Independence Day Celebrations: ಕರ್ನಾಟಕದ ಐದು ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ಪದಕ, ಯಾರು ಯಾರಿಗೆ ಪ್ರಶಸ್ತಿ?
ರಾಜ್ಯದ ಹಿರಿಯ ಅಧಿಕಾರಿಗಳಾದ ಶಂಕರ್ ಎಂ ರಾಗಿ-DSP, ರಾಮಪ್ಪ B ಗುತ್ತೇದಾರ್, ತಾವರೆಕೆರೆ ಪೊಲೀಸ್ ಠಾಣೆ -ರಾಮನಗರ, ಸಿಬಿ ಶಿವಸ್ವಾಮಿ -ಪೊಲೀಸ್ ಇನ್ಸ್ಪೆಕ್ಟರ್- ಹೈಗ್ರೌಂಡ್ಸ್ ಪೊಲೀಸ್ ಠಾಣೆ -ಬೆಂಗಳೂರು, ರುದ್ರೇಗೌಡ ಆರ್ ಪಾಟೀಲ್ -ಪೊಲೀಸ್ ಇನ್ಸ್ಪೆಕ್ಟರ್ -ವಿನೋಬ್ ನಗರ-ಶಿವಮೊಗ್ಗ ಮತ್ತು ಪಿ ಸುರೇಶ್, ಪೊಲೀಸ್ ಇನ್ಸ್ಪೆಕ್ಟರ್ ಆರ್ಎಂಸಿ ಯಾರ್ಡ್-ಬೆಂಗಳೂರು ಇವರುಗಳಿಗೆ ಕೇಂದ್ರ ಗೃಹ ಸಚಿವಾಲಯದ ಪದಕ ಲಭ್ಯವಾಗಿದೆ.
ಬೆಂಗಳೂರು, ಆಗಸ್ಟ್ 12: ದೇಶದ 76ನೇ ಸ್ವಾತಂತ್ರ್ಯೋತ್ಸವದ ಮುನ್ನಾ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ನಾನಾ ರಾಜ್ಯಗಳ ಪೊಲೀಸ್ ಅಧಿಕಾರಿಗಳನ್ನು ಪದಕ ಪುರಸ್ಕಾರದಿಂದ ಗೌರವಿಸಿದೆ. ಕೇಂದ್ರ ಗೃಹ ಇಲಾಖೆ ಇಂದು ಶನಿವಾರ ಈ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿ ಕರ್ನಾಟಕದ ಐದು ಪೊಲೀಸ್ ಅಧಿಕಾರಿಗಳಿಗೆ (Karnataka Police) ಕೇಂದ್ರ ಗೃಹ ಮಂತ್ರಿ ಪದಕ ಲಭಿಸಿದೆ (Union Home Minister Medal for Excellence in Investigation). ತನಿಖೆಯಲ್ಲಿ ಉತ್ಕೃಷ್ಟ ಸಾಧನೆಗಾಗಿ ಈ ಅಧಿಕಾರಿಗಳಿಗೆ ಪ್ರಶಸ್ತಿ ಸಂದಾಯವಾಗಿದೆ.
ರಾಜ್ಯದ ಹಿರಿಯ ಅಧಿಕಾರಿಗಳಾದ ಶಂಕರ್ ಎಂ ರಾಗಿ-DSP, ರಾಮಪ್ಪ B ಗುತ್ತೇದಾರ್, ತಾವರೆಕೆರೆ ಪೊಲೀಸ್ ಠಾಣೆ -ರಾಮನಗರ, ಸಿಬಿ ಶಿವಸ್ವಾಮಿ -ಪೊಲೀಸ್ ಇನ್ಸ್ಪೆಕ್ಟರ್- ಹೈಗ್ರೌಂಡ್ಸ್ ಪೊಲೀಸ್ ಠಾಣೆ -ಬೆಂಗಳೂರು, ರುದ್ರೇಗೌಡ ಆರ್ ಪಾಟೀಲ್ -ಪೊಲೀಸ್ ಇನ್ಸ್ಪೆಕ್ಟರ್ -ವಿನೋಬ್ ನಗರ-ಶಿವಮೊಗ್ಗ ಮತ್ತು ಪಿ ಸುರೇಶ್, ಪೊಲೀಸ್ ಇನ್ಸ್ಪೆಕ್ಟರ್ ಆರ್ಎಂಸಿ ಯಾರ್ಡ್-ಬೆಂಗಳೂರು ಇವರುಗಳಿಗೆ ಕೇಂದ್ರ ಗೃಹ ಸಚಿವಾಲಯದ (The Union Home Ministry) ಪದಕ ಲಭ್ಯವಾಗಿದೆ.
ನ್ಯಾಷನಲ್ ಆಟೊಮೇಟೆಡ್ ಫಿಂಗರ್‌ಪ್ರಿಂಟ್ ಐಡೆಂಟಿಫಿಕೇಶನ್ ಸಿಸ್ಟಮ್ಗೆ ಪ್ರಶಸ್ತಿ
ನ್ಯಾಷನಲ್ ಆಟೊಮೇಟೆಡ್ ಫಿಂಗರ್‌ಪ್ರಿಂಟ್ ಐಡೆಂಟಿಫಿಕೇಶನ್ ಸಿಸ್ಟಮ್ (NAFIS) ದಕ್ಷ ಆಡಳಿತದ ಉಜ್ವಲ ಉದಾಹರಣೆಯಾಗಿ ತನ್ನ ಛಾಪು ಮೂಡಿಸಿದೆ. ಇದು ಈಗ DAPRG ಯ ಕೆಟಗರಿ-1ರಲ್ಲಿ ಚಿನ್ನದ ಪ್ರಶಸ್ತಿಯನ್ನು ಗೆದ್ದಿದೆ. ಇ-ಆಡಳಿತವನ್ನು ನೀಡುವಲ್ಲಿನ ಅದರ ಶ್ರೇಷ್ಠತೆಗಾಗಿ ಪ್ರಶಸ್ತಿಯು ಇಡೀ NAFIS ತಂಡವು ಪ್ರಧಾನ ಮಂತ್ರಿಯ ಅನ್ವೇಷಣೆಯಲ್ಲಿ ಫೂಲ್ ಪ್ರೂಫ್ ಫಿಂಗರ್‌ಪ್ರಿಂಟ್ ಗುರುತಿನ ವ್ಯವಸ್ಥೆಯನ್ನು ರಚಿಸುವ ಸಮರ್ಪಣೆಗೆ ಮನ್ನಣೆಯಾಗಿದೆ.ಇದು ನರೇಂದ್ರ ಮೋದಿಯವರ ಸುಭದ್ರ ಭಾರತದ ದೃಷ್ಟಿ. ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಟ್ವೀಟ್ ಮಾಡಿದ್ದಾರೆ.
NAFIS ಎಂದರೇನು? ನವದೆಹಲಿಯಲ್ಲಿರುವ ಬ್ಯುರೋ (ಸಿಎಫ್‌ಪಿಬಿ) ಯಲ್ಲಿ ಎನ್‌ಸಿಆರ್‌ಬಿ ಇದನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಸ್ವಯಂಚಾಲಿತ ಫಿಂಗರ್‌ಪ್ರಿಂಟ್ಸ್ ಐಡೆಂಟಿಫಿಕೇಶನ್ ಸಿಸ್ಟಮ್ (ಎನ್‌ಎಎಫ್‌ಐಎಸ್) ಯೋಜನೆಯು ಅಪರಾಧ ಮತ್ತು ಅಪರಾಧ-ಸಂಬಂಧಿತ ಫಿಂಗರ್‌ಪ್ರಿಂಟ್‌ಗಳ ದೇಶಾದ್ಯಂತ ಹುಡುಕಬಹುದಾದ ಡೇಟಾಬೇಸ್ ಆಗಿದೆ. ವೆಬ್ ಆಧಾರಿತ ಅಪ್ಲಿಕೇಶನ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಫಿಂಗರ್‌ಪ್ರಿಂಟ್ ಡೇಟಾವನ್ನು ಕ್ರೋಢೀಕರಿಸುವ ಮೂಲಕ ಕೇಂದ್ರ ಮಾಹಿತಿ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Sat, 12 August 23