ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ- ಇನ್ನಾದರೂ ಕಾನೂನು ಕ್ರಮಕೈಗೊಳ್ಳಿ: ಬಿಡಿಎ ಅಧ್ಯಕ್ಷರಿಗೆ ಸಾಯಿದತ್ತ ಮನವಿ

| Updated By: ಸಾಧು ಶ್ರೀನಾಥ್​

Updated on: Jul 17, 2021 | 12:53 PM

BDA Land Encroachment: ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ. ಸ್ಥಳಿಯ ಅಧಿಕಾರಿಗಳಿಂದ ಬಿಡಿಎ ಆಸ್ತಿ ಖಾಸಗಿಯವರ ಪಾಲಾಗಿದೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಬಿಡಿಎ ಅಧ್ಯಕ್ಷರಿಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮನವಿ ಮಾಡಿದ್ದಾರೆ.

ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ- ಇನ್ನಾದರೂ ಕಾನೂನು ಕ್ರಮಕೈಗೊಳ್ಳಿ: ಬಿಡಿಎ ಅಧ್ಯಕ್ಷರಿಗೆ ಸಾಯಿದತ್ತ ಮನವಿ
ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ- ಇನ್ನಾದರೂ ಕಾನೂನು ಕ್ರಮಕೈಗೊಳ್ಳಿ: ಬಿಡಿಎ ಅಧ್ಯಕ್ಷರಿಗೆ ಸಾಯಿದತ್ತ ಮನವಿ
Follow us on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಧಿಕಾರಕ್ಕೆ ಸೇರಿದ ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ. ಸ್ಥಳಿಯ ಅಧಿಕಾರಿಗಳಿಂದ ಬಿಡಿಎ (BDA) ಆಸ್ತಿ ಖಾಸಗಿಯವರ ಪಾಲಾಗಿದೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಬಿಡಿಎ ಅಧ್ಯಕ್ಷರಿಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮನವಿ ಮಾಡಿದ್ದಾರೆ.

ಬಿಡಿಎ ಆಸ್ತಿ ಸಂಬಂಧ ಖಾಸಗಿ ಹೋಟೆಲ್​ನಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸುದ್ದಿಗೋಷ್ಠಿ ನಡೆಸಿದ್ದು, ಇಲ್ಲಿಯವರೆಗೂ ಬಿಡಿಎ 64 ಲೇಔಟ್ ಗಳನ್ನ ಮಾಡಿದೆ. ಸಾವಿರಾರು ಎಕರೆ ಆಸ್ತಿ ಬಿಡಿಎ ಕೈತಪ್ಪಿ ಹೋಗಿದೆ. ಬಿಡಿಎಗೆ (Bangalore Development Authority) ತನ್ನ ಆಸ್ತಿಯ ನಿಖರ ಮಾಹಿತಿ ಇರಲಿಲ್ಲ. ಬಿಡಿಎಗೆ ಸೇರಿದ ಸಾವಿರಾರು ಕೋಟಿ ಆಸ್ತಿಯು ಖಾಸಗಿ ವ್ಯಕ್ತಿಗಳ ಪಾಲಾಗಿತ್ತು. ಹಾಗಾಗಿ ಬಿಡಿಎ ತನ್ನ ಜಾಗವನ್ನ ಗುರುತಿಸಿಕೊಳ್ಳಲು ವಿಫಲವಾಗಿದ್ದು, ಈ ಸಂಬಂಧ ನಾನು ಬಿಡಿಎ ಲ್ಯಾಂಡ್ ಅಡಿಟ್ ಮಾಡುವಂತೆ ಲೋಕಯುಕ್ತಕ್ಕೆ ದೂರು ನೀಡಿದ್ದೆ.

ಈ ಹಿನ್ನೆಲೆ ಅಂದಿನ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಲ್ಯಾಂಡ್ ಆಡಿಟ್ ಮಾಡಲು ಆದೇಶ ಹೊರಡಿಸಿದ್ದರು. ಆಡಿಟ್ ಮುಗಿದ ಬಳಿಕ ಬಿಡಿಎನಿಂದ ಕೈತಪ್ಪಿ ಹೋಗಿದ್ದ ಸಂಪೂರ್ಣ ಆಸ್ತಿಯ ವಿವರವನ್ನ ಲೋಕಯುಕ್ತಕ್ಕೆ ಸಲ್ಲಿಕೆಯಾಗಿದೆ. ವರದಿಯಿಂದ 50 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನ ಬಿಡಿಎ ಕಳೆದುಕೊಂಡಿದ್ದು ಬೆಳಕಿಗೆ ಬಂದಿದೆ. 20.836 ಎಕರೆ ಜಮೀನನ್ನು (BDA Land Encroachment) ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಿಡಿಎ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಸ್ಥಳಿಯ ಅಧಿಕಾರಿಗಳಿಂದ ಬಿಡಿಎ ಆಸ್ತಿ ಖಾಸಗಿಯವರ ಪಾಲಾಗಿದೆ. ತಕ್ಷಣ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಡಿಎ ಅಧ್ಯಕ್ಷರಿಗೆ ಸಾಯಿದತ್ತ (RTI Activist Sai Datta) ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಬಿಡಿಎ 50000 ಕೋಟಿ ಮೌಲ್ಯದ ಆಸ್ತಿ ಖಾಸಗಿ ಒತ್ತುವರಿಯಾಗಿದೆ- ಇನ್ನಾದರೂ ಕಾನೂನು ಕ್ರಮಕೈಗೊಳ್ಳಿ: ಬಿಡಿಎ ಅಧ್ಯಕ್ಷರಿಗೆ ಸಾಯಿದತ್ತ ಮನವಿ

TV9 Kannada Digital Live: ಬಿಡಿಎ ವಿಸರ್ಜನೆಯಿಂದಲೇ ಭ್ರಷ್ಟಾಚಾರ ತಡೆಯಲು ಸಾಧ್ಯ; ತಜ್ಞರ ಅಭಿಮತ

(BDA has lost 50 thousand crore rupees worth property in encroachment take action pleads activist Sai Datta)