆ ಉದ್ಘಾಟನೆಗೆ ಸಿದ್ದತೆ ನಡೆದಿದೆ. ಸೆಪ್ಟೆಂಬರ್ 30 ರಂದು ಮಂಗಳೂರಿನಲ್ಲಿ 2 ಕೆಫೆಗಳ ಉದ್ಘಾಟನೆಯಾಗಲಿದೆ.
ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ (Ganesh Chaturthi 2022) ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳವು (Karnataka Milk Federation -KMF) ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಡೈರಿ ಸರ್ಕಲ್‌ನಲ್ಲಿರುವ ಕೆಎಂಎಫ್ ಕಚೇರಿಯಲ್ಲಿ ಹಬ್ಬದ ಪ್ರಯುಕ್ತ 8 ವಿವಿಧ ಮಾದರಿ ಹೊಸ ಸಿಹಿ ತಿನಿಸುಗಳನ್ನು ಬಿಡುಗಡೆ ಮಾಡಿದೆ. 2 ಬಗೆಯ ಬಿಸ್ಕತ್‌ಗಳು , ಪನ್ನೀರ್ ಮುರುಕು ಮತ್ತು ಗುಡ್‌ಲೈಫ್ ಚಾಕೋಲೇಟ್ ಗಿಫ್ಟ್ ಬಾಕ್ಸ್ ಬಿಡುಗಡೆಗೊಂಡ ನೂತನ ಹಾಲು ಉತ್ಪನ್ನಗಳು.
45 ವರ್ಷಗಳಿಂದ ಹಾಲು, ಮೊಸರು ಹಾಗು ತುಪ್ಪ ಮಾರಾಟ ಮಾಡಲಾಗ್ತಿದೆ. 3 ವರ್ಷಗಳಿಂದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಈ ವರ್ಷ ಮೊಟ್ಟಮೊದಲ ಬಾರಿಗೆ ಮೈಸೂರಿನ ಜಂಬೂ ಸವಾರಿಯಲ್ಲಿ ಸಂಸ್ಥೆಯ ಟ್ಯಾಬ್ಲೂ ಅನಾವರಣಗೊಳ್ಳಲಿದೆ. ಸೆಪ್ಟೆಂಬರ್ 12 ರಿಂದ 15 ರವರೆಗೆ ದೆಹಲಿಯಲ್ಲಿ ಡೈರಿ ಸಮ್ಮೇಳನ ನಡೆಯಲಿದೆ. ಪ್ರತಿನಿತ್ಯ ಕೆಎಂಎಫ್‌ನಲ್ಲಿ 40 ಮೆಟ್ರಿಕ್ ಟನ್ ಖೋವಾ, ಚೀಸ್, ಪನ್ನೀರ್ ಉತ್ಪಾದನೆ ಆಗ್ತಿದೆ.
ಕೆಎಂಎಫ್ ನಿಂದ ಪಿಜ್ಜಾ ಕೂಡ ಲೋಕಾರ್ಪಣೆಯಾಗಲಿದೆ. 48 ವರ್ಷಗಳ ನಂತರ ಅಂತರಾಷ್ಟ್ರೀಯ ಡೈರಿ ಸಮ್ಮೇಳನದಲ್ಲಿ ಇದು ಲೋಕಾರ್ಪಣೆಯಾಗಲಿದೆ. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯಲಿದೆ. ಮುಂದಿನ 50 ವರ್ಷಗಳಿಗೆ ಬೇಕಾಗಿರುವ ತಂತ್ರಜ್ಞಾನ ಕುರಿತು ಸಮಾಲೋಚನೆ ನಡೆಯಲಿದೆ. ಅಮೂಲ್ ಜತೆ ಕೋ ಸ್ಪಾನ್ಸರ್ ಆಗಿ ಕಾರ್ಯಕ್ರಮ ನೆರವೇರಿಸುತ್ತಿದ್ದೇವೆ. ರಾಜ್ಯ ಮಾತ್ರವಲ್ಲದೇ 8 ರಿಂದ 10 ರಾಜ್ಯಗಳಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ಮುಂಬೈನಲ್ಲಿ ಪ್ರತಿನಿತ್ಯ 2 ಲಕ್ಷ ಲೀಟರ್ ಮಾರಾಟ ಮಾಡುತ್ತಿದ್ದೇವೆ. ಕೇರಳ, ಚೆನೈ, ಹೈದರಾಬಾದ್, ಗೋವಾ, ಪೂಣೆ ಸೇರಿದಂತೆ ಹಲವು ರಾಜ್ಯದಲ್ಲಿ ಮಾರಾಟವಾಗುತ್ತಿದೆ. ದಿನಕ್ಕೆ 5 ಲಕ್ಷ ಲೀಟರ್ ಹಾಲು ಬೇರೆ ರಾಜ್ಯಗಳಲ್ಲಿ ಮಾರಾಟವಾಗ್ತಿದೆ.
ಜನವರಿ 1, 2023 ಕ್ಕೆ ದೆಹಲಿಯಲ್ಲಿ 5 ಲಕ್ಷ ಲೀಟರ್ ಮಾರಾಟ ಮಾಡಲು ಸಿದ್ದತೆ ನಡೆಸುತ್ತಿದ್ದೇವೆ. ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶದಲ್ಲೂ ಹಾಲು ಮಾರಾಟ ಗುರಿ ಹೊಂದಲಾಗಿದೆ. ಇನ್ನೂ 5 ಉತ್ತರ ಭಾರತ ರಾಜ್ಯದಲ್ಲಿ ವಿಸ್ತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಡಿಸೆಂಬರ್ 2022ರ ವೇಳೆಗೆ 100 ಮೆಟ್ರಿಕ್ ಟನ್ ಚಾಕೊಲೆಟ್ ಮಾರಾಟ ಮಾಡುತ್ತೇವೆ. 5 ಕೋಟಿ flavoured milk ಬಾಟಲಿಗಳನ್ನು ನಾವೀಗ ಮಾರಾಟ ಮಾಡಿದ್ದೇವೆ.
ವಿಮಾನಗಳಲ್ಲಿ 5 ಸಾವಿರ ಬಾಟಲ್, ರೈಲಿನಲ್ಲಿ 5 ಲಕ್ಷ ಬಾಟಲ್ ಪ್ರತಿನಿತ್ಯ ಮಾರಾಟ ಮಾಡ್ತಿದ್ದೇವೆ. ಜಯನಗರ, ಕಸ್ತೂರಿ ನಗರ ಸೇರಿದಂತೆ 4 ಕಡೆ ನಂದಿನಿ ಕೆಫೆಯಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಹಾಸನದಲ್ಲಿಯೂ ನಂದಿನಿ ಕೆಫೆ ಉದ್ಘಾಟಿಸುತ್ತೇವೆ. ಕೇರಳದಲ್ಲಿ ನಂದಿನಿ ಕೆಫೆ ಉದ್ಘಾಟನೆಗೆ ಸಿದ್ದತೆ ನಡೆದಿದೆ. ಸೆಪ್ಟೆಂಬರ್ 30 ರಂದು ಮಂಗಳೂರಿನಲ್ಲಿ 2 ಕೆಫೆಗಳ ಉದ್ಘಾಟನೆಯಾಗಲಿದೆ. ಕೆ.ಎಂ.ಎಫ್. ವ್ಯಸವ್ಥಾಪಕ ನಿರ್ದೇಶಕರಾದ ಬಿ.ಸಿ. ಸತೀಶ್ ಮಾಹಿತಿ ನೀಡಿದ್ದಾರೆ.
Published On - 4:46 pm, Mon, 29 August 22