Viral: ಕನ್ನಡ Vs ಹಿಂದಿ; ಬೆಂಗಳೂರಿನ ಆಟೋ ಚಾಲಕರು ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಯಾರಿಗೆ ನೋಡಿ…

ಸೋಷಿಯಲ್‌ ಮೀಡಿಯಾದಲ್ಲಿ ಕೆಲವೊಂದು ಸೋಷಿಯಲ್‌ ಎಕ್ಸ್‌ಪರಿಮೆಂಟ್‌ಗಳಿಗೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಡಿಯೋ ಹರಿದಾಡುತ್ತಿದ್ದು, ಯುವತಿಯರಿಬ್ಬರು ಬೆಂಗಳೂರಿನ ಆಟೋ ಚಾಲಕರ ಬಳಿ ಕನ್ನಡ Vs ಹಿಂದಿ ಎಂಬ ಸೋಷಿಯಲ್‌ ಎಕ್ಸ್ಪರಿಮೆಂಟ್‌ ಒಂದನ್ನು ಮಾಡಿದ್ದಾರೆ. ಈ ಪ್ರಯೋಗದಲ್ಲಿ ಆಟೋ ಚಾಲಕರು ಕನ್ನಡಿಗರಿಗೆ ಹೆಚ್ಚಿನ ಇಂಪಾರ್ಟೆನ್ಸ್‌ ಕೊಟ್ಟಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಕನ್ನಡ Vs ಹಿಂದಿ; ಬೆಂಗಳೂರಿನ ಆಟೋ ಚಾಲಕರು ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಯಾರಿಗೆ ನೋಡಿ…
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 2:03 PM

ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸುವ ಪರ ಭಾಷಿಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇವರುಗಳಲ್ಲಿ ಹೆಚ್ಚಿನವರು ಕನ್ನಡ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಕೂಡಾ ಮಾಡುತ್ತಿಲ್ಲ. ಹೀಗೆ ಪರಭಾಷಿಕರು ಕರ್ನಾಟಕದಲ್ಲಿದ್ದರೂ ಕನ್ನಡ ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಇತ್ತೀಚಿಗೆ ಸಂಘರ್ಷಗಳು, ಹೋರಾಟಗಳು ಕೂಡಾ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಇಬ್ಬರು ಯುವತಿಯರು ಬೆಂಗಳೂರಿನ ಆಟೋ ಚಾಲಕರ ಬಳಿ ಕನ್ನಡ Vs ಹಿಂದಿ ಎಂಬ ಸೋಷಿಯಲ್‌ ಎಕ್ಸ್ಪರಿಮೆಂಟ್‌ ಒಂದನ್ನು ಮಾಡಿದ್ದಾರೆ. ಈ ಪ್ರಯೋಗದಲ್ಲಿ ಆಟೋ ಚಾಲಕರು ಕನ್ನಡಿಗರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಕನ್ನಡಿಗರು ಆಟೋ ಚಾಲಕರ ನಡೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ರೀತಿ ಪಕ್ಷಪಾತ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಯುವತಿಯರಿಬ್ಬರು ಬೆಂಗಳೂರಿನ ಆಟೋ ಚಾಲಕರ ಬಳಿ ಕನ್ನಡ Vs ಹಿಂದಿ ಎಂಬ ಸೋಷಿಯಲ್‌ ಎಕ್ಸ್ಪರಿಮೆಂಟ್‌ ಒಂದನ್ನು ಮಾಡಿದ್ದು, ಹಿಂದಿ ಭಾಷೆ ಮಾತನಾಡುವ ಹುಡುಗಿ ಹೆಚ್.ಎಸ್.‌ಆರ್‌ ಲೇಔಟ್‌ಗೆ ಬರ್ತಿರಾ ಅಂತಾ ಕೇಳಿದ್ದಕ್ಕೆ ಬರಲ್ಲಾ ಎಂದ ಆಟೋ ಚಾಲಕರೊಬ್ಬರು ಕನ್ನಡದ ಹುಡುಗಿ ಕೇಳಿದ್ದಕ್ಕೆ ಬರ್ತೀನಿ ಮೇಡಂ ಎಂದು ಹೇಳಿದ್ದಾರೆ. ಮತ್ತೊಬ್ಬ ಆಟೋ ಚಾಲಕರ ಬಳಿ ಹೋಗಿ ಹಿಂದೆ ಹುಡುಗಿ ಇಂದಿರಾ ನಗರಕ್ಕೆ ಬರ್ತಿರಾ ಎಂದಾಗ 300 ರೂ. ಆಗುತ್ತೆ ಎಂದು ಹೇಳಿದ್ದಾರೆ. ಅದೇ ಆಟೋ ಚಾಲಕ ಕನ್ನಡದ ಹುಡುಗಿ ಕೇಳಿದಾಗ ಇಂದಿರಾ ನಗರಕ್ಕೆ 200 ರೂ. ಚಾರ್ಜ್‌ ಆಗುತ್ತೆ ಎಂದು ಹೇಳಿದ್ದಾರೆ. ಇನ್ನೊಬ್ಬ ಆಟೋ ಚಾಲಕ ಕೋರಮಂಗಲಕ್ಕೆ ಹೋಗಲು ಇಬ್ಬರೂ ಯುವತಿಯರಿಗೂ 200 ರೂ. ಚಾರ್ಜ್‌ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by JINAL MODI (@jinalmodiii)

ಈ ಸೋಷಿಯಲ್‌ ಎಕ್ಸ್ಪರಿಮೆಂಟ್‌ ವಿಡಿಯೋವನ್ನು ಜಿನಲ್‌ ಮೋದಿ (jinalmodii) ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇವರ ಪ್ರಯೋಗಕ್ಕೆ ಒಳಗಾದ ಬಹುತೇಕ ಆಟೋ ಚಾಲಕರು ಪರಭಾಷಿಕರಿಗಿಂತ ಕನ್ನಡದವರಿಗೆ ಸ್ವಲ್ಪ ಜಾಸ್ತಿನೇ ಇಂಪಾರ್ಟೆನ್ಸ್‌ ಕೊಟ್ಟಿರುವುದನ್ನು ಕಾಣಬಹುದು. ಇದೀಗ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ಕನ್ನಡಿಗರು ಆಟೋ ಚಾಲಕರ ನಡೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ರೀತಿ ಪಕ್ಷಪಾತ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಕಡಲ ತೀರದಲ್ಲಿ ಕುಳಿತು ಯೋಗ ಮಾಡುತ್ತಿದ್ದ ವೇಳೆ ಅಪ್ಪಳಿಸಿದ ಅಲೆ; ನೀರಲ್ಲಿ ಕೊಚ್ಚಿ ಹೋದ ನಟಿ

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕರ್ನಾಟಕದಲ್ಲಿ ಕನ್ನಡ ಭಾಷೆಗೆಯೇ ಹೆಚ್ಚಿನ ಮಹತ್ವʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಭಾಷೆಯ ವಿಚಾರಕ್ಕೆ ಇಷ್ಟೆಲ್ಲಾ ತಾರತಮ್ಯ ಮಾಡುವ ಅವಶ್ಯಕತೆ ಇದೆಯೇʼ ಎಂದು ಟೀಕಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ