Bengaluru: ಸದಾಶಿವನಗರದ ಸ್ಯಾಂಕಿ ಟ್ಯಾಂಕ್​ನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ; ನಿಯಮಗಳು ಇಲ್ಲಿದೆ

| Updated By: ganapathi bhat

Updated on: Sep 10, 2021 | 2:36 PM

Ganesh Chaturthi 2021: ಥರ್ಮಲ್ ಸ್ಕ್ರೀನಿಂಗ್ ಬಳಿಕ ಗಣೇಶ ವಿಸರ್ಜನೆಗೆ ಅವಕಾಶ ಕೊಡಲಾಗುವ ಬಗ್ಗೆ ಹೇಳಲಾಗಿದೆ. ಇಬ್ಬರಿಗೆ ಮಾತ್ರ ಹೊಂಡದವರೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಶಿವಸ್ವಾಮಿ ತಿಳಿಸಿದ್ದಾರೆ.

Bengaluru: ಸದಾಶಿವನಗರದ ಸ್ಯಾಂಕಿ ಟ್ಯಾಂಕ್​ನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ; ನಿಯಮಗಳು ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದಾಶಿವನಗರದ ಸ್ಯಾಂಕಿ ಟ್ಯಾಂಕ್​​ನಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು, ಬೆಂಗಳೂರಿನಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶಿವಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂದಿನಿಂದ 3 ದಿನ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವುದು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ವಿಸರ್ಜನೆಗೆ ಅನುವು ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವಿಸರ್ಜನೆ ವೇಳೆ ಕೊವಿಡ್ ನಿಯಮ ಪಾಲಿಸುವಂತೆ ಸೂಚನೆ ಕೊಡಲಾಗಿದೆ. ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಬಳಿಕ ಗಣೇಶ ವಿಸರ್ಜನೆಗೆ ಅವಕಾಶ ಕೊಡಲಾಗುವ ಬಗ್ಗೆ ಹೇಳಲಾಗಿದೆ. ಇಬ್ಬರಿಗೆ ಮಾತ್ರ ಹೊಂಡದವರೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಶಿವಸ್ವಾಮಿ ತಿಳಿಸಿದ್ದಾರೆ.

ವಾರ್ಡ್​ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಕೂರಿಸಲು ಅನುಮತಿ
ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಬಿಬಿಎಂಪಿ ಮಣಿದಿತ್ತು. ಬೇಡಿಕೆ ಬಂದಲ್ಲಿ ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದರು. ವಿಶೇಷ ಆಯುಕ್ತರ ಮಾತಿಗೆ ಒಪ್ಪಿದ ಗಣೇಶ ಉತ್ಸವ ಸಮಿತಿ, ಮೂರ್ತಿ ತಯಾರಕರ ಧರಣಿಯನ್ನು ಹಿಂಪಡೆದಿದ್ದರು.

ಇದನ್ನೂ ಓದಿ: ಮಾಸ್ಕ್​ ಧರಿಸಿ ವ್ಯಾಕ್ಸಿನ್ ಹಿಡಿದ ಗಣಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗಣೇಶ ಚತುರ್ಥಿಗೆ ಶುಭಾಶಯ

ಇದನ್ನೂ ಓದಿ: ಕೋಲಾರ: ತಾಲಿಬಾನಿಗಳಿಗೆ, ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಬುದ್ಧಿ ಕಲಿಸುತ್ತಿರುವ ಪರಿಕಲ್ಪನೆಯಲ್ಲಿ ಗಣೇಶ

Published On - 2:27 pm, Fri, 10 September 21