TV9 Kannada Digital Live: ಬಿಡಿಎ ವಿಸರ್ಜನೆಯಿಂದಲೇ ಭ್ರಷ್ಟಾಚಾರ ತಡೆಯಲು ಸಾಧ್ಯ; ತಜ್ಞರ ಅಭಿಮತ

ನಮ್ಮ ಜನಪ್ರತಿನಿಧಿಗಳು ಸಿಂಗಪೂರ್, ಜಪಾನ್​ನಂತಹ ವಿದೇಶಗಳಿಗೆ ಪ್ರವಾಸ ಹೋದಾಗ ಪ್ರಸಿದ್ಧ ಸ್ಥಳಗಳನ್ನು ನೋಡಿ ಬರುತ್ತಾರೆಯೇ ಹೊರತು, ಅಲ್ಲಿಯ ನಗರಾಭಿವೃದ್ಧಿ ಯೋಜನೆಗಳನ್ನು ತಿಳಿದುಕೊಳ್ಳುವುದಿಲ್ಲ ವಾಸ್ತುತಜ್ಞ, ನಗರ ಯೋಜನಾ ತಜ್ಞರೂ ಆದ ನರೇಶ್ ನರಸಿಂಹನ್ ವಿಷಾದ ವ್ಯಕ್ತಪಡಿಸಿದರು.

TV9 Kannada Digital Live: ಬಿಡಿಎ ವಿಸರ್ಜನೆಯಿಂದಲೇ ಭ್ರಷ್ಟಾಚಾರ ತಡೆಯಲು ಸಾಧ್ಯ; ತಜ್ಞರ ಅಭಿಮತ
ಎಡವಿದ ಬಿಡಿಎ, ಬೆಂಗಳೂರು ನಗರದ ಪುನರುತ್ಥಾನ ಹೇಗೆ?
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on: Feb 11, 2021 | 8:45 PM

ಬೆಂಗಳೂರು ನಗರವನ್ನು ಅತ್ಯಂತ ಸುವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಹುಟ್ಟು ಹಾಕಿದ್ದ ಬಿಡಿಎ (BDA) ಪದೇಪದೇ ಎಡವುತ್ತಲೇ ಇರುತ್ತದೆ. ಇದು ರಾಜಧಾನಿ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ಅಪಖ್ಯಾತಿಯನ್ನೂ ತರುತ್ತಿದೆ ಎಂಬುದು ರಾಜ್ಯದ ಜನರನ್ನು ಚಿಂತೆಗೀಡು ಮಾಡುತ್ತಿದೆ. ನಮ್ಮ ನಗರದ ಅಭಿವೃದ್ಧಿಯ ಲಯವನ್ನೇ ತಪ್ಪಿಸಿ ಈಗ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಡಿಎಯನ್ನು ಹಾದಿಗೆ ತರುವುದು ಹೇಗೆ? ಈ ವಿಷಯದ ಕುರಿತು ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ (TV9 Kannada Digital Live) ವಿಷಯ ತಜ್ಞರಾದ ಮಣಿಪಾಲ್ ಜಾಗತಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್​ದಾಸ್​ ಪೈ, ನಗರ ಯೋಜನಾ ತಜ್ಞ ನರೇಶ್ ನರಸಿಂಹನ್,ಮಾಜಿ ಐಎಎಸ್​ ಅಧಿಕಾರಿ, ಭೃಷ್ಟಾಚಾರ ವಿರೋಧಿ ಹೋರಾಟಗಾರ ರಘುನಂದನ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಭವಾನಿ ಹೌಸಿಂಗ್ ಕೋಆಪರೇಟಿವ್ ಸಂಸ್ಥೆಯ ವಿವಾದ ಈಗ ಮುನ್ನೆಲೆಗೆ ಬಂದಿದ್ದು, 12 ಎಕರೆ ಜಮೀನನ್ನು ಬಿಡಿಎಯಿಂದ ಪಡೆದಿರುವುದು ವಿವಾದದ ಬೃಹತ್ ಸ್ವರೂಪ ಪಡೆದಿದೆ. ಇದು 500 ಕೋಟಿಗೂ ಅತಿ ದೊಡ್ಡ ಭೃಷ್ಟಾಚಾರ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಿಡಿಎಯಲ್ಲಿ ಏನಾಗುತ್ತಿದೆ, ಏನಾಗಬೇಕಿತ್ತು ಎಂಬ ಪ್ರಶ್ನೆಗೆ ಮಣಿಪಾಲ್ ಜಾಗತಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ಬೆಂಗಳೂರು ನಗರದ ಸುಸ್ಥಿರ ಅಭಿವೃದ್ಧಿಯ ಕುರಿತು ಪರಿಪಕ್ವವಾಗಿ ಅರಿತಿರುವ ಮೋಹನ್​ದಾಸ್​ ಪೈ ಅವರು ತಮ್ಮ ಅತಿ ದೀರ್ಘ ಅನುಭದ ಆಧಾರದ ಮೇಲೆ ಅಭಿಪ್ರಾಯ ಹಂಚಿಕೊಂಡರು. ‘ಬಿಡಿಎಯಲ್ಲಿ ಆಗಬೇಕಿರುವುದು ಚಿಕ್ಕಪುಟ್ಟ ಸುಧಾರಣೆಯಲ್ಲ, ಅತ್ಯಂತ ಗಮನಾರ್ಹ ಬದಲಾವಣೆಗಳೇ ಬಿಡಿಎಯಲ್ಲಿ ಘಟಿಸಬೇಕಿದೆ. ಮೊದಲು ಇ ಗವರ್ನೆನ್ಸ್ ಜಾರಿಗೆ ಬರಬೇಕಿದೆ. 5 ಕ್ಕಿಂತ ಹೆಚ್ಚು ವರ್ಷಗಳಿಂದ ಬಿಡಿಎಯಲ್ಲೇ ಇರುವ ಹಳೆಯ ಅಧಿಕಾರಿಗಳನ್ನು ವರ್ಗಾಯಿಸಬೇಕು. ಇದೊಂದೇ ಅಲ್ಲ, ಇಂತಹ ಹಲವು ಬದಲಾವಣೆಗಳು ಬಿಡಿಎಗೆ ಅಗತ್ಯವಿದೆ. ಬಿಡಿಎ ಸದ್ಯ ಹಳೆಯ ಸ್ವರೂಪದಲ್ಲಿದ್ದು, 30-35 ವರ್ಷಗಳ ಹಿಂದಿನ ಸ್ವರೂಪ ತಕ್ಷಣವೇ ಬದಲಾಗಬೇಕಿದೆ ಎಂದು ಅಭಿವೃದ್ಧಿಯ ಮಾರ್ಗವನ್ನು ವಿವರಿಸಿದರು.

1 ಕೋಟಿ ಜನರಿಗೆ ಇರುವುದು ಓರ್ವ ಕಮಿಷನರ್ ಮಾತ್ರ! ಬಿಡಿಎಯಿಂದ ಬೆಂಗಳೂರಿನ ಮಾನ ಹರಾಜಾಗುತ್ತಿರುವ ಕುರಿತು ವಿವರಿಸಿದ ಅವರು, ಹಳೆಯ ಸ್ವರೂಪದಿಂದ ಯಾವುದೇ ಸುಧಾರಣೆಯಾಗದೇ ಬೆಂಗಳೂರಿನ ಅಭಿವೃದ್ಧಿಯಾಗದು. ಬೆಂಗಳೂರು 5 ಕಾರ್ಪೊರೇಷನ್ ಆಗಬೇಕು. 1 ಕೋಟಿ ಜನರಿಗೆ ಓರ್ವ ಕಮಿಷನರ್ ಇದ್ದಾರೆ. ಇದರಿಂದ ಅಬಿವೃದ್ಧಿ ಕುಂಠಿತವಾಗುತ್ತಿದೆ. ಮೊನ್ನೆ ತಾನೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿ ಸೈಕಲ್​ ಲೇನ್​ ಅನ್ನು ರಾತ್ರೋರಾತ್ರಿ ಅಗೆಯಲಾಗಿದೆ. ನಿಮ್ಮ ಮಾತನ್ನೇ ಬಿಡಿಎಯವರು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ ಎಂದು ಮೋಹನ್​ದಾಸ್ ಪೈ ಅವರು ಖಾರವಾಗಿ ನುಡಿದರು.

ಬೆಂಗಳೂರಿಗೆ ಬೇಕು ಸಂಪುಟ ದರ್ಜೆಯ ಮಂತ್ರಿ ಬೆಂಗಳೂರಿಗೆ ಎಂದೇ ಓರ್ವ ಸಂಪುಟ ದರ್ಜೆಯ ಮಂತ್ರಿಯ ಅಗತ್ಯವಿದೆ. ಆಡಳಿತದಲ್ಲಿ ಸುಧಾರಣೆಯಿಲ್ಲದೇ ಯಾವುದರೆ ಬದಲಾವಣೆ, ಅಭಿವೃದ್ಧಿಯೂ ಆಗದು ಎಂದು ಬಹಳ ವರ್ಷಗಳಿಂದ ವಾದಿಸುತ್ತಲೇ ಬಂದಿದ್ದೇವೆ. ಬೆಂಗಳೂರಿನಲ್ಲಿ ಹೊಸ ಸೌಕರ್ಯಗಳನ್ನು ಕಲ್ಪಿಸುವುದರಿಂದಲೇ ಹೊಸ ಹೊಸ ಸ್ಟಾರ್ಟ್ ಅಪ್​ಗಳನ್ನು ಸೆಳೆಯಬಹುದು. ಲಂಚ ಕೇಳದೇ ಜನರ ಕೆಲಸಗಳು ಆಗಬೇಕು ಎಂದು ಅವರು ವಿವರಿಸಿದರು.

ಬೆಂಗಳೂರಿನ ಕಸ ತೆಗೆಯಲು ನೂರಾರು ಕೋಟಿಗಳ ಗುತ್ತಿಗೆ ನೀಡಲಾಗುತ್ತದೆ. ಆದರೆ, ನಗರದ ತುಂಬ ಕಸವೇ ತುಂಬಿರುತ್ತದೆ. ಮೂರು ದಶಕಗಳಿಂದ ಹತ್ತಾರು ಮುಖ್ಯಮಂತ್ರಿಗಳು, ಸಚಿವರುಗಳಿಗೆ ಮನವಿ ನೀಡಿದರೂ ಯಾವುದೇ ಕೆಲಸ ಆಗಿಲ್ಲ ಎಂದ ಅವರು ವಾಸ್ತವ ಪರಿಸ್ಥಿತಿ ಬಿಚ್ಚಿಟ್ಟರು.

ನಮ್ಮೆದುರೇ ಬಿಡಿಎಯಲ್ಲಿ ಹಣ ಓಡುತ್ತಿದೆ ಆದರೂ ಅಭಿವೃದ್ಧಿಯಾಗುತ್ತಿಲ್ಲವಲ್ಲ.. ಎಂಬ ಮಾತಿಗೆ ಪ್ರತಿಕ್ರಿಯಿಸಿದ ವಾಸ್ತುತಜ್ಞ, ನಗರ ಯೋಜನಾ ತಜ್ಞರೂ ಆದ ನರೇಶ್ ನರಸಿಂಹನ್ ಅವರು, 1975 ರಿಂದ ಬಿಡಿಎ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಏಜೆನ್ಸಿಗಳೂ ಬಿಡಿಎ ಕೈಲಿದೆ. ಭೂ ವಶಪಡಿಸಿಕೊಳ್ಳುವ ಅಧಿಕಾರ, ಲೇಔಟ್, ಮಾರಾಟ, ಹಂಚಿಕೆ ಸೇರಿದಂತೆ ನಗರ ನಿರ್ಮಾಣದ ಅಧಿಕಾರ ಸೇರಿದಂತೆ ಎಲ್ಲವೂ ಬಿಡಿಎ ಕೈಯಲ್ಲೇ ಇದೆ. ಒಂದೇ ಸಂಸ್ಥೆಯ ಬಳಿ ಎಲ್ಲ ಅಧಿಕಾರವೂ ಇರುವುದರಿಂದಲೇ ದುರ್ಬಳಕೆ ಆಗುತ್ತಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ‌ಯವರು ಮುಖ್ಯಮಂತ್ರಿ ಆದಾಗ ಮೆಟ್ರೋ ಪಾಲಿಟನ್ ಅಫೆಕ್ಟ್ ಬಾಡಿ ಎಂಬ ಕಮಿಟಿ ರಚನೆಯಾಗಿತ್ತು. ಆದರೆ ಅದು ರಚನೆಯಾಗಿದ್ದು ಬಿಟ್ಟರೆ, ಬೇರಾವ ಕೆಲಸವೂ ಆಗಿಲ್ಲ. ಬಿಡಿಎ ಒಳಗೇ ಒಂದು ಹತ್ತು ಇಲಾಖೆಯಂತಹ ಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ಮುರಿಯಲು ಬಿಡಿಎಯನ್ನು ವಿಭಜಿಸಿ ಅದರ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕು ಎಂದು ನರೇಶ್ ನರಸಿಂಹನ್ ಅವರು ಬಿಡಿಎಯ ಹುಳುಕುಗಳನ್ನು ತೆರೆದಿಟ್ಟರು.

ಸಬ್ ಅರ್ಬನ್ ಕಲ್ಪನೆ ಜಾರಿಯಾಬೇಕು ಬೆಂಗಳೂರು ನಗರವನ್ನು ಭಿನ್ನವಾಗಿ ನಿರ್ಮಿಸಲು ಲೇಔಟ್ ಕಲ್ಪನೆ ನಿಲ್ಲಿಸಿ, ಸಬ್ ಅರ್ಬನ್ ಸೆಂಟರ್ ಎಂಬ ಕಲ್ಪನೆ ತರಬೇಕಿದೆ. ಎಲ್ಲರೂ ಒಂದೇ ಚಿಕ್ಕ ಜಾಗದಲ್ಲಿ ವಾಸಿಸಲಾಗದು. ಹೀಗಾಗಿ ನಗರದ ಹೊರವಲಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಬೆಂಗಳೂರು ಅಭಿವೃದ್ಧಿಯ ದಾರಿಗಳನ್ನು ವಿವರಿಸಿದರು.

ಬಿಡಿಎಯ ಕೆಲಸಗಳಲ್ಲಿ ಜನರನ್ನು ಮಧ್ಯವರ್ತಿಗಳು ಆಟ ಆಡಿಸುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ನರೇಶ್ ನರಸಿಂಹನ್, 1999 ನೇ ರವೀಂದ್ರ ಎಂಬ ಕಮಿಷನರ್ ಬಿಡಿಎಯ ಸ್ವರೂಪ ಬದಲಾಗುವ ಉದ್ದೇಶ ಇಟ್ಟುಕೊಂಡು ಬಿಡಿಎಯನ್ನು ವಿಸರ್ಜಿಸಲು ಸಲಹೆ ನೀಡಿದ್ದರು. ನಮ್ಮ ಬೆಂಗಳೂರನ್ನು ಭವಿಷ್ಯದ ಕನಸು ಇಟ್ಟುಕೊಂಡು ಅಭಿವೃದ್ಧಿಪಡಿಸುವವರ ಅಗತ್ಯವಿದೆ. ಬೆಂಗಳೂರಿನ ನೀರು, ಗಾಳಿ, ಆಡಳಿತದಂತಹ ಪಂಚಭೂತಗಳನ್ನು ಯೋಚಿಸದೇ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಪ್ರತಿಪಾದಿಸಿದರು.

ನಮ್ಮ ಜನಪ್ರತಿನಿಧಿಗಳು ಸಿಂಗಪೂರ್, ಜಪಾನ್​ನಂತಹ ವಿದೇಶಗಳಿಗೆ ಪ್ರವಾಸ ಹೋದಾಗ ಪ್ರಸಿದ್ಧ ಸ್ಥಳಗಳನ್ನು ನೋಡಿ ಬರುತ್ತಾರೆಯೇ ಹೊರತು, ಅಲ್ಲಿಯ ನಗರಾಭಿವೃದ್ಧಿ ಯೋಜನೆಗಳನ್ನು ತಿಳಿದುಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ಥಳೀಯ ಆಡಳಿತಗಳೇ ನಗರ ಯೋಜನೆಗಳನ್ನು ರೂಪಿಸಬೇಕು ಮಾಜಿ ಐಎಎಸ್​ ಅಧಿಕಾರಿ, ಭೃಷ್ಟಾಚಾರ ವಿರೋಧಿ ಹೋರಾಟಗಾರ ರಘುನಂದನ್ ಬಿಡಿಎಯಲ್ಲಿ ಬದಲಾವಣೆ ಮಾಡಲು ಸಾಧ್ಯತೆಯ ಕುರಿತು ವಿವರಿಸಿ, ಇತರ ದೇಶಗಳಂತೆ ನಮ್ಮಲ್ಲೂ ಸ್ಥಳೀಯ ಆಡಳಿತಗಳೇ ನಗರ ಯೋಜನೆಗಳನ್ನು ರೂಪಿಸಬೇಕು. ಬೆಂಗಳೂರು ಮೆಟ್ರೊ ಪಾಲಿಟನ್ ಆವರಣಕ್ಕೆ ಸೇರುವ ಸುಮಾರು 200 ಗ್ರಾಮಗಳನ್ನೂ ಸೇರಿಸಿಕೊಂಡು ನೂತನ ಕಲ್ಪನೆಗಳನ್ನು ಜಾರಿಗೊಳಿಸಬೇಕು ಎಂದು ವಿವರಿಸಿದರು.

ಬಿಡಿಎಯನ್ನು ವಿಸರ್ಜಿಸಿ, ಕಾರ್ಪೊರೇಶನ್​ಗೆ ಬಲ ನೀಡಬೇಕು. ಪ್ಲಾನಿಂಗ್ ಅಥಾರಿಟಿಯನ್ನು ಮೆಟ್ರೊ ಪಾಲಿಟನ್​ಗೆ ವಹಿಸಬೇಕು. ಬೆಂಗಳೂರಲ್ಲಿ ಅತಿ ಹೆಚ್ಚು ಭೂಮಿ ಹೊಂದಿರುವ ಕೇಂದ್ರ ಸರ್ಕಾರದ ರೈಲ್ವೆ, ರಕ್ಷಣಾ ಇಲಾಖೆ ಮತ್ತು ವಿಮಾನಯಾನ ಇಲಾಖೆಗಳ ಪಾಲ್ಗೊಳ್ಳುವಿಕೆಯಲ್ಲಿ ನಗರದ ಅಭಿವೃದ್ಧಿ ಆಗಬೇಕು ಎಂದು ವಿವರಿಸಿದರು. ಎಲ್ಲ ಸರ್ಕಾರಗಳೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ವಿವರಿಸಿದರು.

ಇದನ್ನೂ ಓದಿ: Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ