ಬೆಂಗಳೂರು: ನಿನ್ನೆ(ಜೂನ್ 06) ವಾರ್ಡ್ ಮರುವಿಂಗಡನಾ ಸಮಿತಿ ಬಿಬಿಎಂಪಿ ವಾರ್ಡ್ ಮರು ವಿಂಗಡನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆ 198 ವಾರ್ಡ್ಗಳನ್ನ 243 ವಾರ್ಡ್ಗಳಾಗಿ ಮರುವಿಂಗಡನೆ ಹಾಗೂ ಪ್ರತಿ ವಾರ್ಡ್ ಗೆ 30-35 ಸಾವಿರ ಮತದಾರರನ್ನ ಒಳಗೊಂಡಂತೆ ವಿಂಗಡನೆ ವರದಿ ಸಲ್ಲಿಸಿದೆ.
ಈ ಹಿಂದೆ ಬಿಬಿಎಂಪಿ ಯಡವಟ್ಟು ಅಥವಾ ಉದ್ದೇಶ ಪೂರ್ವಕ ತಪ್ಪಿನಿಂದ ವಾರ್ಡ್ ವಿಂಗಡಣೆ ವರದಿ ವಾಪಸ್ ಬಂದಿತ್ತು. 8 ವಾರಗಳ ಒಳಗಾಗಿ ಚುನಾವಣೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಬಿಬಿಎಂಪಿಗೆ ಹೇಳಿದೆ. ಆ ಹಿನ್ನೆಲೆಯಲ್ಲಿ ಒಂದಿಲ್ಲೊಂದು ತಯಾರಿ ಮಾಡಿಕೊಳ್ಳುತ್ತಿರುವ ಬಿಬಿಎಂಪಿ, ವಾರ್ಡ್ ಮರು ವಿಂಗಡಣೆ ಕರಡು ಸಿದ್ಧಪಡಿಸಿದೆ. 198 ಇದ್ದ ವಾರ್ಡ್ ಸಂಖ್ಯೆ 243 ಆಗಿದೆ. ಸರಾಸರಿ 28 ಸಾವಿರ ಮತದಾರರಂತೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡನ್ನು ಸರ್ಕಾರ ವಾಪಸ್ ಕಳುಹಿಸಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ತಿಳಿಸಿದ್ದರು. ಹೀಗಾಗಿ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೆ ನಿನ್ನೆ ಸಮಿತಿ ಬಿಬಿಎಂಪಿ ವಾರ್ಡ್ ಮರು ವಿಂಗಡನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ಸದಾ ಬಂಗಾರ ಧರಿಸುವುದರಿಂದ ಈ ಐದು ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತಂತೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:57 am, Tue, 7 June 22