New Year Covid Guidelines: ಹೊಸ ವರ್ಷಾಚರಣೆಗೆ ಮಾಸ್ಕ್ ಕಡ್ಡಾಯಕ್ಕೆ ಟ್ಯಾಕ್ ಮನವಿ, ಕಠಿಣ ನಿಯಮ ಡೌಟ್
ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಲಾಕ್ಡೌನ್ ಆಗುತ್ತಾ? ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್ ಬೀಳುತ್ತಾ? ಹೊಸ ವರ್ಷಕ್ಕೆ ಕಠಿಣ ನಿಯಮ ಜಾರಿಯಾಗುತ್ತಾ ಎಂಬ ಚಿಂತೆಯಲ್ಲಿ ಜನರಿದ್ದಾರೆ. ಆದರೆ, ಉದ್ಯಮಗಳ ಆರ್ಥಿಕತೆ ದೃಷ್ಟಿಯಿಂದ ಈ ಬಾರಿ ಹೊಸ ವರ್ಷಕ್ಕೆ ಕಠಿಣ ನಿಯಮ ಜಾರಿ ಮಾಡುವ ಸಾಧ್ಯತೆ ಕಡಿಮೆ ಇದೆ. ರೂಲ್ಸ್ ಜಾರಿ ಮಾಡುದಿದ್ದರೂ ಉದ್ಯಮಗಳನ್ನ ಗಮನದಲ್ಲಿಟ್ಟು ಜಾರಿ ಮಾಡುವ ಸಾಧ್ಯತೆ ಇದೆ.
ಬೆಂಗಳೂರು, ಡಿ.21: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು (Covid Cases) ಹೆಚ್ಚುತ್ತಿದ್ದು, ಲಾಕ್ಡೌನ್ ಆಗುತ್ತಾ? ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್ ಬೀಳುತ್ತಾ? ಹೊಸ ವರ್ಷಕ್ಕೆ ಕಠಿಣ ನಿಯಮ ಅಥವಾ ಹೊಸ ಮಾರ್ಗಸೂಚಿ (New Year Covid Guidelines) ಜಾರಿಯಾಗುತ್ತಾ ಎಂಬ ಚಿಂತೆಯಲ್ಲಿ ಜನರಿದ್ದಾರೆ. ಆದರೆ, ಉದ್ಯಮಗಳ ಆರ್ಥಿಕತೆ ದೃಷ್ಟಿಯಿಂದ ಈ ಬಾರಿ ಹೊಸ ವರ್ಷಕ್ಕೆ ಕಠಿಣ ನಿಯಮ ಜಾರಿ ಮಾಡುವುದು ಅನುಮಾನವಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ TAC ಸಮಿತಿ ಸದಸ್ಯರು ಹೊಸ ವರ್ಷಕ್ಕೆ ಕಠಿಣ ನಿಯಮ ಜಾರಿ ಮಾಡುವ ಬಗ್ಗೆ ಮನವಿ ಮಾಡಿಲ್ಲ.
ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗಲಿದೆ; ಸಿಎಂಗೆ ತಜ್ಞರ ವರದಿ
ಸದ್ಯ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ತೀವ್ರವಾಗಿ ಹೆಚ್ಚುತ್ತಿಲ್ಲ. ಹೀಗಾಗಿ ಹೊಸ ವರ್ಷಕ್ಕೆ ಕಠಿಣ ನಿಯಮ ಜಾರಿ ಮಾಡುವುದು ಅನುಮಾನವಾಗಿದೆ. ಕಠಿಣವಾದ ರೂಲ್ಸ್ ಜಾರಿ ಮಾಡಿದರೆ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಉದ್ಯಮಗಳ ಆರ್ಥಿಕತೆಗೆ ಹೊಡೆತ ಬೀಳಲಿದೆ.
ಸಭೆಯಲ್ಲಿ ಹೊಸ ವರ್ಷಕ್ಕೆ ಟ್ಯಾಕ್ ಕೊಟ್ಟ ಸಲಹೆ
- ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ವಯೋಸಹಜ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
- ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹೊರಗೆ ಓಡಾಟಕ್ಕೆ ನಿರ್ಬಂಧ
- ಮಾಸ್ಕ್ ಅಸ್ತ್ರ ಬಿಟ್ಟು ಬೇರೆ ಯಾವುದೇ ಕಠಿಣ ರೂಲ್ಸ್ ಬೇಡಾ
ಟ್ಯಾಕ್ ಸಲಹೆ ಹಿನ್ನೆಲೆ ಹೊಸ ವರ್ಷಕ್ಕೆ ಮಾಸ್ಕ್ ಹೊರತುಪಡಿಸಿ ಬೇರೆ ಕಠಿಣ ರೂಲ್ಸ್ ಜಾರಿ ಅನುಮಾನವಾಗಿದೆ. ಸಭೆಯಲ್ಲಿ ಹೊಸ ತಳಿ JN.1 ತೀವ್ರತೆ ಹಾಗೂ ಹರಡುವಿಕೆಯ ವೇಗದ ಬಗ್ಗೆ ತಜ್ಞರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪಿನ್ ಅಂಪೂರ್ಣ ಮಾಹಿತಿ ನೀಡಲಾಗಿದ್ದು, ಇದರ ನಿಯಂತ್ರಣಕ್ಕೆ ಮಾಡಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆದಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ