ಮಾಜಿ ಕಾರ್ಪೊರೇಟರ್ ಪತಿ ಆಯೂಬ್‌ ಖಾನ್‌ ಹತ್ಯೆ ಪ್ರಕರಣ; ಆರೋಪಿ ಮತೀನ್ ಬಂಧನ

| Updated By: ವಿವೇಕ ಬಿರಾದಾರ

Updated on: Jul 17, 2022 | 10:40 PM

ಮಾಜಿ ಕಾರ್ಪೊರೇಟರ್ ಪತಿ ಆಯೂಬ್‌ ಖಾನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮತೀನ್​ನನ್ನು ಚಾಮರಾಜಪೇಟೆ ಪೊಲೀಸರ ಕೆಂಗೇರಿ ಬಳಿ ಬಂಧಿಸಿದ್ದಾರೆ.

ಮಾಜಿ ಕಾರ್ಪೊರೇಟರ್ ಪತಿ ಆಯೂಬ್‌ ಖಾನ್‌ ಹತ್ಯೆ ಪ್ರಕರಣ; ಆರೋಪಿ ಮತೀನ್ ಬಂಧನ
ಅಯೂಬ್ ಖಾನ್
Follow us on

ಬೆಂಗಳೂರು: ಮಾಜಿ ಕಾರ್ಪೊರೇಟರ್ ಪತಿ ಆಯೂಬ್‌ ಖಾನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮತೀನ್​ನನ್ನು ಚಾಮರಾಜಪೇಟೆ ಪೊಲೀಸರ ಕೆಂಗೇರಿ ಬಳಿ ಬಂಧಿಸಿದ್ದಾರೆ. ಜುಲೈ 13ರಂದು ಟಿಪ್ಪುನಗರದಲ್ಲಿ ಆಯೂಬ್ ಖಾನ್​ರನ್ನು ಹತ್ಯೆ ನಡೆದಿತ್ತು. ಚಾಕು ಇರಿತದಿಂದ ಗಾಯಗೊಂಡಿದ್ದ ಬೆಂಗಳೂರಿನ ಟಿಪ್ಪುನಗರ ವಾರ್ಡ್​ನ ಮಾಜಿ ಕಾರ್ಪೊರೇಟರ್ ನಜೀಮಾ ಅವರ ಪತಿ ಆಯೂಬ್​​​ ಖಾನ್ ಗುರುವಾರ (ಜುಲೈ 14) ನಸುಕಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಆಯೂಬ್​​ ಹೊಟ್ಟೆಯ ಭಾಗದಲ್ಲಿ ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಯೂಬ್ ಅವರು ಮೃತಪಟ್ಟರು. ಆಸ್ತಿ ವಿಚಾರವಾಗಿ ಆಸ್ತಿ ವಿಚಾರವಾಗಿ ಆಯೂಬ್​ ಖಾನ್​ ಅಣ್ಣನ ಮಕ್ಕಳಿಂದ ಅಪರಾಧ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು. ಆಯೂಬ್ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿಗಳು ಇರಿದಿದ್ದರು. ಆರೋಪಿಗಳಿಗಾಗಿ ಚಾಮರಾಜಪೇಟೆ ಪೊಲೀಸರು ಹುಡುಕಾಟ ಮುಂದುವರಿಸಿದ್ದು, ಹತ್ಯೆಯ ಬಳಿಕ  ತಲೆಮರೆಸಿಕೊಂಡಿದ್ದ ಆರೋಪಿ ಮತೀನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲ್ನೋಟಕ್ಕೆ ಆಸ್ತಿ ವಿವಾದವೇ ಜಗಳಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ‌ ಮಗನೊಂದಿಗೆ ಪದೇ ಪದೇ ಜಗಳ ನಡೆಯುತ್ತಿತ್ತು.  ಜುಲೈ 13 ರಂದು ಸಂಜೆ ಮನೆಗೆ ಹೋಗಿದ್ದ ಅಯೂಬ್ ಅಣ್ಣನ‌ ಮಗನಿಂದ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ ಎಂದು ತಿಳಿದು ಬಂದಿದೆ.

Published On - 10:40 pm, Sun, 17 July 22