ಶಿವರಾಮಕಾರಂತ ಬಡಾವಣೆ ಸೈಟ್ ಹಂಚಿಕೆ ವಿವಾದ; ಫಲಾನುಭವಿಗಳಿಗೆ ಬಿಡಿಎಯಿಂದ ಗುಡ್​ ನ್ಯೂಸ್

ಶಿವರಾಮಕಾರಂತ ಬಡಾವಣೆ ಸೈಟ್ ಹಂಚಿಕೆ ವಿವಾದ ಪಡೆದುಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಅದರಂತೆ ಸಿದ್ಧತೆ ನಡೆಸುತ್ತಿರುವ ಬಿಡಿಎ, ಗಣೇಶ ಹಬ್ಬದ ನಂತರ ಶಿವರಾಮಕಾರಂತ ಬಡಾವಣೆ ಸೈಟ್​ಗಳನ್ನು ಫಲಾನುಭವಿಗಳಿಗೆ ಹಂಚಲು ತೀರ್ಮಾನಿಸಿದೆ.

ಶಿವರಾಮಕಾರಂತ ಬಡಾವಣೆ ಸೈಟ್ ಹಂಚಿಕೆ ವಿವಾದ; ಫಲಾನುಭವಿಗಳಿಗೆ ಬಿಡಿಎಯಿಂದ ಗುಡ್​ ನ್ಯೂಸ್
ಶಿವರಾಮಕಾರಂತ ಬಡಾವಣೆ ಸೈಟ್ ಹಂಚಿಕೆ ಬಗ್ಗೆ ಮಾಹಿತಿ ನೀಡಿದ ಬಿಡಿಎ
Follow us
| Updated By: Rakesh Nayak Manchi

Updated on: Sep 15, 2023 | 2:27 PM

ಬೆಂಗಳೂರು, ಸೆ.15: ಶಿವರಾಮಕಾರಂತ ಬಡಾವಣೆ ಸೈಟ್ (Shivaram karanth Layout sites) ಹಂಚಿಕೆ ವಿವಾದ ಪಡೆದುಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಅದರಂತೆ ಸಿದ್ಧತೆ ನಡೆಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority), ಗಣೇಶ ಹಬ್ಬದ ನಂತರ ಶಿವರಾಮಕಾರಂತ ಬಡಾವಣೆ ಸೈಟ್​ಗಳನ್ನು ಫಲಾನುಭವಿಗಳಿಗೆ ಹಂಚಲು ತೀರ್ಮಾನಿಸಿದೆ.

ಬಡಾವಣೆಯ ವಾಸ್ತವ ಸ್ಥಿತಿ ತಿಳಿಸುವ ನಿಟ್ಟಿನಲ್ಲಿ ಬಿಡಿಎ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನ್ಯಾ. ಚಂದ್ರಶೇಖರ್ ಸಮಿತಿ ಮಾಹಿತಿ ನೀಡಿದೆ. ಶಿವರಾಮಕಾರಂತ ಬಡಾವಣೆಯನ್ನು ಒಟ್ಟು 3456 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. 2008ರಲ್ಲಿ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು.

ಬಡಾವಣೆಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನ್ಯಾ. ಚಂದ್ರಶೇಖರ್ ಸಮಿತಿಯನ್ನು 2020 ರಲ್ಲಿ ರಚಿಸಲಾಗಿತ್ತು. 2018 ಆಗಸ್ಟ್ 3ರ ಒಳಗೆ ನಿರ್ಮಾಣ ಮಾಡಿದ ಕಟ್ಟಡಗಳನ್ನ ಸಕ್ರಮಗೊಳಿಸುವಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ 7724 ಅರ್ಜಿಗಳು ಸಮಿತಿಗೆ ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ: DK Shivakumar Speech: ಟ್ರಾಫಿಕ್, ಕಸ ಸಮಸ್ಯೆ ಸೇರಿದಂತೆ ಬ್ರ್ಯಾಂಡ್​ ಬೆಂಗಳೂರು ಕಟ್ಟುವ ಬಗ್ಗೆ​ ಡಿಕೆ ಶಿವಕುಮಾರ್ ಮನದಾಳದ ಮಾತು​

ಸಲ್ಲಿಕೆಯಾದ 7724 ಅರ್ಜಿಗಳ ಪೈಕಿ 5171 ಕಟ್ಟಡಗಳನ್ನ ಸಕ್ರಮಗೊಳಿಸಲಾಗಿತ್ತು. ಬಿಡಿಎ ಅನುಮೋದನೆಗೊಳಿಸಿದ 13 ಖಾಸಗಿ ಬಡಾವಣೆಗಳನ್ನ ಸಕ್ರಮಗೊಳಿಸಲಾಗಿದೆ. ಸಕ್ರಮಗೊಳಿಸಿದ ಕಟ್ಟಡಗಳ ಮಾಲೀಕರು ಬಿಡಿಎ ಸೂಚಿಸಿದ ಅಭಿವೃದ್ಧಿ ಶುಲ್ಕ ಪಾವತಿಸಿ ಸಕ್ರಮಗೊಳಿಸಬಹುದು.

ಬಡಾವಣೆಗೆ ಜಮೀನು ನೀಡಿದ ಭೂ ಮಾಲೀಕರಿಗೂ ಅಭಿವೃದ್ಧಿ ಪಡಿಸಿದ ಜಮೀನು ನೀಡಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅಗತ್ಯ ದಾಖಲೆ ನೀಡಿ ಭೂ ಮಾಲಿಕರು ಡೆವಲಪ್ ಲ್ಯಾಂಡ್ ಪಡೆಯೋಲು ಸೂಚನೆ ನೀಡಿದೆ.

ಸದ್ಯ, ಶಿವರಾಮಕಾರಂತ ಬಡಾವಣೆಯಲ್ಲಿ 34000 ನಿವೇಶನ ನಿರ್ಮಾಣ ಪ್ರಗತಿಯಲ್ಲಿದೆ. 4500 ಮೂಲೆ ನಿವೇಶನಗಳು ಹರಾಜು ಪ್ರಕ್ರಿಯೆ ಜಾರಿಯಲ್ಲಿದೆ. 34000 ನಿವೇಶನಗಳ ಪೈಕಿ 29000 ನಿವೇಶನ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ