ಬೆಂಗಳೂರು, ಡಿ.24: ಇನ್ನೇನು ಹೊಸ ವರ್ಷ(New Year) ಹತ್ತಿರ ಬರುತ್ತಿದ್ದು, ಈ ಹಿನ್ನಲೆ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ವಿಚಾರ ‘ಡಿ.27ರಂದು ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ(BBMP Chief Commissioner) ತುಷಾರ್ ಗಿರಿನಾಥ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ, ಪೊಲೀಸ್ ಇಲಾಖೆ, ಬಿಬಿಎಂಪಿ ಸೇರಿ ಗೈಡ್ಲೈನ್ಸ್ ಸಿದ್ಧಪಡಿಸುತ್ತೇವೆ ಎಂದರು.
ಇನ್ನು ಕೊರೊನಾ ವಿಚಾರವಾಗಿ ‘ಸರ್ಕಾರ ಕೊಟ್ಟಿರುವ ಟಾರ್ಗೆಟ್ನಂತೆ ಟೆಸ್ಟಿಂಗ್ ಮಾಡಿದ್ದೇವೆ. ಮೊದಲ ದಿನ ಟಾರ್ಗೆಟ್ಗಿಂತ ಹೆಚ್ಚು ಟೆಸ್ಟಿಂಗ್ ಮಾಡಿದ್ದು, ಆರೋಗ್ಯ ಇಲಾಖೆ ಸೂಚನೆಯಂತೆ ಲ್ಯಾಬ್ಗೆ ರವಾನೆಯಾಗುತ್ತಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತಾದರೂ, ಅದನ್ನ ಸರಿಪಡಿಸಿ ಟೆಸ್ಟಿಂಗ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:New Year Covid Guidelines: ಹೊಸ ವರ್ಷಾಚರಣೆಗೆ ಮಾಸ್ಕ್ ಕಡ್ಡಾಯಕ್ಕೆ ಟ್ಯಾಕ್ ಮನವಿ, ಕಠಿಣ ನಿಯಮ ಡೌಟ್
ಇನ್ನು ಹೊಸ ವರ್ಷ ಹಿನ್ನಲೆ ಬೆಂಗಳೂರು ನಗರ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದು, ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನಿಂಗ್ ನಡೆಸಿದ್ದರು. ಅದರಂತೆ ಡಿ.17 ರಂದು ಪಾಲಿಕೆ ಜೊತೆ ಸಭೆ ನಡೆಸಿ ಪೊಲೀಸರು ಗೈಡ್ ಲೈನ್ಸ್ ರೆಡಿ ಮಾಡಿದ್ದರು. ನಗರದ ಬ್ರಿಗೇಡ್ ರೋಡ್, ಎಂಜಿ ರಸ್ತೆಯಲ್ಲಿ ಹೊಸ ಅಲೆಯ ವರ್ಷಾಚರಣೆಗೆ ಹೆಚ್ಚಿನ ಜನ ಸೇರುತ್ತಾರೆ. ಹಾಗಾಗಿ ಪ್ರತಿ ಬಾರಿ ಒಂದಷ್ಟು ಗೊಂದಲ ಮತ್ತು ಅಹಿತಕರ ಘಟನೆ ನಡೆಯುತ್ತದೆ. ಈ ಬಾರಿ ಆ ರೀತಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.
ಇನ್ನು ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ತಯಾರಿ ನಡೆಸಲಾಗಿದೆ. ಇದಕ್ಕೋಸ್ಕರ ಮಾದಕ ಲೋಕ ಕೂಡ ಸಿದ್ಧವಾಗಿದ್ದು, ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ