ಖಾಯಂ ಉದ್ಯೋಗಕ್ಕಾಗಿ ಸರ್ಕಾರದ ವಿರುದ್ಧ ಬಿಬಿಎಂಪಿ ಕಸದ ವಾಹನ ಚಾಲಕರ ಪ್ರತಿಭಟನೆ

| Updated By: ವಿವೇಕ ಬಿರಾದಾರ

Updated on: Dec 03, 2024 | 4:39 PM

ಬೆಂಗಳೂರಿನ ಬಿಬಿಎಂಪಿ ಕಸದ ವಾಹನ ಚಾಲಕರು ಮತ್ತು ಸಹಾಯಕರು ಖಾಯಂ ಉದ್ಯೋಗಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಖಾಯಂ ಉದ್ಯೋಗ ಭರವಸೆ ನೀಡಿದ್ದರೂ, ಅದನ್ನು ಈಡೇರಿಸಿಲ್ಲ. ಕಡಿಮೆ ವೇತನ ಮತ್ತು ಭದ್ರತೆಯ ಕೊರತೆಯಿಂದಾಗಿ ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಖಾಯಂ ಉದ್ಯೋಗಕ್ಕಾಗಿ ಸರ್ಕಾರದ ವಿರುದ್ಧ ಬಿಬಿಎಂಪಿ ಕಸದ ವಾಹನ ಚಾಲಕರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​ 03: ಸರ್ಕಾರ (Karnataka Governmnet) ಹಾಗೂ ಬಿಬಿಎಂಪಿ ವಿರುದ್ಧ ಕಸದ ವಾಹನ ಚಾಲಕರು ಸಿಡಿದೆದ್ದಿದ್ದಾರೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ 198 ವಾರ್ಡ್​​ಗಳ ಕಸದ ವಾಹನ ಚಾಲಕರು, ಸಹಾಯಕರು ಖಾಯಂ ಉದ್ಯೋಗ ನೀಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಚಾಲಕರು, ಸಹಾಯಕರು ಸೋಮವಾರದಿಂದ ಫ್ರೀಡಂ ಪಾರ್ಕ್​​ನಲ್ಲಿ ಧರಣಿಗೆ ಕುಳಿತಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಕಸದ ವಾಹನದ ಚಾಲಕರು, ಸಹಾಯಕರಿಗೆ ಖಾಯಂ ಉದ್ಯೋಗ ನೀಡುವುದಾಗಿ ಗ್ಯಾರಂಟಿ ನೀಡಿತ್ತು. ಆದರೆ ಇದುವರೆಗೂ ಯಾವುದೆ ಗ್ಯಾರಂಟಿಯ ಇಡೇರಿಸಿಲ್ಲ. ನಮಗೆ ಕಡಿಮೆ ಸಂಬಳ ಇದೆ. ಜೀವನ ನಡೆಸುವುದು ಹೇಗೆ? ಹೀಗಾಗಿ ನಮ್ಮ ಕೆಲಸಕ್ಕೆ ಭದ್ರತೆ ಬೇಕು. ಖಾಯಂ ಉದ್ಯೋಗದ ಆದೇಶ ಹೊರಡಿಸುವವರೆಗೂ ವಾಹನ ಚಲಾನೆ ಮಾಡಲ್ಲ ಎಂದು ಚಾಲಕರು ಪಟ್ಟು ಹಿಡಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ನೌಕರರು

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 593 ಕಾಂಪ್ಯಾಕ್ಟರ್ ವಾಹನ ಚಾಲಕರು, 9,300 ಆಟೊ ಟಿಪ್ಪರ್ ಚಾಲಕರು ಮತ್ತು ಸಹಾಯಕರು, 1,800 ಲೋಡರ್‌ಗಳಿಗೂ ಕಾಯಂ ಉದ್ಯೋಗ ನೀಡಬೇಕು ಎಂದು ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಒಕ್ಕೂಟದ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯರು ಸರ್ಕಾರಕ್ಕೆ ಮೇಲೆ ಒತ್ತಾಯಿಸಿದ್ದರು. ಹಾಗೂ ಈ ಬಗ್ಗೆ ಬಿಬಿಎಂಪಿಯ SWM ವಿಭಾಗದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಬಿಬಿಎಂಪಿಯ ಲೋಡರ್‌ಗಳು, ಕ್ಲೀನರ್‌ಗಳು ಮತ್ತು ಆಟೋ-ಟಿಪ್ಪರ್ ಚಾಲಕರು ಸೇರಿದಂತೆ ಕಾರ್ಮಿಕರು ಕನಿಷ್ಠ ವೇತನವನ್ನು ಸಹ ಪಡೆಯುವುದಿಲ್ಲ. ಅವರಿಗೆ ಇಎಸ್‌ಐ ಅಥವಾ ಪಿಎಫ್ ವ್ಯವಸ್ಥೆಯೂ ಇಲ್ಲ. ಅಲ್ಲದೆ ಅವರಿಗೆ ತಮ್ಮ ಕೆಲಸ ನಿರ್ವಾಹಣೆಗೆ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒದಗಿಸಿಲ್ಲ. ಹೀಗಾಗಿ ಅವರಲ್ಲಿ ಅನೇಕರು ವಿವಿಧ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿತ್ತು.

ಖಾಯಂ ಉದ್ಯೋಗ ಭರವಸೆ

ಆದರೂ, ಕೂಡ ಸರ್ಕಾರ ಮತ್ತು ಬಿಬಿಎಂಪಿ ಇತ್ತ ಕಡೆ ಗಮನ ಕೊಟ್ಟಿರಲಿಲ್ಲ. ಹೀಗಾಗಿ, ಕಳೆದ ವರ್ಷ ಮಾರ್ಚ್​ನಲ್ಲಿ ಚಾಲಕರು, ಸಹಾಯಕರು ಮತ್ತು ಲೋಡರ್‌ಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಪ್ರತಿಭಟನೆಯಿಂದ ಕಸ ಸಂಗ್ರಹಕ್ಕೆ ತೊಂದರೆಯಾಗುತ್ತದೆ ಎಂದು ಅರಿತ ಸರ್ಕಾರ ಖಾಯಂ ಉದ್ಯೋಗ ಸ್ಥಾನಮಾನದ ಭರವಸೆ ನೀಡಿತ್ತು.

ಪ್ರತಿಭಟನೆಗೆ ಇಳಿದ ನೌಕರರು

ಸರ್ಕಾರ ತಾನು ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲವೆಂದು ಇದೀಗ ಬಿಬಿಎಂಪಿ ಕಸದ ವಾಹನದ ಅರೆಕಾಲಿಕ ಚಾಲಕರು ಮತ್ತು ಸಹಾಯಕರು ಅನಿರ್ದಾಷ್ಟವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:41 pm, Tue, 3 December 24