AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಇಬ್ಬರು ಕಿರಾತಕರು ಆಟೋಗಳನ್ನೇ ಕಳ್ಳತನ ಮಾಡ್ತಿದ್ರು! ಯಾಕೆ ಗೊತ್ತಾ?

ರಾಯಚೂರಿನ ಸದರ್ ಬಜಾರ್ ಠಾಣೆ ಪೊಲೀಸರಿಗೆ ದೂರುಗಳು ಬರ್ತಿದ್ದಂತೆ ಖಾಕಿ ಪಡೆ ಅಲರ್ಟ್ ಆಗಿತ್ತು.. ವೃತ್ತಿಪರ ಆಟೋ ಕಳ್ಳರ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ರು.. ನೈಟ್ ಬೀಟ್ ಹೆಚ್ಚು ಮಾಡಿಕೊಂಡು ಕಳ್ಳರ ಪತ್ತೆಗೆ ಇಳಿದಿದ್ದರು.. ಈ ವೇಳೆ ಲಾಕ್ ಆಗಿದ್ದೇ ಈ ಮೊಹಮ್ಮದ್ ಸೊಹೈಲ್ ಹಾಗೂ ನಬಿ.

ಆ ಇಬ್ಬರು ಕಿರಾತಕರು ಆಟೋಗಳನ್ನೇ ಕಳ್ಳತನ ಮಾಡ್ತಿದ್ರು! ಯಾಕೆ ಗೊತ್ತಾ?
ಆ ಇಬ್ಬರು ಕಿರಾತಕರು ಆಟೋಗಳನ್ನೇ ಕಳ್ಳತನ ಮಾಡ್ತಿದ್ರು!
TV9 Web
| Updated By: ಸಾಧು ಶ್ರೀನಾಥ್​|

Updated on: Dec 21, 2023 | 12:27 PM

Share

ಅಲ್ಲಿ ಬಡ ಆಟೋ ಚಾಲಕರ ಬದುಕಿನ ಮೇಲೆ ಆ ಕಿರಾತಕರು ಬರೆ ಎಳೆದಿದ್ರು. ತಿಂಗಳಲ್ಲಿ ಒಂದಲ್ಲಾ ಒಂದು ಆಟೋ ಕಳ್ಳತನವಾಗುತ್ತಲೇ ಇತ್ತು. ಈ ಬಗ್ಗೆ ನೈಟ್ ರೌಂಡ್​ ಆಪರೇಶನ್ ವೇಳೆ ಖತರ್ನಾಕ್ ಕಳ್ರು ಪೊಲೀಸರ ಖೆಡ್ಡಾಗೆ ಬಿದ್ದಿದ್ರು, ಆ ಐನಾತಿಗಳು ಆಟೋಗಳನ್ನೇ ಯಾಕೆ ಕಳ್ಳತನ ಮಾಡ್ತಿದ್ರು ಅನ್ನೋ ಸತ್ಯ ಕೇಳಿ ಖಾಕಿ ಪಡೆಯೇ ಶಾಕ್ ಆಗಿದೆ.

ಫೋಟೋದಲ್ಲಿ ಕಾಣ್ತಿರೊ ಐನಾತಿಗಳನ್ನ ನೋಡಿದ್ರೆ ಪಾಪ ಅಮಾಯಕರು ಅಂತ ಅನ್ನಿಸುತ್ತೆ. ಆದ್ರೆ ಈ ಪಾಪಿಗಳು ಮಾಡ್ತಿದ್ದ ಕೃತ್ಯ ನೋಡಿದ್ರೆ ನೀವು ಹಿಡಿಶಾಪ ಹಾಕ್ತಿರ. ಈ ಕುಖ್ಯಾತರ ಹೆಸ್ರು ಮೊಹಮ್ಮದ್ ಸೊಹೈಲ್ ಹಾಗೂ ನಬಿ ಅಂತ (auto thieves). ಇವರಿಬ್ಬರೂ ಇಡೀ ರಾಯಚೂರಿನ (Raichur southern bazar police) ಆಟೋ ಚಾಲಕರನ್ನೇ ಥಂಡಾ ಹೊಡೆಸಿದ್ರು.. ಅದೇನಪ್ಪ ಅಂದ್ರೆ ಇದ್ರಲ್ಲಿ ಸೊಹೈಲ್ ಆಟೋ ಚಾಲಕ.. ನಬಿ ಆಟೋ ಮೆಕ್ಯಾನಿಕ್ ಅಂತೆ.. ಇಬ್ಬರಿಗೂ ಇದೇ ಆಟೋಗಳೇ ಅನ್ನ ಕೊಟ್ಟು ಮೂರು ಹೊತ್ತು ಸಲಹುತ್ತಿದ್ದವು..

ಆದ್ರೆ ಅದೇ ಆಟೋಗಳನ್ನೇ ಬಂಡವಾಳ ಮಾಡಿಕೊಂಡು ಅಡ್ಡದಾರಿ ಹಿಡಿದಿದ್ರು.. ಅಲ್ಲಲ್ಲಿ ನಿಲ್ಲಿಸಲಾಗಿರೊ ಆಟೋಗಳನ್ನ ಟಾರ್ಗೆಟ್ ಮಾಡಿ ಆಟೋಗಳನ್ನ ಕದಿಯುತ್ತಿದ್ರು.. ರಾಯಚೂರಿನಲ್ಲಿ ಸರಣಿ ಆಟೋಗಳ ಕಳ್ಳತನವಾಗಿತ್ತು..ಆಟೋಗಳನ್ನ ತಳ್ಳಿಕೊಂಡು ಹೋಗಿ ಬೇರೆಡೆ ಹೋಗಿ ಅಲ್ಲಿ ಈ ಮೆಕ್ಯಾನಿಕ್ ನಬಿ ಹಾಗೂ ಚಾಲಕ ಮೊಹಮ್ಮದ್ ಸೊಹೈಲ್ ತಾಂತ್ರಿಕ ಟ್ರಿಕ್ಸ್ ಬಳಸಿಕೊಂಡು ಆಟೋ ಸ್ಟಾರ್ಟ್ ಮಾಡಿಕೊಂಡು ಕಳ್ಳತನ ಮಾಡ್ತಿದ್ರು.. ಹೀಗೆ ಆಟೋ ಕಳೆದುಕೊಂಡ ಬಡ ಚಾಲಕರು ರಾಯಚೂರಿನ ಸದರ್ ಬಜಾರ್ ಠಾಣೆ ಪೊಲೀಸರ ಬಳಿ ಕಣ್ಣೀರಿಟ್ಟಿದ್ರು..

ಹೌದು.. ಸದರ್ ಬಜಾರ್ ಪೊಲೀಸರಿಗೆ ದೂರುಗಳು ಬರ್ತಿದ್ದಂತೆ ಖಾಕಿ ಪಡೆ ಅಲರ್ಟ್ ಆಗಿತ್ತು..ವೃತ್ತಿಪರ ಆಟೋ ಕಳ್ಳರ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ರು..ನೈಟ್ ಬೀಟ್ ಹೆಚ್ಚು ಮಾಡಿಕೊಂಡು ಕಳ್ಳರ ಪತ್ತೆಗೆ ಇಳಿದಿದ್ದರು.. ಅನುಮಾನಾಸ್ಪ ವ್ಯಕ್ತಿಗಳ ಫಿಂಗರ್ ಪ್ರಿಂಟ್ ಪಡೆದು ಅವ್ರು ವೃತ್ತಿಪರ ಸಮಾಜಘಾತುಕರಾ? ಅನ್ನೋದರ ಬಗ್ಗೆ ಪರಿಶೀಲನೆ ಕೂಡ ನಡೆಸಲಾಗಿತ್ತು.. ಈ ವೇಳೆ ಲಾಕ್ ಆಗಿದ್ದೇ ಈ ಮೊಹಮ್ಮದ್ ಸೊಹೈಲ್ ಹಾಗೂ ನಬಿ..

Also Read: ಆಟೋ ಬುಕ್ ಮಾಡಿದ್ರೆ ಚಾಲಕ ಕ್ಯಾನ್ಸಲ್ ಮಾಡ್ತಾನೆಂಬ ಚಿಂತೆ ಬೇಡ! ರ‍್ಯಾಪಿಡೋದಿಂದ ‘ಆಟೋ ಪ್ಲಸ್’ ಎಂಬ ಹೊಸ ಸೇವೆ

ನಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಕಕ್ಕಿದ್ರು.. ಅಸಲಿಗೆ ಇಬ್ಬರು ಆರೋಪಿಗಳಿಗೆ ಬೆಟ್ಟಿಂಗ್,ಜೂಜಾಟದ ಚಟವಿತ್ತಂತೆ..ಕ್ರಿಕೆಟ್ ಬೆಟ್ಟಿಂಗ್,ಆನ್​ಲೈನ್ ಜೂಜಾಟಗಳಲ್ಲಿ ಹಣ ಕಳೆದುಕೊಂಡಿದ್ರಂತೆ..ಮೈ ತುಂಬಾ ಸಾಲ ಮಾಡಿಕೊಂಡು ಸಾಲಗಾರರ ಕಿರಿಕಿರಿ ತಾಳಲಾರದೇ ದಾರಿ ತಪ್ಪಿದ್ದರು.. ಆಟೋಗಳನ್ನ ಕಳ್ಳತನ ಮಾಡಿಕೊಂಡು ತೆಲಂಗಾಣ, ಆಂಧ್ರ, ಗುಲ್ಬರ್ಗಾ, ಯಾದಗಿರಿ ಸೇರಿ ಬೇರೆಡೆ ಮಾರಾಟ ಮಾಡಿ ಹಣ ಪಡೆಯುತ್ತಿದ್ರು..ಸದ್ಯ ಇಬ್ಬರು ಆರೋಪಿಗಳನ್ನ ಸದರ್ ಬಜಾರ್ ಪೊಲೀಸರು ಬಂಧಿಸಿ ಐದು ಲಕ್ಷ ಮೌಲ್ಯದ ನಾಲ್ಕು ಆಟೋಗಳನ್ನ ಜಪ್ತಿ ಮಾಡಲಾಗಿದೆ ಎಂದು ನಿಖಿಲ್​ .ಬಿ-ರಾಯಚೂರು ಎಸ್​ಪಿ ತಿಳಿಸಿದ್ದಾರೆ.

ಸದ್ಯ ಸದರ್ ಬಜಾರ್ ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದು ಆಟೋ ಕಳ್ಳತನದ ಜಾಲ ದೊಡ್ಡದಿದೆ. ಆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ