ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದೆ ಅಪರಿಚಿತ ವ್ಯಕ್ತಿಯ ನಡೆ; ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದೇಕೆ?

| Updated By: sandhya thejappa

Updated on: Dec 09, 2021 | 10:53 AM

4 ವರ್ಷದ ಮಗುವನ್ನು ಒಂದು ಕಿಲೋಮೀಟರ್ ಹೊತ್ತುಕೊಂಡು ಹೋಗಿದ್ದ. ಕಟ್ಟಡ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರ 4 ವರ್ಷದ ಮಗುವನ್ನು ಹೊತ್ತಿಕೊಂಡು ಹೋಗಿದ್ದ.

ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದೆ ಅಪರಿಚಿತ ವ್ಯಕ್ತಿಯ ನಡೆ; ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದೇಕೆ?
ಅಪರಿಚಿತ ವ್ಯಕ್ತಿ, ನಾಲ್ಕು ವರ್ಷದ ಮಗು
Follow us on

ಬೆಂಗಳೂರು: ರಾಜ್ಯದಲ್ಲಿ ಆಗಾಗ ಮಕ್ಕಳ ಕಿಡ್ನಾಪ್ ಆಗುತ್ತಿರುತ್ತದೆ. ಹೊರಗಡೆ ಆಡಿಕೊಂಡು ಇದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡುತ್ತಾರೆ. ನಂತರ ಹಣಕ್ಕೆ ಬೇಡಿಕೆ ಇಡುತ್ತಾರೆ. ಹೀಗಾಗಿ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಮಕ್ಕಳನ್ನು ಹೊರಗೆ ಬಿಡಬೇಕಾದರೆ 10 ಸಲ ಯೋಚಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಬ್ಯಾಡರಹಳ್ಳಿ ಠಾಣೆಯ ಕೆಂಪೇಗೌಡ ಸರ್ಕಲ್ನಲ್ಲಿ ಅಪರಿಚಿತನ ಓಡಾಟ ಆತಂಕ ಸೃಷ್ಟಿಸಿದ್ದು, ಆತ 4 ವರ್ಷದ ಮಗುವನ್ನು ಒಂದು ಕಿಲೋಮೀಟರ್ ಹೊತ್ತುಕೊಂಡು ಹೋಗಿದ್ದ.

4 ವರ್ಷದ ಮಗುವನ್ನು ಒಂದು ಕಿಲೋಮೀಟರ್ ಹೊತ್ತುಕೊಂಡು ಹೋಗಿದ್ದ. ಕಟ್ಟಡ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರ 4 ವರ್ಷದ ಮಗುವನ್ನು ಹೊತ್ತಿಕೊಂಡು ಹೋಗಿದ್ದ. ಕದಂಬ ನಗರದಿಂದ ನೈಸ್ ರಸ್ತೆವರೆಗೂ ಹೊತ್ತಿಕೊಂಡು ಹೋಗುವ ವೇಳೆ ನೈಸ್ ರಸ್ತೆ ಬಳಿ ಬಾಲಕಿ ಕುಟುಂಬಸ್ಥರು ಮಗುವನ್ನು ನೋಡಿದ್ದಾರೆ.

ಮಗು ನೋಡಿ ಗಾಬರಿಯಾಗಿ ಬಿಡಿಸಲು ಬಂದಿದ್ದಾರೆ. ಮಗು ನೀಡದೆ ಅಪರಿಚಿತ ವ್ಯಕ್ತಿ ಹಲ್ಲೆಗೆ ಮುಂದಾಗಿದ್ದನಂತೆ. ತಕ್ಷಣ ಸ್ಥಳೀಯರ ಸಹಾಯದಿಂದ ಬಾಲಕಿ ಕುಟುಂಬಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಮಾನಸಿಕ ಅಸ್ವಸ್ಥ ಅಂತಾ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಿಟ್ಟು ಕಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳನ್ನು ಮಾತನಾಡಿಸಲು ಮುಂದಾಗುತ್ತಿದ್ದ. ನಂತರ ಒಂದು ಮಗುವನ್ನು ಅಟ್ಟಿಸಿಕೊಂಡು ಬಂದಿದ್ದ. ಆ ಮಗು ಆತನಿಂದ ತಪ್ಪಿಸಿ ಓಡಿ ಹೋಗಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಆಟವಾಡುತ್ತಿದ್ದ 4 ವರ್ಷದ ಹೆಣ್ಣು ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಹೊರಟಿದ್ದ. ಈ ವೇಳೆ ಮಗು ಕುಟುಂಬಸ್ಥರು ಮಗುವನ್ನು ಬಿಡಿಸಿಕೊಂಡಿದ್ದಾರೆ.

ನಂತರವೂ ಏರಿಯಾದಲ್ಲೇ ಸುತ್ತಾಡುತ್ತಿದ್ದ. ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಜೆ 6 ರಿಂದ 7 ಗಂಟೆಗೆ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಈ ವೇಳೆ ಮಾನಸಿಕ ಅಸ್ವಸ್ಥ ಅಂತಾ ಪೊಲೀಸರು ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ

60 ವರ್ಷದ ಅಂಕಲ್​ಗೆ ಹುಟ್ತು ಮದುವೆ ಆಸೆ; ಮದುವೆಯಾಗಲು ಬಂದಿದ್ದ ಆಂಟಿ ತಾಳಿ, ಆಭರಣ ಸಮೇತ ಎಸ್ಕೇಪ್‌

Army Chopper Crash: ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್​​ ದುರಂತ, ಈಗ ಪರಿಸ್ಥಿತಿ ಅಲ್ಲಿ ಹೇಗಿದೆ?