ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣ: ಬೆಂಜೀನ್​​​ನಿಂದ ದುರಂತ ಸಂಭವಿಸಿರಬಹುದು: ಮುಖ್ಯ ಇಂಜಿನಿಯರ್​ ಬಿಎಸ್ ಪ್ರಹ್ಲಾದ್ ​

| Updated By: ವಿವೇಕ ಬಿರಾದಾರ

Updated on: Aug 12, 2023 | 1:04 PM

BBMP: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವು ರಾಸಾಯನಿಕ ಓವರ್ ರಿಯಾಕ್ಷನ್​ನಿಂದ ಆಗಿದೆ. ಅವಘಡದಲ್ಲಿ ಬೇರೆ ಯಾವುದೇ ನೌಕರರ ಕೈವಾಡವಿಲ್ಲ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್​​​ ಬಿ.ಎಸ್.ಪ್ರಹ್ಲಾದ್ ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣ: ಬೆಂಜೀನ್​​​ನಿಂದ ದುರಂತ ಸಂಭವಿಸಿರಬಹುದು: ಮುಖ್ಯ ಇಂಜಿನಿಯರ್​ ಬಿಎಸ್ ಪ್ರಹ್ಲಾದ್ ​
ಬಿಬಿಎಂಪಿ
Follow us on

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ (Lab) ಸಂಭವಿಸಿದ ಭಾರೀ ಅಗ್ನಿ (Fire) ಅವಘಡವು ರಾಸಾಯನಿಕ ಓವರ್ ರಿಯಾಕ್ಷನ್​ನಿಂದ ಆಗಿದೆ. ಅವಘಡದಲ್ಲಿ ಬೇರೆ ಯಾವುದೇ ನೌಕರರ ಕೈವಾಡವಿಲ್ಲ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್​​​ ಬಿ.ಎಸ್.ಪ್ರಹ್ಲಾದ್ ಹೇಳಿದ್ದಾರೆ. ಬೆಂಗಳೂರಲ್ಲಿ ಟವಿ9 ಪ್ರತಿನಿಧಿಯೊಂದಿಗೆ ಮತನಾಡಿದ ಅವರು ಕಚ್ಚಾ ವಸ್ತು ಗುಣಮಟ್ಟ ಪರೀಕ್ಷೆಗೆ ಬಳಸುವ ಏಜೆಂಟ್​​ನಿಂದ ದುರಂತ ಸಂಭವಿಸಿದೆ. ಬೆಂಜೀನ್ ಏಜೆಂಟ್​ನ ಓವರ್ ರಿಯಾಕ್ಷನ್​ನಿಂದ ದುರಂತವಾಗಿರುವ ಸಾಧ್ಯತೆ ಇದೆ ಎಂದರು.

ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಹಾಕಿದ್ದರಿಂದ ದುರಂತ ಉಂಟಾಗಿರಬಹುದು. ಬೆಂಜೀನ್ ಗಾಳಿಗೆ ಬೇಗನೆ ದಹಿಸಿಕೊಳ್ಳುವ ಗುಣ ಹೊಂದಿದೆ. ಅದರ ರಾಸಾಯನಿಕ ತೀವ್ರತೆ ಹೆಚ್ಚಾಗಿರಬಹುದು. ಬೆಂಜೀನ್ ಒರೆಸಿಟ್ಟ ಬಟ್ಟೆಗೆ ಬೆಂಕಿ ತಗುಲಿ ದುರಂತ ಆಗಿರಬಹುದು. ತಾಂತ್ರಿಕವಾಗಿ ಇದನ್ನು ಪರಿಶೀಲಿಸುವ ಕೆಲಸ ನಡೆಯುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದವರು ಸ್ಯಾಂಪಲ್ಸ್ ಪಡೆದುಕೊಂಡಿದ್ದಾರೆ. ಟೆಕ್ನಿಕಲ್ ಕಮಿಟಿ ಕೂಡ ಪರಿಶೀಲನೆ ನಡೆಸುತ್ತಿದೆ. ವರದಿ ಬಂದ ಮೇಲೆಯೇ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಬೆಂಜೀನ್ ಹಾಕಿ ವಾಶ್ ಮಾಡುವಾಗ ಬೆಂಕಿ ಹರಡಿ ದರುಂತ ಸಂಭವಿಸಿದೆ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಎಇಇ ಆನಂದ್ ಬಿಬಿಎಂಪಿ ನೌಕರರ ಅಮೃತ್​ ರಾಜ್ ಜತೆ ಮಾತಾಡಿರುವ ಆಡಿಯೋ ವೈರಲ್​ ಆಗಿದೆ. ನಾವು ಮೊದಲಿನಿಂದಲೂ ಲ್ಯಾಬ್​​ನಲ್ಲಿ ಟೆಸ್ಟ್ ಮಾಡುತ್ತಿದ್ದೇವು. ಎಲ್ಲಾ ಸ್ಯಾಂಪಲ್​​ಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡುತ್ತೇವೆ. ಪರೀಕ್ಷೆ ನಡೆಸುವ ಬಗ್ಗೆ ಮೊದಲೇ ಎಲ್ಲರಿಗೂ ತರಬೇತಿ ನೀಡಿದ್ದೇವೆ. ಬೆಲ್ಜಿನ್​​ ಕೆಮಿಕಲ್ ಹಾಕಿ ಟೆಸ್ಟ್​​ ಮಾಡಿರುವಾಗ ಸೋರಿಕೆಯಾಗಿರಬಹದು. ಬೆಲ್ಜಿನ್‌ ಹಾಕಿ ವಾಶ್ ಮಾಡುವಾಗ ಬೆಂಕಿ ಹರಡಿ ದರುಂತ ಸಂಭವಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ತನಿಖೆ ಮೂರು ಆಯಾಮಗಳಲ್ಲಿ ನಡೆಯಲಿದೆ: ಡಿಕೆ ಶಿವಕುಮಾರ್ 

ಎಂಸಿಬಿ ಆಫ್​​​​ ಮಾಡುವಾಗ ಬೆಂಕಿ ಇನ್ನೂ ಜಾಸ್ತಿಯಾಯ್ತು. ಈ ವೇಳೆ ನಾವು ಕೆಳಗೆ ಇಳಿದೆವು. ಕೆಲವರು ಮೇಲೆ ಸಿಕ್ಕಿಹಾಕಿಕೊಂಡರು. ನಾವು ಕೆಳಗೆ ಇದ್ದ ಕಾರಣ ನಾವು ಬಚಾವ್‌ ಆಗಿದ್ದೇವೆ. ಬಸವನಗುಡಿ ವ್ಯಾಪ್ತಿಗೆ ಸಂಬಂಧಿಸಿದ ಟಾರ್ ಸಂಗ್ರಹ ಮಾಡಿದ್ದೇವು. ಇದರ ಟೆಸ್ಟಿಂಗ್ ವೇಳೆ ಅಗ್ನಿ ಅವಘಡ ನಡೆದಿದೆ. ಆಕಸ್ಮಿಕವಾಗಿ ಈ ರೀತಿಯಾದ ಘಟನೆಯಾಗಿದೆ. ನಮ್ಮ ಹಣೆ ಬರಹ ಸರಿ ಇಲ್ಲ ಸರ್ ಎಂದು ಎಇಇ ಆನಂದ್​​ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ.

ಗಾಯಾಳುಗಳನ್ನು 48 ಗಂಟೆಗಳ ಕಾಲ ತೀರ್ವ ನಿಗಾ ಘಟಕದಲ್ಲಿ ಇರಿಸಲಾಗಿದೆ

ಇನ್ನು ಅಘಡದಲ್ಲಿ ಗಾಯಗೊಂಡಿರುವ ಒಂಬತ್ತು ಜನ ಸಿಬ್ಬಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು 48 ಗಂಟೆಗಳ ಕಾಲ ತೀರ್ವ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸದ್ಯ ಎಲ್ಲಾ ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ. ಒಂಬತ್ತು ಜನರಲ್ಲಿ ಕಿರಣ್ ಮತ್ತು ಜ್ಯೋತಿ ಕಂಡೀಷನ್ ಕ್ರಿಟಿಕಲ್ ಇದೆ. ಇಬ್ಬರಿಗೂ ಐಸಿಯುನಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಹೇಳಿದ್ದಾರೆ.

ಗಾಯಾಳುಗಳ ವಯಸ್ಸು ಹಾಗೂ ಸುಟ್ಟಗಾಯದ ವಿವರ

ಮನೋಜ್ (32) ಶೇ 17 ರಷ್ಟು ದೇಹ ಸುಟ್ಟಿದೆ.  ಕಿರಣ್  (35) ಶೇ 12 ರಷ್ಟು,  ಶ್ರೀನಿವಾಸ್ (37 ) ಶೇ 27 ರಷ್ಟು, ಸೀರಾಜ್ (29) ಶೇ 28 ರಷ್ಟು,  ಶ್ರೀಧರ್ (38) ಶೇ 18 ರಷ್ಟು,  ಶಿವಕುಮಾರ್ (40) ಶೇ 25 ರಷ್ಟು, ಸಂತೋಷ್ ಕುಮಾರ್ (47) ಶೇ 11 ರಷ್ಟು, ವಿಜಯಮಾಲ (27) ಶೇ 25 ರಷ್ಟು ಮತ್ತು ಜ್ಯೋತಿ (21) ಶೇ 28) ರಷ್ಟು ದೇಹ ಸುಟ್ಟಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ರಮೇಶ್ ಕೃಷ್ಣ ಪ್ರಕರಣೆ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:00 pm, Sat, 12 August 23