ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯತಮೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿ ಬಂಧನ
ಕಾನ್ಸ್ಟೇಬಲ್ ಪ್ರಿಯಕರನಿಗೆ ಪ್ರಿಯತಮೆಯೇ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪುಟ್ಟೇನಹಳ್ಳಿ ಪೊಲೀಸರು (Puttenahalli Police Station) ಆರೋಪಿ ರಾಣಿ ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಸಂಜಯ್ಗೆ ಬೆಂಕಿ ಹಚ್ಚಿಲ್ಲವೆಂದು ಹೇಳಿಕೆ ನೀಡಿದ್ದಾಳೆ. ಸದ್ಯ ಎಫ್ಎಸ್ಎಲ್ನಿಂದ ರಿಪೋರ್ಟ್ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಸಿಗಲಿದೆ.
ಬೆಂಗಳೂರು, ಡಿ.24: ಕಾನ್ಸ್ಟೇಬಲ್ ಪ್ರಿಯಕರನಿಗೆ ಪ್ರಿಯತಮೆಯೇ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪುಟ್ಟೇನಹಳ್ಳಿ ಪೊಲೀಸರು (Puttenahalli Police Station) ಆರೋಪಿ ರಾಣಿ ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಸಂಜಯ್ಗೆ ಬೆಂಕಿ ಹಚ್ಚಿಲ್ಲವೆಂದು ಹೇಳಿಕೆ ನೀಡಿದ್ದು, ಮೃತ ಸಂಜಯ್ ಹಾಗೂ ನನ್ನ ಮಧ್ಯೆ ಜಗಳವಾಗಿತ್ತು. ಈ ವೇಳೆ ನಿನ್ನ ಸಾಯಿಸುತ್ತೇನೆ ಎಂದು ಸಂಜಯ್ ಬೆದರಿಕೆ ಹಾಕಿದ್ದ. ಈ ನಡುವೆ ಆತನೇ ಹೋಗಿ ಬಾಟಲ್ನಲ್ಲಿ ಒಂದು ಲೀಟರ್ ಪೆಟ್ರೋಲ್ ತಂದು ಆತನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಕಡ್ಡಿ ಗೀಚಿ ಬೆದರಿಕೆ ಹಾಕಿದ್ದ. ಆ ವೇಳೆ ಬೆಂಕಿ ಆಕಸ್ಮಿಕವಾಗಿ ಸಂಜಯ್ ಗೆ ತಗಲಿತ್ತು ಎಂದು ರಾಣಿ ಹೇಳಿದ್ದಾರೆ.
ಸದ್ಯ FSL ನಿಂದ ರಿಪೋರ್ಟ್ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಸಿಗಲಿದೆ
ಇನ್ನು ಈ ಘಟನೆಯ ಕುರಿತು ಬಂಧಿತ ಆರೋಪಿಯನ್ನು ವಿಚಾರಣೆ ಮಾಡಿದ ಪೊಲೀಸರು, ಸದ್ಯ ಎಫ್ಎಸ್ಎಲ್ನಿಂದ ರಿಪೋರ್ಟ್ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಸಿಗಲಿದೆ ಎಂದಿದ್ದಾರೆ. ಇನ್ನು ಹೋಮ್ ಗಾರ್ಡ್ ಆಗಿದ್ದ ರಾಣಿಗೆ ಸಂಜಯ್ ಮಾತ್ರವಲ್ಲದೆ ಬೇರೊಬ್ಬನ ಜೊತೆ ಸಲುಗೆ ಇದ್ದಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯತಮೆ ಬೆಂಕಿ ಹಚ್ಚಿದ ಪ್ರಕರಣ: ಚಿಕಿತ್ಸೆ ಫಲಿಸದೆ ಕಾನ್ಸ್ಟೇಬಲ್ ಸಾವು
ಘಟನೆ ವಿವರ
ಪೇದೆಯಾಗಿರುವ ಸಂಜಯ್ ಮತ್ತು ಹೋಂಗಾರ್ಡ್ ಆಗಿರುವ ರಾಣಿ ಇಬ್ಬರೂ ಕೂಡ ಬಸವನಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರ ಬೆಳೆದಿದೆ. ಮದುವೆಯಾಗಿದ್ದರೂ ಕೂಡ ಕಾನ್ಸ್ಟೇಬಲ್ ಜೊತೆ ಕೆಲವು ತಿಂಗಳಿಂದ ರಾಣಿ ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಸಂಜಯ್ನನ್ನು ರಾಣಿ ನಿರ್ಲಕ್ಷ್ಯಿಸಲು ಆರಂಭಿಸಿದ್ದಾಳೆ. ಹೀಗಾಗಿ 2 ದಿನಗಳ ಹಿಂದೆ ಆಕೆ ಮನೆಗೆ ಸಂಜಯ್ ಹೋಗಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿರುವ ವಿಚಾರವನ್ನು ಪ್ರಶ್ನಿಸಿದ್ದ ಸಂಜಯ್ಗೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು ಎನ್ನಲಾಗಿತ್ತು. ಕೂಡಲೇ ಸಂಜಯ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ