AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಿಂದ ಬೆಂಗಳೂರಿಗೆ ಬರುವ ಉದ್ಯೋಗಿಗಳು, ವಿದ್ಯಾರ್ಥಿಗಳ ಸಂಸ್ಥೆ ಅಥವಾ ಕಂಪನಿಗಳೇ 1ವಾರ ಕ್ವಾರಂಟೈನ್, ಕೊವಿಡ್ ಟೆಸ್ಟ್ ಮಾಡಿಸಬೇಕು

BBMP New Covid 19 Rules; ಬಿಬಿಎಂಪಿ ಜಾರಿಗೊಳಿಸಿದ ಹೊಸ ನಿಯಮದ ಸಂಪೂರ್ಣ ವಿವರ ಇಲ್ಲಿದೆ.

ಕೇರಳದಿಂದ ಬೆಂಗಳೂರಿಗೆ ಬರುವ ಉದ್ಯೋಗಿಗಳು, ವಿದ್ಯಾರ್ಥಿಗಳ ಸಂಸ್ಥೆ ಅಥವಾ ಕಂಪನಿಗಳೇ 1ವಾರ ಕ್ವಾರಂಟೈನ್, ಕೊವಿಡ್ ಟೆಸ್ಟ್ ಮಾಡಿಸಬೇಕು
ಪ್ರಾತಿನಿಧಿಕ ಚಿತ್ರ
TV9 Web
| Updated By: guruganesh bhat|

Updated on: Aug 31, 2021 | 9:09 PM

Share

ಬೆಂಗಳೂರು: ಕೇರಳದಿಂದ ಬರುವವರಿಗೆ 1 ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಿಸಿ, 7 ನೆ ದಿನದಂದು ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕು. ಈ ಪ್ರಕ್ರಿಯೆಯನ್ನು ಉದ್ಯೋಗಿಗಳಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ, ಕಂಪನಿಗಳೇ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ನಿಯಮ ಜಾರಿಗೊಳಿಸಿದೆ.

ಮದುವೆ/ಕೌಟುಂಬಿಕ ಕಾರ್ಯಕ್ರಮಗಳಿಗೆ ಒಳಾಂಗಣದ ಶೇ. 50 ರಷ್ಟು ಸಾಮರ್ಥ್ಯದಿಂದ ಗರಿಷ್ಠ 400 ಅತಿಥಿಗಳ ಸಂಖ್ಯೆಗೆ ಮಿತಿಗೊಳಿಸಿ, ಕೊವಿಡ್ ಸಮುಚ್ಛಿತ ವರ್ತನೆಗಳನ್ನು ಅನುಸರಿಸುವ ಷರತ್ತಿಗೊಳಪಟ್ಟು ಅನುಮತಿಸಬಹುದಾಗಿದೆ.

ಕರ್ನಾಟಕದಲ್ಲಿ ನರ್ಸಿಂಗ್, ವೈದ್ಯಕೀಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಕೇರಳದಿಂದ ಬರುವ 72 ಗಂಟೆಗಳ ಒಳಗಿನ ಅವಧಿಯ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿಯನ್ನು ತಂದಿರಬೇಕು. ಮುಂದುವರೆದು, ಸದರಿ ವಿದ್ಯಾರ್ಥಿಗಳನ್ನು ಆಯಾ ವಿದ್ಯಾ ಸಂಸ್ಥೆಯವರು 7 ದಿನಗಳ ಕಡ್ಡಾಯ ಸಾಂಸ್ಥಿಕ ದಿಗ್ಟಂಧನ (Institutional Quarantine) ಒಳಪಡಿಸಿ, 7ನೇ ದಿನದಂದು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು.

ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಆಯಾ ವಿದ್ಯಾ ಸಂಸ್ಥೆಯವರೇ ಕಡ್ಡಾಯವಾಗಿ 7 ದಿನಗಳ ಕಾಲ ಸಾಂಸ್ಥಿಕ ದಿಗ್ಬಂಧನ (Institutional Quarantine) ದಲ್ಲಿರಿಸಲು ವಸತಿ ನಿಲಯಗಳಲ್ಲಿ ಪ್ರತ್ಯೇಕ ಪ್ರದೇಶ(Block)ವನ್ನು ಸಾಂಸ್ಥಿಕ ದಿಗ್ಧಂಧನಕ್ಕಾಗಿ ಮೀಸಲಿಟ್ಟು, ಸಾಂಸ್ಥಿಕ ದಿಗ್ಬಂಧನ (Institutional Quarantine) ಕಾಲದಲ್ಲಿ ದಿಗ್ಬಂಧನ (ಕ್ವಾರಂಟೈನ್) ದಲ್ಲಿರುವ ವಿದ್ಯಾರ್ಥಿಗಳ ದೈನಂದಿನ ಅವಶ್ಯಕತೆಗಳನ್ನು (ಕೋವಿಡ್ ಸಮುಚ್ಛಿತ ವರ್ತನೆಗಳ ಅನುಸರಣೆಯೊಂದಿಗೆ) ಪೂರೈಸಬೇಕು.

ಮುಂದುವರೆದು, ಬೆಂಗಳೂರಿನಲ್ಲಿ (ಪಾಲಿಕೆ ವ್ಯಾಪ್ತಿ) ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು, ಕೇರಳದಿಂದ ಆಗಮಿಸಿದ್ದಲ್ಲಿ ಅಥವಾ ಕಳೆದ 7 ದಿನಗಳಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಲ್ಲಿ ಅಂತಹ ಉದ್ಯೋಗಿಗಳನ್ನು ಆಯಾ ಸಂಸ್ಥೆಯ ಆಡಳಿತ ಮಂಡಳಿಯವರು ಅಂಶ 3 ರಲ್ಲಿರುವಂತೆ 7 ದಿನಗಳ ಕ್ವಾರಂಟೈನ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು ಮತ್ತು ಮಾಹಿತಿಯನ್ನು ಪಾಲಿಕೆಯ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ನೀಡುವುದು.

ವಿದ್ಯಾರ್ಥಿಗಳು/ಉದ್ಯೋಗಿಗಳ 7 ದಿನಗಳ ಕಡ್ಡಾಯ ಸಾಂಸ್ಥಿಕ ದಿಗ್ಧಂಧನ(ಕ್ವಾರಂಟೈನ್)ವನ್ನು ಆರೋಗ್ಯ ವೈದ್ಯಾಧಿಕಾರಿಗಳು ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಅನುಸರಣೆಗಾಗಿ ಮೇಲ್ವಿಚಾರಣೆ ಮತ್ತು ನಿಗಧಿತ ಸಮಯಕ್ಕೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದೆ.

(BBMP Form a rules that Employees or students coming from Kerala to Bangaluru Organisations or Companies should do 1 week Quarantine and covid Test)