ದೇಗುಲದಲ್ಲಿ JDS ಮುಖಂಡ ಅಪ್ಪುಗೌಡ ಕೊಲೆಗೆ ಯತ್ನ, ಸಿನಿಮಾ ಸ್ಟೈಲ್​ನಲ್ಲಿ ಆರೋಪಿಗಳ ಬೆನ್ನಟ್ಟಿ ವಶಕ್ಕೆ ಪಡೆದ ಪೊಲೀಸ್

ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅಪ್ಪುಗೌಡ ಮೇಲೆ ಡ್ಯಾಗರ್​ನಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ಇನ್ನು ದುಷ್ಕರ್ಮಿಗಳು ಕೊಲೆ ಮಾಡಲೆಂದೇ ಪ್ಲಾನ್ ಮಾಡಿಕೊಂಡು ಡ್ರಾಗನ್, ಲಾಂಗ್ ತಂದಿದ್ದರು ಎನ್ನಲಾಗಿದೆ.

ದೇಗುಲದಲ್ಲಿ JDS ಮುಖಂಡ ಅಪ್ಪುಗೌಡ ಕೊಲೆಗೆ ಯತ್ನ, ಸಿನಿಮಾ ಸ್ಟೈಲ್​ನಲ್ಲಿ ಆರೋಪಿಗಳ ಬೆನ್ನಟ್ಟಿ ವಶಕ್ಕೆ ಪಡೆದ ಪೊಲೀಸ್
JDS ಮುಖಂಡ ಅಪ್ಪುಗೌಡ
Follow us
ಪ್ರಶಾಂತ್​ ಬಿ.
| Updated By: ಆಯೇಷಾ ಬಾನು

Updated on:Aug 12, 2023 | 3:11 PM

ಮಂಡ್ಯ, ಆ.12: ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇಗುಲದಲ್ಲಿ(Anjaneya Temple) JDS ಮುಖಂಡ ಅಪ್ಪುಗೌಡ(Appu Gowda) ಹತ್ಯೆಗೆ ಯತ್ನ ನಡೆದಿದ್ದು ಆರು ಆರೋಪಿಗಳನ್ನು ಮದ್ದೂರು ಠಾಣೆ ಪೊಲೀಸರು(Maddur Police Station) ವಶಕ್ಕೆ ಪಡೆದಿದ್ದಾರೆ. ಬಿಸಿನೆಸ್ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮದ್ದೂರು ಪುರಸಭೆ ಜೆಡಿಎಸ್​​ ಸದಸ್ಯೆ ಪ್ರಿಯಾಂಕಾ ಪತಿ ಅಪ್ಪುಗೌಡರ ಮೇಲೆ ಡ್ಯಾಗರ್​ನಿಂದ ಚುಚ್ಚಿ ಇಬ್ಬರು ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಸದ್ಯ ಗಾಯಗೊಂಡ JDS​​ ಮುಖಂಡ ಅಪ್ಪುಗೌಡ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಲ್ಲೆಗೊಳಗಾದ ಆಪ್ಪುಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅಪ್ಪುಗೌಡ ಮೇಲೆ ಡ್ಯಾಗರ್​ನಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ಇನ್ನು ದುಷ್ಕರ್ಮಿಗಳು ಕೊಲೆ ಮಾಡಲೆಂದೇ ಪ್ಲಾನ್ ಮಾಡಿಕೊಂಡು ಡ್ರಾಗನ್, ಲಾಂಗ್ ತಂದಿದ್ದರು ಎನ್ನಲಾಗಿದೆ. ಅಪ್ಪುಗೌಡ ಮೇಲೆ ಹಲ್ಲೆ ನಡೆಸಿದಾಗ ಸ್ಥಳದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ ಈ ಪರಿಣಾಮ ಸ್ಥಳದಲ್ಲೇ ಲಾಂಗ್ ಬಿಟ್ಟು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ರು. ಸದ್ಯ ಮದ್ದೂರು ಠಾಣೆ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಹತ್ಯೆಗೆ ಯತ್ನಿಗೆ ಪರಾರಿಯಾಗಿ ಟಾಟಾ ಸುಮೋದಲ್ಲಿ ಹೋಗುವಾಗ ಸಿನಿಮಾ ಸ್ಟೈಲ್​ನಲ್ಲಿ ಬೆನ್ನಟ್ಟಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಟ್ಯಾಕ್ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಪಾವಗಡ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು, ಓರ್ವ ಗಂಭೀರ ಗಾಯ

ಕೊಲೆಗೆ ಮೂರು ದಿನಗಳ ಹಿಂದೆಯೇ ಸಂಚು

ಅಪ್ಪುಗೌಡ ಹತ್ಯೆಗೆ ಮೂರು ದಿನಗಳಿಂದ ಆರೋಪಿಗಳು ಹೊಂಚು ಹಾಕಿದ್ದರು, ಅಪ್ಪುಗೌಡರ ಚಲನ‌ವಲನ ಗಮನಿಸಿ ಸ್ಕೆಚ್ ಹಾಕಿದ್ದರು. ನಿನ್ನೆಯೇ ಮದ್ದೂರಮ್ಮನ ದೇವಾಲಯದ ಬಳಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಆದ್ರೆ ನಿನ್ನೆ ಅಲ್ಲಿ ಜನ ಜಾಸ್ತಿಯಿದ್ದ ಹಿನ್ನಲೆ ಇಂದು ಮದ್ದೂರಮ್ಮನ ದೇವಾಲಯದಲ್ಲಿ ಹತ್ಯೆಗೆ ಯತ್ನಿಸಿದ್ದಾರೆ. ಪ್ರತೀ ಶನಿವಾರ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬರ್ತಿದ್ದ ಅಪ್ಪುಗೌಡ ಇಂದೂ ಕೂಡ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುವ ವೇಳೆ ಹತ್ಯೆಗೆ ಯತ್ನ ನಡೆದಿದೆ. ಒಬ್ಬ ಡ್ರ್ಯಾಗನ್‌ ನಿಂದ ಇರಿದ್ರೆ ಮತ್ತೊಬ್ಬ ಲಾಂಗ್ ಬೀಸಲು ಯತ್ನಿಸಿದ್ದ ಅದೃಷ್ಟವಶಾತ್ ಅಪ್ಪುಗೌಡ ಎಸ್ಕೇಪ್ ಆಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಪೊಲೀಸ್ ಪೇದೆಯಿಂದ ತಪ್ಪಿದ ಹತ್ಯೆ

ಇನ್ನು ಕೊಲೆ ಯತ್ನ ನಡೆಯುವಾಗ ಮದ್ದೂರು ಠಾಣೆ ಪೊಲೀಸ್ ಪೇದೆ ಕುಮಾರ್ ಸ್ಥಳದಲ್ಲೇ ಇದ್ದರು. ಕುಮಾರ್​ರ ಚಾಣಾಕ್ಷತನದಿಂದ ಹತ್ಯೆ ತಪ್ಪಿದೆ. ಹಲ್ಲೆ ವೇಳೆ ಆರೋಪಿಗಳನ್ನ ಅಟ್ಟಾಡಿಸಿ ಪೇದೆ ಕುಮಾರ್ ಬೆನ್ನಟ್ಟಿದರು. ಹತ್ಯೆ ವಿಫಲವಾದಾಗ ಅಲ್ಲಿಂದ ಓಡಿ ಹೋಗಿ ಟಾಟಾ ಸುಮೋದಲ್ಲಿ ತಪ್ಪಿಸಿಕೊಂಡು ಹೋಗಲು ಆರೋಪಿಗಳು ಯತ್ನಿಸಿದರು. ಆರೋಪಿಗಳಿದ್ದ ಟಾಟಾ ಸುಮೋವನ್ನ ಪೇದೆ ಕುಮಾರ್ ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ. ಸುಮೋ ಹಿಂಬಾಲಿಸುತ್ತಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಪೇದೆ ಕುಮಾರ್ ನೀಡಿದ ಮಾಹಿತಿ ಮೇರೆಗೆ ಅಲರ್ಟ್ ಆದ ಪೊಲೀಸರು ಹಲಗೂರು ಬಳಿ ಟಾಟಾ ಸುಮೋ ಅಡ್ಡ ಹಾಕಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಪ್ಪುಗೌಡ ಜೊತೆಯಲ್ಲಿ ಬ್ಯುಸಿನೆಸ್ ಮಾಡುತ್ತಿದ್ದ ವ್ಯಕ್ತಿ ಹುಡುಗರನ್ನ ಕರೆಯಿಸಿ ಅಪ್ಪುಗೌಡ ಹತ್ಯೆಗೆ ಸುಫಾರಿ ನೀಡಿದ್ದರಂತೆ. ಹತ್ಯೆ ಮಾಡಲು ಸುಪಾರಿ ಪಡೆದು ಬೆಂಗಳೂರಿನಿಂದ ಬಂದಿದ್ದ ತಂಡ ಸದ್ಯ ಪೊಲೀಸರ ವಶದಲ್ಲಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:11 pm, Sat, 12 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ