ಬೆಂಗಳೂರಲ್ಲಿ ಕೇವಲ 194 ರಸ್ತೆ ಗುಂಡಿ ಇವೆ ಎಂದ ಬಿಬಿಎಂಪಿ; ಟಿವಿ9 ರಿಯಾಲಿಟ್ ಚೆಕ್​ನಲ್ಲಿ ಸುಳ್ಳು ಲೆಕ್ಕ ಬಯಲು

| Updated By: preethi shettigar

Updated on: Sep 25, 2021 | 10:49 AM

ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ 1138 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ನಂತರ ಸೆಪ್ಟೆಂಬರ್ 21 ರಂದು ಎಲ್ಲಾ ಗುಂಡಿಗಳನ್ನು ಮುಚ್ಚಿದ್ದು, 194 ರಸ್ತೆ ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಲೆಕ್ಕ ನೀಡಿದ್ದಾರೆ.

ಬೆಂಗಳೂರಲ್ಲಿ ಕೇವಲ 194 ರಸ್ತೆ ಗುಂಡಿ ಇವೆ ಎಂದ ಬಿಬಿಎಂಪಿ; ಟಿವಿ9 ರಿಯಾಲಿಟ್ ಚೆಕ್​ನಲ್ಲಿ ಸುಳ್ಳು ಲೆಕ್ಕ ಬಯಲು
ರಸ್ತೆ ಗುಂಡಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿ ಸುಳ್ಳು ಲೆಕ್ಕ ನೀಡಿದೆ. ಬೆಂಗಳೂರಲ್ಲಿ ಕೇವಲ 194 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ (BBMP) ವರದಿ ನೀಡಿದೆ. ಆದರೆ ಟಿವಿ9 ರಿಯಾಲಿಟ್ ಚೆಕ್​ನಲ್ಲಿ ಬಿಬಿಎಂಪಿ ಸುಳ್ಳು ಲೆಕ್ಕ ಬಯಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿದ್ದಾರೆ. ಸೆಪ್ಟೆಂಬರ್ 6 ರಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಅದರಂತೆ ಸೆಪ್ಟೆಂಬರ್ 21 ರ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು. ಆದರೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿನ ರಸ್ತೆಯಲ್ಲಿ ಕೇವಲ 194 ಗುಂಡಿಗಳಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ಅವರಿಗೆ ಲೆಕ್ಕ ತೋರಿಸಿದೆ.

ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ 1138 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ನಂತರ ಸೆಪ್ಟೆಂಬರ್ 21 ರಂದು ಎಲ್ಲಾ ಗುಂಡಿಗಳನ್ನು ಮುಚ್ಚಿದ್ದು, 194 ರಸ್ತೆ ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಲೆಕ್ಕ ನೀಡಿದ್ದಾರೆ. ಸದ್ಯ ಬಿಬಿಎಂಪಿ ಲೆಕ್ಕ ಸುಳ್ಳು ಎಂಬುವುದು ರೂಜುವಾಗಿದೆ. ಏಕೆಂದರೆ ಬೆಂಗಳೂರಿನ ಹೃದಯ ಭಾಗದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಎಣಿಕೆಗೆ ಸಿಗದಂತಾಗಿದೆ.

ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಎದುರೇ ರಸ್ತೆ ಗುಂಡಿ
ಮಂತ್ರಿ ಮಾಲ್ ಎದುರು ಇರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿ ಎದುರಿನಲ್ಲಿ ಇರುವ ಮುಖ್ಯ ರಸ್ತೆಯಲ್ಲಿಯೇ ರಸ್ತೆ ಗುಂಡಿಗಳಿವೆ. ಇನ್ನು ಸಂಪಿಗೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಅಧಿಕಾರಿಗಳು ಮುಚ್ಚದೆ ಲೆಕ್ಕ ನೀಡಿದ್ದಾರೆ.

ಕೆ.ಆರ್.ಮಾರ್ಕೆಟ್​ನ ಫ್ಲೈ ಓವರ್ ಮೇಲೆ ಒಂದೇ ಕಡೆ ಹತ್ತು ರಸ್ತೆ ಗುಂಡಿ ಕಂಡುಬಂದಿದೆ. ವಾಹನ ಸವಾರರು ಈ ಗುಂಡಿಗಳಿಂದಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:
Viral Video: ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಟ್ರಾಫಿಕ್ ಪೊಲೀಸ್; ವೈರಲ್ ವಿಡಿಯೋಗೆ ಗೃಹ ಸಚಿವರಿಂದಲೂ ಮೆಚ್ಚುಗೆ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು; ಬಿಬಿಎಂಪಿ ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ

( BBMP says there are only 194 potholes in Bangalore)

Published On - 10:42 am, Sat, 25 September 21